»   » ಶೂಟಿಂಗ್ ಹಂತದಲ್ಲೇ ರೆಕಾರ್ಡ್ ಬ್ರೇಕ್ ಮಾಡಿದ ಕಿಚ್ಚನ 'ಹೆಬ್ಬುಲಿ'

ಶೂಟಿಂಗ್ ಹಂತದಲ್ಲೇ ರೆಕಾರ್ಡ್ ಬ್ರೇಕ್ ಮಾಡಿದ ಕಿಚ್ಚನ 'ಹೆಬ್ಬುಲಿ'

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅಂದ್ರೇನೇ ಹಾಗೆ ತಮ್ಮ ಪ್ರತೀ ಸಿನಿಮಾದಲ್ಲಿ ಕೂಡ ಒಂದಲ್ಲಾ ಒಂದು ರೆಕಾರ್ಡ್ ಬ್ರೇಕ್ ಮಾಡ್ತಾನೆ ಇರುತ್ತಾರೆ. ಈ ಬಾರಿ 'ಹೆಬ್ಬುಲಿ' ಚಿತ್ರ ಶೂಟಿಂಗ್ ಹಂತದಲ್ಲಿರುವಾಗಲೇ ಅವರ ಅಭಿಮಾನಿಗಳಿಗೆ ಬ್ರೇಕಿಂಗ್ ಸುದ್ದಿ ಕೊಟ್ಟಿದ್ದಾರೆ.

ಹೌದು 'ಗಜಕೇಸರಿ' ಚಿತ್ರದ ಖ್ಯಾತಿಯ ನಿರ್ದೇಶಕ ಎಸ್.ಕೃಷ್ಣ ಅವರು ನಿರ್ದೇಶನ ಮಾಡುತ್ತಿರುವ 'ಹೆಬ್ಬುಲಿ' ಚಿತ್ರ ಶೂಟಿಂಗ್ ಹಂತದಲ್ಲಿರುವಾಗಲೇ ಅದರ ಹಿಂದಿ ಡಬ್ಬಿಂಗ್ ಹಕ್ಕು ಭರ್ಜರಿ ಮೊತ್ತಕ್ಕೆ ಈಗಾಗಲೇ ಸೋಲ್ಡ್ ಔಟ್ ಆಗಿದೆ.[ವೈರಲ್ ಆಗಿದೆ 'ಹೆಬ್ಬುಲಿ' ಕಿಚ್ಚ ಸುದೀಪ್ ಹೇರ್ ಸ್ಟೈಲ್]


Kannada Movie 'Hebbuli' hindi dubbing rights sold out for 2.12 crores

ಯಾರು ಖರೀದಿ ಮಾಡಿರೋದು ಅನ್ನೋ ಮಾಹಿತಿ ಇನ್ನೂ ಲಭ್ಯವಾಗಿಲ್ಲವಾದರೂ, ಬರೋಬ್ಬರಿ 2 ಕೋಟಿ 12 ಲಕ್ಷ ರೂಪಾಯಿಗೆ 'ಹೆಬ್ಬುಲಿ' ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕು ಸೋಲ್ಡ್ ಔಟ್ ಆಗಿದೆ.


ಈಗಾಗಲೇ ಬಿಡುಗಡೆ ಆಗಿರುವ ಅನಧೀಕೃತ 'ಹೆಬ್ಬುಲಿ' ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಸಾಕಷ್ಟು ರೆಸ್ಪಾನ್ಸ್ ಗಿಟ್ಟಿಸಿಕೊಂಡಿದ್ದು, ಸುದೀಪ್ ಅವರ ವಿಭಿನ್ನ ಹೇರ್ ಸ್ಟೈಲ್ ಗಾಂಧಿನಗರದಲ್ಲಿ ಸದ್ಯಕ್ಕೆ ಟಾಕ್ ಆಫ್ ದ ಟಾಪಿಕ್ ಆಗಿದೆ.['ಹೆಬ್ಬುಲಿ' ಫಸ್ಟ್ ಲುಕ್ ಔಟ್: ಹೊಸ ಅವತಾರದಲ್ಲಿ ಕಿಚ್ಚ ಸುದೀಪ್]


Kannada Movie 'Hebbuli' hindi dubbing rights sold out for 2.12 crores

ಈ ಚಿತ್ರದಲ್ಲಿ ಸುದೀಪ್ ಅವರು ಖಡಕ್ ಆರ್ಮಿ ಅಧಿಕಾರಿ ಆಗಿ ಮಿಂಚಿದ್ದು, ಇವರ ಅಣ್ಣನ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮಿಂಚಿದ್ದಾರೆ. ಸುದೀಪ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಮೊಟ್ಟ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ನಟಿ ಅಮಲಾ ಪೌಲ್ ಅವರು ಎಂಟ್ರಿ ಕೊಟ್ಟಿದ್ದಾರೆ.['ಹೆಬ್ಬುಲಿ'ಯಲ್ಲಿ ಅಮಲಾ ಮಾಡಲಿರುವ ಪಾತ್ರ ಏನಿರಬಹುದು?]


ಈ ಮೊದಲು ಫಸ್ಟ್ ಲುಕ್ ಪೋಸ್ಟರ್ ಮೂಲಕ ಇದೀಗ ಹಿಂದಿ ಡಬ್ಬಿಂಗ್ ಹಕ್ಕು ಸೋಲ್ಡ್ ಔಟ್ ಆಗಿದ್ದು. ಒಟ್ನಲ್ಲಿ ರೆಕಾರ್ಡ್ ಮೇಲೆ ರೆಕಾರ್ಡ್ ಮಾಡುತ್ತಿದೆ ಕಿಚ್ಚ ಸುದೀಪ್ ಅವರ 'ಹೆಬ್ಬುಲಿ'.

English summary
Kannada Movie 'Hebbuli' hindi dubbing rights sold out for 2 Crore 12 Lakhs. Kannada Actor Sudeep, Kannada Actor ravichandran, Actress Amala Paul in the lead role. The movie is directed by S.Krishna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada