»   » 'ಹೀಗೊಂದು ದಿನ' ಮುಂದೋಗಿದೆ: 'ಬದುಕೇ ಅಚ್ಚರಿ' ಹಾಡು ಮೋಡಿ ಮಾಡಿದೆ.!

'ಹೀಗೊಂದು ದಿನ' ಮುಂದೋಗಿದೆ: 'ಬದುಕೇ ಅಚ್ಚರಿ' ಹಾಡು ಮೋಡಿ ಮಾಡಿದೆ.!

Posted By:
Subscribe to Filmibeat Kannada

ಎಲ್ಲ ಅಂದುಕೊಂಡಂತೆ ಆಗಿದ್ದರೇ ವಿಶ್ವ ಮಹಿಳಾ ದಿನದ ವಿಶೇಷವಾಗಿ 'ಹೀಗೊಂದು ದಿನ' ಸಿನಿಮಾ ಈ ವಾರ ಬಿಡುಗಡೆಯಾಗಬೇಕಿತ್ತು. ಯಾಕಂದ್ರೆ ಇದು ಮಹಿಳಾ ಪ್ರಧಾನ ಸಿನಿಮಾ. ಅದೇ ದಿನ ರಿಲೀಸ್ ಮಾಡಬೇಕೆಂದು ಚಿತ್ರದ ನಿರ್ಮಾಪಕರು ಖರ್ಚಿನ ಬಗ್ಗೆ ತಲೆಕೆಡಿಸಿಕೊಳ್ಳದೆ ಸಿನಿಮಾ ತಯಾರಿಸಿದ್ದರು.

ದುರಾದೃಷ್ಟವಶಾತ್ ಮಾರ್ಚ್ 9ಕ್ಕೆ ಈ ಸಿನಿಮಾ ಬರ್ತಿಲ್ಲ. ಹೀಗಾಗಿ, ಪ್ರೇಕ್ಷಕರಂತೆ ಚಿತ್ರತಂಡವೂ ನಿರಾಸೆಯಾಗಿದೆ. ಸದ್ಯಕ್ಕೆ 'ಹೀಗೊಂದು ದಿನ' ಚಿತ್ರದ ಬಿಡುಗಡೆಯ ದಿನಾಂಕವನ್ನ ಮುಂದೂಡಲಾಗಿದೆ. ಸದ್ಯದಲ್ಲೇ ಹೊಸ ಬಿಡುಗಡೆ ದಿನಾಂಕವನ್ನ ಚಿತ್ರತಂಡ ಘೋಷಿಸಲಿದೆ.

ಸಿನಿಮಾ ತೆರೆಕಂಡಿಲ್ಲ ಎಂದು ನಿರಾಸೆಯಾಗಿರುವ ಅಭಿಮಾನಿಗಳಿಗಾಗಿ ಚಿತ್ರದ 'ಬದುಕೇ ಅಚ್ಚರಿ' ಎಂಬ ಹಾಡನ್ನ ಬಿಡುಗಡೆ ಮಾಡಿದೆ. ರಾಮಕೃಷ್ಣ ರಣಗಟ್ಟಿ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಅಭಿಲಾಷ್ ಗುಪ್ತಾ ಸಂಗೀತ ನೀಡಿ ಸ್ವತಃ ಹಾಡಿದ್ದಾರೆ. ಈ ರೊಮ್ಯಾಂಟಿಕ್ ಹಾಡು ಈಗ ಮೋಡಿ ಮಾಡುತ್ತಿದೆ.

Kannada movie Heegondu Dina postponed

ಸಿನಿಮಾ ಮುಂದೂಡಲು ಕಾರಣ
''ಚಲನಚಿತ್ರ ಮಂಡಳಿಯಿಂದ 9 ರಂದು ಯಾವುದೇ ಹೊಸ ಸಿನಿಮಾಗಳು ಬಿಡುಗಡೆ ಮಾಡಬಾರದೆಂದು ಆಗ್ರಹಿಸಿದೆ. ಸ್ಯಾಟಲೈಟ್ ಮೂಲಕ ಸಿನಿಮಾ ಬಿಡುಗಡೆ ಮಾಡುವ ಕಂಪನಿಗಳ ವಿರುಧ್ದ ಚಲನಚಿತ್ರ ಮಂಡಳಿಯು ಪ್ರತಿಭಟನೆ ಮಾಡುತ್ತಿದೆ. ಸ್ಯಾಟಲೈಟ್ ಕಂಪನಿಗಳ ದುಬಾರಿ ಶುಲ್ಕದ ಬಗ್ಗೆ ನಿರ್ಮಾಪಕರಿಗೆ ಅನುಕೂಲವಾಗಲು ಈ ಪ್ರತಿಭಟನೆ ಮಾಡಲಾಗುತ್ತಿದೆ. ಆದ್ದರಿಂದ ಸಿನಿಮಾ ಮುಂದೂಡಲಾಗಿದೆ.

Kannada movie Heegondu Dina postponed

ಅದನ್ನ ಹೊರತುಪಡಿಸಿದರೇ, ಚಿತ್ರದ ಮೇಲೆ ಭರವಸೆ ಹೆಚ್ಚಿದೆ. ಇದೊಂದು ಅನ್ಕಟ್ ಮಾದರಿಯ ಚಿತ್ರವಾಗಿದ್ದು, ಟ್ರೈಲರ್ ಮೂಲಕ ಗಮನ ಸೆಳೆಯುತ್ತಿದೆ. ಸಿಂಧು ಲೋಕನಾಥ್ ಮುಖ್ಯ ಪಾತ್ರ ನಿರ್ವಹಿಸಿದ್ದರೇ, 'ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ'ಯ ಪ್ರವೀಣ್, ಹಿರಿಯ ನಟಿ ಗಿರಿಜಾ ಲೋಕೇಶ್, ಪದ್ಮಜಾ ರಾವ್, ಗುರುಪ್ರಸಾದ್, ಶೋಭರಾಜ್, ಮಿತ್ರ, ಗಿರಿ, ಬಾಲಾಜಿ ಮನೋಹರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

Kannada movie Heegondu Dina postponed

ವಿಕ್ರಮ್ ಯೋಗಾನಂದ್ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದು, ವಿಕಾಸ್ ಕಥೆಯನ್ನು ಹೆಣೆದಿದ್ದಾರೆ. ನಿರ್ಮಾಪಕ ಚಂದ್ರಶೇಖರ್ ಬಂಡವಾಳ ಹೂಡಿದ್ದು, ಅಭಿಲಾಷ್ ಗುಪ್ತಾ ಸಂಗೀತ ಸಂಯೋಜನೆ ಮಾಡಿದ್ದಾರೆ.

English summary
Kannada actress sindhu loknath starrer kannada movie Heegondu Dina is ready to release on march. the movie directed by vikram yogananda.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada