»   » ಈ ವಾರ ನೀವು ನೋಡಲೇಬೇಕಾದ ಚಿತ್ರ 'ಗುಳ್ಟು'

ಈ ವಾರ ನೀವು ನೋಡಲೇಬೇಕಾದ ಚಿತ್ರ 'ಗುಳ್ಟು'

Posted By:
Subscribe to Filmibeat Kannada
ಈ ವಾರ ನೀವು ನೋಡಲೇಬೇಕಾದ ಚಿತ್ರ 'ಗುಳ್ಟು' | Filmibeat Kannada

''ನೀವು ಬೇರೆ ಯಾವ ಸಿನಿಮಾ ನೋಡದೇ ಇದ್ದರೂ ಪರವಾಗಿಲ್ಲ. ಗುಳ್ಟು ಅಂತ ಒಂದು ಸಿನಿಮಾ ಇದೆ, ಅದನ್ನ ನೋಡಲೇಬೇಕು''.....ಈ ಡೈಲಾಗ್ ಹೇಳೋದು ಲೂಸಿಯಾ ಪವನ್ ಕುಮಾರ್. 'ಗುಳ್ಟು' ಚಿತ್ರದ ಟ್ರೈಲರ್ ಸೂಪರ್ ಹಿಟ್ ಆಗಿದ್ದು, ಈ ಡೈಲಾಗ್ ವೈರಲ್ ಆಗಿದೆ.

ಪವನ್ ಹೇಳುವವಾಗೆ 'ಗುಳ್ಟು' ಚಿತ್ರವನ್ನ ನೋಡೋದು ಮಿಸ್ ಮಾಡ್ಕೋಬೇಡಿ. ಈ ಸಿನಿಮಾ ಇದೇ ವಾರ (ಮಾರ್ಚ್ 30) ರಾಜ್ಯಾದಂತ್ಯ ತೆರೆಗೆ ಬರ್ತಿದೆ. ಈಗಾಗಲೇ ಟ್ರೈಲರ್ ಮೂಲಕ ಹೊಸ ರೀತಿಯ ಕುತೂಹಲ ಹುಟ್ಟಿಸಿರುವ ಸಿನಿಮಾ ಇದಾಗಿದ್ದು, ಎಲ್ಲರೂ ಈ ಚಿತ್ರವನ್ನ ನೋಡಲು ಕಾಯುತ್ತಿದ್ದಾರೆ.

ಸಿನಿಮಾ ಸ್ಟಾರ್ ಗಳಿಗೂ ಭಯ ಹುಟ್ಟಿಸಿದ ಗುಳ್ಟು

'ಗುಳ್ಳು' ರೆಗ್ಯೂಲರ್ ಸಿನಿಮಾ ಅಲ್ಲ. ಕ್ಲಾಸ್ ಮತ್ತು ಮಾಸ್ ಸಿನಿಮಾಗಳ ನಡುವೆ ಬರ್ತಿರುವ ವಿಶೇಷವಾದ ಚಿತ್ರಕಥೆ. ಈಗಾಗಲೇ ಇದು ಟ್ರೈಲರ್ ನಲ್ಲಿ ಸಾಬೀತಾಗಿದ್ದು, ಯಾವುದೇ ಕಟ್ ಇಲ್ಲದೇ 'ಯು/ಎ' ಪ್ರಮಾಣಪತ್ರ ಪಡೆದುಕೊಂಡಿದೆ.

Kannada movie gultoo releaseing on march 30th

ಇದೊಂದು ತಂತ್ರಜ್ಞಾನದ ಸುತ್ತ ನಡೆಯುವ ಕಥೆಯಾಗಿದ್ದು, ಇಂದಿನ ತಂತ್ರಜ್ಞಾನವನ್ನ ಜನರು ಹೇಗೆಲ್ಲ ಬಳಸಿಕೊಳ್ಳುತ್ತಿದ್ದಾರೆ ಎಂಬುದನ್ನ ಥ್ರಿಲ್ಲಿಂಗ್ ಆಗಿ ಹೇಳಲು ಹೊರಟಿದೆ ಚಿತ್ರತಂಡ. ಇಂದಿನ ಯುಗದಲ್ಲಿ ಯುವ ಜನಾಂಗ ಡಿಜಿಟಲ್ ಮಾಧ್ಯಮಕ್ಕೆ ಹೆಚ್ಚು ಅಡಿಕ್ಟ್ ಆಗುತ್ತಿದೆ. ಅದರಲ್ಲಿ ಸಕಾರಾತ್ಮಕ ಜತೆಗೆ ನಕಾರಾತ್ಮಕ ಅಂಶಗಳೂ ಇವೆ. ಇದನ್ನೇ ಹೈಲೈಟ್ ಆಗಿಸಿಕೊಂಡು ನಿರ್ದೇಶಕರು ಸಿನಿಮಾ ಮಾಡಿದ್ದಾರೆ.

'ಗುಳ್ಟು' ಎಂದಾಕ್ಷಣ ಇದು ಸೋನು ಗೌಡ ಅಭಿನಯದ ಸಿನಿಮಾ ಎಂಬ ಮಾತಿದೆ. ಹೌದು, ಈ ಚಿತ್ರದ ಸ್ಟಾರ್ ಆಕರ್ಷಣೆ ನಟಿ ಸೋನು ಗೌಡ. ಸೋನುಗೆ ಇಳಕಲ್ ಮೂಲಕ ನವೀನ್ ಶಂಕರ್‌ ನಾಯಕನಾಗಿ ಸಾಥ್ ಕೊಟ್ಟಿದ್ದಾರೆ.

'ಗುಳ್ಟು' ಆಗಮನಕ್ಕೆ ದಿನಾಂಕ ನಿಗದಿ.!

ಇನ್ನುಳಿದಂತೆ ಚಿತ್ರದಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವುದು ಅವಿನಾಶ್ ಮತ್ತು ರಂಗಾಯಣ ರಘು. ಅವಿನಾಶ್ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಮಿಂಚಿದ್ದಾರೆ. ರಂಗಾಯಣ ರಘು ಮುಖ್ಯಮಂತ್ರಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನು ಟೆಕ್ಕಿಯಾಗಿ ನಿರ್ದೇಶಕ ಪವನ್ ಕುಮಾರ್ ಕಾಣಿಸಿಕೊಂಡಿದ್ದಾರೆ.

Kannada movie gultoo releaseing on march 30th

ಅಂದ್ಹಾಗೆ, ಜನಾರ್ಧನ್ ಚಿಕ್ಕಣ್ಣ ಎಂಬುವವರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಪ್ರಶಾಂತ್ ರೆಡ್ಡಿ ಮತ್ತು ದೇವರಾಜ್ ಆರ್ ಈ ಚಿತ್ರಕ್ಕೆ ಬಂಡವಾಳ ಹಾಕಿ ನಿರ್ಮಾಣ ಮಾಡಿದ್ದಾರೆ. ಅಮಿತ್ ಆನಂದ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ಒಂದಕ್ಕಿಂತ ಮತ್ತೊಂದು ಹಾಡುಗಳು ಮೋಡಿ ಮಾಡಿದೆ. ಈ ಎಲ್ಲ ಅಂಶಗಳನ್ನ ಮಿಶ್ರಣ ಮಾಡಿರುವ 'ಗುಳ್ಟು' ಚಿತ್ರವನ್ನ ಮಾರ್ಚ್ 30ರಂದು ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ.

English summary
Kannada movie Gultoo has been certified "U/A" without any cuts. The countdown to the release begins. Gultoo will hiting screen on march 30th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X