»   » ಪ್ರಸ್ತುತ ವಿದ್ಯಮಾನಕ್ಕೆ ಹೇಳಿ ಮಾಡಿಸಿದ ಸಿನಿಮಾ 'ಗುಳ್ಟು'!

ಪ್ರಸ್ತುತ ವಿದ್ಯಮಾನಕ್ಕೆ ಹೇಳಿ ಮಾಡಿಸಿದ ಸಿನಿಮಾ 'ಗುಳ್ಟು'!

Posted By:
Subscribe to Filmibeat Kannada
'ಗುಳ್ಟು' , ಪ್ರಸ್ತುತ ವಿದ್ಯಮಾನಕ್ಕೆ ಹೇಳಿ ಮಾಡಿಸಿದ ಸಿನಿಮಾ ! | Filmibeat Kannada

ಐದು ಕೋಟಿ ಫೇಸ್ ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆ ಆಗಿರುವ ಬಗ್ಗೆ ಕಳೆದ ಕೆಲವು ದಿನಗಳಿಂದ ಭಾರಿ ಚರ್ಚೆ ನಡೆಯುತ್ತಿದೆ. ಫೇಸ್ ಬುಕ್ ಖಾತೆದಾರರ ಮಾಹಿತಿಯನ್ನು ಕದ್ದು ಲೀಕ್ ಮಾಡಿರುವ ಆರೋಪ ಹೊತ್ತಿರುವ ಕೇಂಬ್ರಿಡ್ಜ್ ಅನಲಿಟಿಕಾ ಸಂಸ್ಥೆ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.

ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೋನಾಲ್ಡ್ ಟ್ರಂಪ್ ಅವರನ್ನು ಗೆಲ್ಲಿಸಲು ಫೇಸ್ ಬುಕ್ ಬಳಕೆದಾರರ ರಹಸ್ಯ ಮಾಹಿತಿಯನ್ನು ಅಕ್ರಮವಾಗಿ ಬಳಸಿಕೊಂಡಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಂತೂ ಕೋಲಾಹಲವೇ ಸೃಷ್ಟಿಯಾಗಿದೆ.

ಟ್ವಿಟ್ಟರ್ ನಲ್ಲಿ #DeleteFacebook ಟ್ರೆಂಡಿಂಗ್ ಆದ್ಮೇಲೆ, ಕೆಲವರು ಫೇಸ್ ಬುಕ್ ಗೆ ಗುಡ್ ಬೈ ಹೇಳಿದರು. ಇಂಟರ್ ನೆಟ್, ಡೇಟಾ ಹಾಗೂ ಕಂಟೆಂಟ್ ನ ಮಹತ್ವದ ಬಗ್ಗೆ ಅರಿವಿರುವವರು 'ಕೇಂಬ್ರಿಡ್ಜ್ ಅನಲಿಟಿಕಾ ಹಗರಣ'ದಿಂದ ಆಗಿರುವ ಅನಾಹುತ ಊಹಿಸಬಹುದು.

Kannada Movie Gultoo is based on Aadhar online data breach

ಆದ್ರೆ, ಫೇಸ್ ಬುಕ್ ನಲ್ಲಿ ಕದಿಯುವಂತಹ ರಹಸ್ಯ ಮಾಹಿತಿ ಏನಿರುತ್ತೆ? ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಅವರನ್ನ ಗೆಲ್ಲಿಸಲು ಫೇಸ್ ಬುಕ್ ಡೇಟಾ ಬ್ರೀಚ್ ನಿಂದ ಸಹಾಯ ಹೇಗೆ ಸಾಧ್ಯ.? ಎಂದು ತಲೆ ಕೆರ್ಕೊಂಡು, ಬಾಯಿ ಮೇಲೆ ಬೆರಳಿಟ್ಟುಕೊಳ್ಳುವವರು ಒಮ್ಮೆ 'ಗುಳ್ಟು' ಸಿನಿಮಾ ನೋಡಿ.

ಚಿತ್ರ ವಿಮರ್ಶೆ: ಸಾಮಾನ್ಯದವನಲ್ಲ ಈ 'ಗುಳ್ಟು'!

ವ್ಯಕ್ತಿಯ ಬಯೋಮೆಟ್ರಿಕ್ ಸೇರಿದಂತೆ ಖಾಸಗಿ ಮಾಹಿತಿ ಒಳಗೊಂಡಿರುವ ಆಧಾರ್ ಮಾಹಿತಿ ಸೋರಿಕೆ ಆಗಿರುವ ಬಗ್ಗೆ ಕೂಡ ನೀವು ವರದಿಗಳನ್ನ ಓದಿರಬಹುದು, ಕೇಳಿರಬಹುದು. ದೇಶದ ಕೋಟ್ಯಾಂತರ ಭಾರತೀಯರ ಆಧಾರ್ ಮಾಹಿತಿ ಲೀಕ್ ಆದರೆ ಏನಾಗಬಹುದು.? ಈ ಪ್ರಶ್ನೆಗೂ 'ಗುಳ್ಟು' ಚಿತ್ರದಲ್ಲಿ ಉತ್ತರವಿದೆ.

ಆನ್ ಲೈನ್ ನಲ್ಲಿ ಅತಿ ದೊಡ್ಡ ಮಾರ್ಕೆಟ್ ಇರುವ ಇಂದಿನ ಇಂಟರ್ ನೆಟ್ ಯುಗದಲ್ಲಿ 'ವ್ಯಕ್ತಿಯೊಬ್ಬನ ವೈಯುಕ್ತಿಕ ಮಾಹಿತಿಯ ಗೌಪ್ಯತೆ' ಎಷ್ಟು ಮುಖ್ಯ ಎಂಬುದನ್ನ ಸಾರಿ ಸಾರಿ ಹೇಳುವ ಸಿನಿಮಾ 'ಗುಳ್ಟು'.

ವ್ಯಕ್ತಿಯ ಪರ್ಸನಲ್ ಡೇಟಾ ಮೇಲೆ ಹ್ಯಾಕರ್ ಗಳು ಕಣ್ಣಿಡುವುದು ಯಾಕೆ.? ಡೇಟಾದಿಂದ ಯಾರಿಗೆ ಯಾವ ರೀತಿ ಲಾಭ ಆಗುತ್ತಿದೆ.? ಎಂಬುದರ ಬಗ್ಗೆ ಸಂಪೂರ್ಣ ಚಿತ್ರಣ 'ಗುಳ್ಟು'ದಲ್ಲಿದೆ. ಹೀಗಾಗಿ, ಪ್ರಸಕ್ತಿ ವಿದ್ಯಮಾನಕ್ಕೆ ಹೇಳಿ ಮಾಡಿಸಿದ ಸಿನಿಮಾ ಈ 'ಗುಳ್ಟು'.

English summary
Kannada Movie 'Gultoo' is based on Aadhar online data breach.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X