»   » ಜನವರಿ 26 ರಂದು 'ಅಲ್ಲಮ' ತೆರೆಗೆ!

ಜನವರಿ 26 ರಂದು 'ಅಲ್ಲಮ' ತೆರೆಗೆ!

Posted By:
Subscribe to Filmibeat Kannada

12ನೇ ಶತಮಾನದ ವಚನಕಾರ ಅಲ್ಲಮ ಪ್ರಭು ರವರ ಜೀವನ ಚರಿತ್ರೆ ಆಧಾರಿತ 'ಅಲ್ಲಮ' ರಿಲೀಸ್ ಗೆ ರೆಡಿಯಾಗಿದ್ದು, ಇದೇ ಇದೇ ತಿಂಗಳ 26ರಂದು ಚಿತ್ರಮಂದಿರಕ್ಕೆ ಬರಲಿದೆ.

ಯಜಮಾನ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಶ್ರೀಹರಿ.ಎಲ್.ಖೋಡೆ ಅವರು ನಿರ್ಮಿಸಿರುವ 'ಅಲ್ಲಮ', ಅಲ್ಲಮ ಪ್ರಭುವಿನ ಬದುಕು-ವಚನಗಳ ಕುರಿತಾಗಿದೆ. ಈಗಾಗಲೇ ಸೆನ್ಸಾರ್ ಮಂಡಳಿ ಚಿತ್ರವನ್ನ ವೀಕ್ಷಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದಲ್ಲದೇ, 'ಯು' ಪ್ರಮಾಣ ಪತ್ರವನ್ನ ನೀಡಿದೆ.[47ನೇ ಗೋವಾ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕನ್ನಡದ 3 ಚಿತ್ರಗಳು]

Kannada Movie has Releasing on January 26th

ಸದಭಿರುಚಿಯ ಚಿತ್ರಗಳ ನಿರ್ದೇಶಕ ಟಿ.ಎಸ್.ನಾಗಾಭರಣ ಅವರು ಆಕ್ಷನ್ ಕಟ್ ಹೇಳಿರುವ 'ಅಲ್ಲಮ' ಚಿತ್ರದಲ್ಲಿ ಶೀರ್ಷಿಕೆ ಪಾತ್ರ ನಿರ್ವಹಿಸಿರುವುದು ನಟ ಧನಂಜಯ್.[ಚಿತ್ರಗಳು: 'ಅಲ್ಲಮ'ನಿಗೆ ಪರಕಾಯ ಪ್ರವೇಶ ಮಾಡಿದ ಧನಂಜಯ್]

'ಅಲ್ಲಮ' ಪಾತ್ರಕ್ಕೋಸ್ಕರ 18 ತಿಂಗಳುಗಳ ಕಾಲ ಮೃದಂಗ ನುಡಿಸುವುದನ್ನು ಕಲಿತಿದ್ದಾರೆ. ಸಂಗೀತ ಮಾಂತ್ರಿಕ ಬಾಪು ಪದ್ಮನಾಭ ಅವರ ಬಳಿ ನಟ ಧನಂಜಯ್ ಮದ್ದಳೆ ಬಾರಿಸುವುದನ್ನೂ ಕರಗತ ಮಾಡಿಕೊಂಡಿದ್ದಾರೆ. ನೃತ್ಯ ಸಂಯೋಜಕರಾದ ಮದನ್-ಹರಿಣಿ ಕೊರಿಯೋಗ್ರಫಿಯಲ್ಲಿ ಧನಂಜಯ್ ಮದ್ದಳೆ ಹಿಡಿದು ಅದ್ಭುತವಾಗಿ ನೃತ್ಯ ಮಾಡಿದ್ದಾರೆ.['ಅಲ್ಲಮ'ನಿಗಾಗಿ ಮದ್ದಳೆ ಕಲಿಯಲು ಧನಂಜಯ್ ಕಸರತ್ತು]

Kannada Movie has Releasing on January 26th

ನಾಯಕಿ ಪಾತ್ರದಲ್ಲಿ ನಟಿ ಮೇಘನಾ ರಾಜ್ ಕಾಣಿಸಿಕೊಂಡಿದ್ದಾರೆ. ಸುಮಾರು ನಾಲ್ಕು ವರ್ಷಗಳ ಹಿಂದೆ ಸೆಟ್ಟೇರಿದ್ದ 'ಅಲ್ಲಮ' ಚಿತ್ರ ಕೊನೆಗೂ ಬಿಡುಗಡೆ ಆಗುತ್ತಿದೆ. ಇದೇ ತಿಂಗಳ 26ರಂದು ರಾಜ್ಯಾದ್ಯಂತ 'ಅಲ್ಲಮ' ಚಿತ್ರ ತೆರೆಗೆ ಬರಲಿದೆ.

English summary
Kannada Movie 'Allama' has Releasing on January 26th All Over Karnataka. 'Allama' features Dhananjay, Meghana Raj in the lead role. The movie is directed by T.S.Nagabharana.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada