»   » ಎನ್ ಓಂ ಪ್ರಕಾಶ್ ರಾವ್ 'ಹುಚ್ಚ 2' ಎಲ್ಲಿಗೆ ಬಂತು?

ಎನ್ ಓಂ ಪ್ರಕಾಶ್ ರಾವ್ 'ಹುಚ್ಚ 2' ಎಲ್ಲಿಗೆ ಬಂತು?

Posted By:
Subscribe to Filmibeat Kannada

ನುರಿತ, ಗಾಂಧಿನಗರದ ಎದೆ ಬಡಿತ ಅರಿತ ನಿರ್ದೇಶಕ ಎನ್ ಓಂ ಪ್ರಕಾಶ್ ರಾವ್. ಸಾಹಸ ಹಾಗೂ ಕುಟುಂಬ ಸಮೇತ ನೋಡುವಂಥಾ ಸಿನಿಮಾ ಮಾಡುವುದರಲ್ಲಿ ನಿಸ್ಸೀಮರು. ಅವರದ್ದೇ ನಿರ್ದೇಶನದ 'ಹುಚ್ಚ 2' ಸಿನಿಮಾ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ.

ಈ ಹಿಂದೆ ಬಂದ ಕಿಚ್ಚ ಸುದೀಪ್ ಅವರ 'ಹುಚ್ಚ' (ಓಂಪ್ರಕಾಶ್ ರಾವ್ ಅವರೇ ನಿರ್ದೇಶಕರು) ಸಿನಿಮಾಕ್ಕೂ 'ಹುಚ್ಚ 2'ಗೂ ಯಾವುದೇ ಸಂಬಂಧ ಇಲ್ಲ. ತಮಿಳಿನಲ್ಲಿ ಒಂದು ಸಾಕ್ಷ್ಯಚಿತ್ರ ಆಗಿ ಬಂದ 'ರಾಮ್' (ಜೀವಾ ಅಭಿನಯ) ಚಿತ್ರಕ್ಕೆ ಕನ್ನಡದಲ್ಲಿ ರಾವ್ ಅವರು ಒಂದು ಕಮರ್ಶಿಯಲ್ ಸಿನಿಮಾದ ಟಚ್ ಕೊಟ್ಟಿದ್ದಾರೆ.

ರಮ್ಯವಾದ ಸ್ಥಳ ಜೋಗ ಜಲಪಾತ, ಸಾಗರ ಸುತ್ತಮುತ್ತ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕೆ ಹೊರಟಿದ್ದಾರೆ ರಾವ್. 'ಕಟ್ಟೆ' ಸಿನಿಮಾದ ನಿರ್ಮಾಪಕ ಉಮೇಶ್ ರೆಡ್ಡಿ ಅವರೇ ಈ ಚಿತ್ರದ ನಿರ್ಮಾಪಕರು. 40 ದಿವಸಗಳ ಚಿತ್ರೀಕರಣ ಈಗ ಸಂಪೂರ್ಣವಾಗಿದೆ. [ಹುಚ್ಚ 2 ನಾಯಕಿ ಶ್ರಾವ್ಯಾಗೆ ಹೀರೋ ಸಿಕ್ಕಿದ ಕಣ್ರಿ!]

Kannada movie 'Huchcha 2' progressing in climax

ಕ್ಲೈಮ್ಯಾಕ್ಸ್ ಪೂರ್ತಿ ಆದ ನಂತರ ಚಿತ್ರದ ಧ್ವನಿಸುರುಳಿ ಬಿಡುಗಡೆ ಹಾಗೂ ವರಮಹಾಲಕ್ಷ್ಮಿ ಹಬ್ಬಕ್ಕೆ 'ಹುಚ್ಚ 2' ತೆರೆಯ ಮೇಲೆ ಬರಲಿದೆ ಎಂದು ರಾವ್ ತಿಳಿಸಿದ್ದಾರೆ. ಮದರಂಗಿ ಕೃಷ್ಣ ಜೊತೆ ಓಂ ಪ್ರಕಾಶ್ ರಾವ್ ಅವರ ಮಗಳು ಶ್ರಾವ್ಯ ನಾಯಕಿ.

ಚಿತ್ರದ ಪಾತ್ರವರ್ಗದಲ್ಲಿ ಸಾಯಿಕುಮಾರ್, ಅವಿನಾಶ್, ಮಾಳವಿಕಾ ಅವಿನಾಶ್, ತುಳು ನಟ ಅಶ್ವಿನ್ ಮುಖ್ಯ ತಾರಾಗಣದಲ್ಲಿ ಇದ್ದಾರೆ. ರವಿಕುಮಾರ್ ಛಾಯಾಗ್ರಹಣ, ಅನೂಪ್ ಸೀಳಿನ್ ಅವರ ಸಂಗೀತ ನಿರ್ದೇಶನ 'ಹುಚ್ಚ 2' ಚಿತ್ರಕ್ಕಿದೆ.

2001ರಲ್ಲಿ ಬಿಡುಗಡೆಯಾದ 'ಹುಚ್ಚ' ಚಿತ್ರದಲ್ಲಿ ಕಿಚ್ಚ ಸುದೀಪ್ ಹಾಗೂ ರೇಖಾ ವೇದವ್ಯಾಸ್ ಮುಖ್ಯ ಭೂಮಿಕೆಯಲ್ಲಿದ್ದರು. ಸುದೀಪ್ ಅವರ ವೃತ್ತಿ ಬದುಕಿನಲ್ಲಿ ಮಹತ್ತರ ತಿರುವು ನೀಡಿದ ಚಿತ್ರ. ತಮಿಳಿನ 'ಸೇತು' ರೀಮೇಕ್ ಚಿತ್ರ ಇದಾಗಿತ್ತು. ಇದೀಗ 'ಹುಚ್ಚ 2' ಚಿತ್ರದ ಬಗ್ಗೆಯೂ ಅದೇ ರೀತಿಯ ನಿರೀಕ್ಷೆಗಳಿವೆ. (ಫಿಲ್ಮಿಬೀಟ್ ಕನ್ನಡ)

English summary
N Om Prakash Rao's forthcoming Kannada film titled 'Huchcha 2' is progressing with its climax scenes shoot in Jog falls and Sagara locales. Madarangi Krishna and Shravya are in lead roles.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada