»   » ಲಂಡನ್ ನಲ್ಲಿ ಪ್ರಕಾಶ್ ರೈ 'ರಾಮಾಯಣ'

ಲಂಡನ್ ನಲ್ಲಿ ಪ್ರಕಾಶ್ ರೈ 'ರಾಮಾಯಣ'

By: Bharath Kumar
Subscribe to Filmibeat Kannada

ಪ್ರಕಾಶ್ ರೈ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ 'ಇದೊಳ್ಳೆ ರಾಮಾಯಣ' ಚಿತ್ರಕ್ಕೆ ಸ್ಯಾಂಡಲ್ ವುಡ್ ಪ್ರೇಕ್ಷಕರಿಂದ ಒಳ್ಳೆ 'ಸದಭಿರುಚಿಯ ಚಿತ್ರ' ಎಂಬ ಪ್ರಶಂಸೆ ಸಿಕ್ಕಿತ್ತು. ಕೇವಲ ಪ್ರೇಕ್ಷಕರು ಮಾತ್ರವಲ್ಲ ವಿಮರ್ಶಕರು ಕೂಡ ಈ ಕ್ಲಾಸಿಕ್ ರಾಮಾಯಣಕ್ಕೆ ಮನಸೋತ್ತಿದ್ದರು.

ಕನ್ನಡ ಹಾಗೂ ತೆಲುಗಿನಲ್ಲಿ ತಯಾರಾಗಿದ್ದ 'ಇದೊಳ್ಳೆ ರಾಮಾಯಣ' ಅಕ್ಟೋಬರ್ 7 ರಂದು ಏಕಕಾಲದಲ್ಲಿ ಬಿಡುಗಡೆಯಾಗಿತ್ತು. ಹೀಗೆ, ಕರ್ನಾಟಕದಲ್ಲಿ ಮೋಡಿ ಮಾಡಿದ್ದ 'ರೈ ರಾಮಾಯಣ', ಈಗ ಲಂಡನ್ ಗೆ ಲಗ್ಗೆಯಿಟ್ಟಿದೆ.['ಇದೊಳ್ಳೆ ರಾಮಾಯಣ' ಅಂತ ತಲೆ ಚಚ್ಚಿಕೊಂಡ್ರಾ ವಿಮರ್ಶಕರು?]

Kannada Movie 'Idolle Ramayana' premiere in London

ಪ್ರಕಾಶ್ ರೈ, ಪ್ರಿಯಾಮಣಿ, ಅಚ್ಯುತ್ ಕುಮಾರ್, ರಂಗಾಯಣ ರಘು ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರವನ್ನ ಪ್ರಕಾಶ್ ರೈ ನಿರ್ದೇಶನದ ಜೊತೆಗೆ ತಮ್ಮ ಬ್ಯಾನರ್ ನಲ್ಲಿ ನಿರ್ಮಾಣ ಕೂಡ ಮಾಡಿದ್ದರು.

Kannada Movie 'Idolle Ramayana' premiere in London

ದಸಾರ ಹಬ್ಬದ ಪ್ರಯುಕ್ತ ಕನ್ನಡಿಗರ ಮುಂದೆ ಬಂದಿದ್ದ ಈ ಸಿನಿಮಾ, ಈಗ ದೀಪಾವಳಿ ಪ್ರಯುಕ್ತ ಲಂಡನ್ ಪ್ರೇಕ್ಷಕರ ಮುಂದೆ ಬರ್ತಿದೆ. ಹೌದು, ಇದೇ ಅಕ್ಟೋಬರ್ 29 ಹಾಗೂ 30 ರಂದು ಲಂಡನ್ ಚಿತ್ರಮಂದಿರದಲ್ಲಿ 'ಇದೊಳ್ಳೆ ರಾಮಾಯಣ' ಪ್ರದರ್ಶನವಾಗುತ್ತಿದೆ.

Kannada Movie 'Idolle Ramayana' premiere in London

'ಯುರೋಪ್' ಹಾಗೂ 'ಯು.ಕೆ' ದೇಶಗಳಲ್ಲಿ ಪ್ರಕಾಶ್ ರೈ ಅವರ 'ಇದೊಳ್ಳೆ ರಾಮಾಯಣ' ಪ್ರೀಮಿಯರ್ ಶೋ ಆಗ್ತಿದೆ. ವಿಶೇಷ ಅಂದ್ರೆ ಅಕ್ಟೋಬರ್ 30 ರಂದು ಸ್ವತಃ ಪ್ರಕಾಶ್ ರೈ ಅವರು, ತಮ್ಮ ಕುಟುಂಬ ಸಮೇತ ಲಂಡನ್ ಗೆ ಭೇಟಿ ನೀಡಲಿದ್ದಾರೆ ಎಂದು ಅಲ್ಲಿನ ಅಯೋಜಕರು ಸ್ವಷ್ಟಪಡಿಸಿದ್ದಾರೆ.['ರೈ' ರಾಮಾಯಣಕ್ಕೆ ಒನ್ ಇಂಡಿಯಾ ಓದುಗರಿಂದ ಪರ-ವಿರೋಧ ಕಾಮೆಂಟ್]

Kannada Movie 'Idolle Ramayana' premiere in London

'ಸ್ಯಾಂಡಲ್ ವುಡ್ ಎಂಟರ್ ಟೈನ್ ಮೆಂಟ್ ಯು.ಕೆ' ಹಾಗೂ 'ಜಾಲಿ ಹಿಟ್ಸ್ ಇಂಟರ್ ನ್ಯಾಷನಲ್' ಅವರ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಇನ್ನು ಅಕ್ಟೋಬರ್ 30 ರಂದು ಮದ್ಯಾಹ್ನ 'ಲಂಡನ್ ಬೊಲಿನ್ ಸಿನಿಮಾ' ಹಾಲ್ ನಲ್ಲಿ 'ಮೀಟ್ ಅಂಡ್ ಗ್ರೀಟ್ ಪ್ರಕಾಶ್ ರಾಜು' ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರಕಾಶ್ ರೈ ಅವರು ಲಂಡನ್ ಆಡಿಯೆನ್ಸ್ ಜೊತೆ ಸಂವಾದ ಕೂಡ ನಡೆಸಲಿದ್ದಾರೆ.

English summary
'Sandalwood Entertainment UK Presents', 'Idolle Ramayana' Premier with Prakash Raj at london. show on 30th Oct 3 pm in Boleyn cinemas. The film starrer Prakash Raj and Priyamani in lead roles.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada