»   » ಅಂದು 'ಅಮೆರಿಕಾ! ಅಮೆರಿಕಾ!!' ಇಂದು 'ಇಷ್ಟಕಾಮ್ಯ'

ಅಂದು 'ಅಮೆರಿಕಾ! ಅಮೆರಿಕಾ!!' ಇಂದು 'ಇಷ್ಟಕಾಮ್ಯ'

Posted By:
Subscribe to Filmibeat Kannada

ಸದಭಿರುಚಿಯ ಪ್ರೇಕ್ಷಕರ ಪ್ರೀತಿ ಗೌರವವನ್ನು ಸಂಪಾದಿಸಿರುವ 'ಇಷ್ಟಕಾಮ್ಯ' ಕನ್ನಡ ಚಿತ್ರ ಇದೀಗ ಕನ್ನಡ ನಾಡಿನ ಮನಸೊರೆಗೊಂಡು ವಿಶ್ವದ ಕನ್ನಡಿಗರ ಆಹ್ವಾನದ ಮೇರೆಗೆ ಜಗತ್ತಿನ ಹಲವು ದೇಶಗಳಿಗೆ ಪರ್ಯಟನೆ ಆರಂಭಿಸಲಿದೆ.

ಈ ಬೇಸಿಗೆಯಲ್ಲಿ ಅಮೆರಿಕಾ, ಕೆನಡಾ ಮತ್ತು ಐರೋಪ್ಯ ದೇಶಗಳ ಪ್ರದರ್ಶನಕ್ಕೆ 'ಇಷ್ಟಕಾಮ್ಯ' ಚಿತ್ರ ಸಜ್ಜಾಗಿದೆ. ಕಸ್ತೂರಿ ಮೀಡಿಯಾ ಸಂಸ್ಥೆಯ ಕನ್ನಡಾಭಿಮಾನಿ ಗೋಪಿ ಅವರು ವಿಶ್ವ ಮಾರುಕಟ್ಟೆಯಲ್ಲಿ 'ಇಷ್ಟಕಾಮ್ಯ'ದ ಸರಣಿ ಪ್ರದರ್ಶನವನ್ನು ಏರ್ಪಡಿಸಿದ್ದಾರೆ. [ವಿಮರ್ಶೆ: 'ಇಷ್ಟಕಾಮ್ಯ', ಕನ್ನಡ ಮಣ್ಣಿನ ರಮ್ಯ ಪ್ರೇಮಕಾವ್ಯ]

Kannada Movie 'Ishtakamya' to release in foriegn countries

ಯು.ಕೆ ಕನ್ನಡಿಗರ ಬಳಗದ ಗಣಪತಿ ಭಟ್ ಅವರು ಇಂಗ್ಲೆಂಡ್ ನ ಹತ್ತು ಕೇಂದ್ರಗಳಲ್ಲಿ 'ಇಷ್ಟಕಾಮ್ಯ' ಚಿತ್ರವನ್ನು ಬಿಡುಗಡೆ ಮಾಡಲಿದ್ದಾರೆ. ಬಿ.ವಿಶ್ವನಾಥ್ ಅವರು ಜರ್ಮನಿ ದೇಶದಲ್ಲಿ, ಕೃಷ್ಣ ಶಿವಲಿಂಗಯ್ಯ ಅವರು ಫ್ರಾನ್ಸ್ ದೇಶದಲ್ಲಿ ಪ್ರದರ್ಶನವನ್ನು ಏರ್ಪಡಿಸಿದ್ದಾರೆ.

ಚಿತ್ರದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮತ್ತು ನಿರ್ಮಾಪಕ ಶಂಕರೇಗೌಡ ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್ ಪ್ರದರ್ಶನಗಳಿಗೆ ಖುದ್ದಾಗಿ ಹಾಜರಾಗಿ ಪ್ರೇಕ್ಷಕರೊಂದಿಗೆ ಸಂವಾದ ನಡೆಸಲಿದ್ದಾರೆ.

ಇಪ್ಪತ್ತು ವರ್ಷಗಳ ಹಿಂದೆ 'ಅಮೆರಿಕಾ! ಅಮೆರಿಕಾ !!' ಚಿತ್ರವನ್ನು ನಿರ್ದೇಶಿಸಿ ಅದನ್ನು ವಿಶ್ವ ಮಾರುಕಟ್ಟೆಯಲ್ಲಿ ಪ್ರದರ್ಶಿಸಿದ ಮೊದಲಿಗರು ನಾಗತಿಹಳ್ಳಿ ಚಂದ್ರಶೇಖರ್. ಇದೀಗ ಅದೇ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿರುವ 'ಇಷ್ಟಕಾಮ್ಯ' ವಿದೇಶಿ ಕನ್ನಡಿಗರ ಮುಂದೆ ಬರಲಿದೆ. ಆಸ್ಟ್ರೇಲಿಯಾ, ಸಿಂಗಾಪುರ, ಮಲೇಶಿಷ್ಯಾ, ನ್ಯೂಜಿಲ್ಯಾಂಡ್ ದೇಶಗಳಲ್ಲೂ 'ಇಷ್ಟಕಾಮ್ಯ' ಬಿಡುಗಡೆಗೆ ಸಿದ್ಧತೆಗಳು ನಡೆದಿವೆ.

English summary
Kannada Movie 'Ishtakamya' directed by Nagathihalli Chandrashekar is all set to release in foreign countries in June.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada