»   » ಸಂಕ್ರಾಂತಿಗೆ 'ಜಾಕ್ಸನ್' ದುನಿಯಾ ವಿಜಯ್ ಎಳ್ಳುಬೆಲ್ಲ

ಸಂಕ್ರಾಂತಿಗೆ 'ಜಾಕ್ಸನ್' ದುನಿಯಾ ವಿಜಯ್ ಎಳ್ಳುಬೆಲ್ಲ

Posted By:
Subscribe to Filmibeat Kannada

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 2015ರ ಮೊದಲ ಸಿನಿಮಾ ಆಗಿ ದುನಿಯಾ ವಿಜಯ್ ಅಭಿನಯದ 'ಜಾಕ್ಸನ್' ಚಿತ್ರ ತೆರೆಗೆ ಬರಬೇಕಾಗಿತ್ತು. ಆದರೆ ಪ್ರತಿಸ್ಪರ್ಧಿ ಚಿತ್ರಗಳು, ಥಿಯೇಟರ್ ಸಮಸ್ಯೆಗಳ ಕಾರಣ 'ಜಾಕ್ಸನ್' ಚಿತ್ರ ಮುಂದೂಡಿದ್ದು ಗೊತ್ತೇ ಇದೆ.

ಇದೇ ಜನವರಿ 15ರ ಸಂಕ್ರಾಂತಿ ಹಬ್ಬಕ್ಕೆ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಜಾಕ್ಸನ್ ತೆರೆಕಾಣುತ್ತಿದೆ. ಪಕ್ಕಾ ಆಕ್ಷನ್ ಪ್ಯಾಕೇಜ್ ಸಿನಿಮಾ ಆಗಿರುವ ಈ ಚಿತ್ರದಲ್ಲಿ ದುನಿಯಾ ವಿಜಿ ಏನೆಲ್ಲಾ ಮಾಡಿದ್ದಾರೆ ಎಂಬುದು ಸಂಕ್ರಾಂತಿ ಹಬ್ಬದಂದು ಗೊತ್ತಾಗಲಿದೆ. [ನಾಯಕಿಯಿಂದ 'ಜಾಕ್ಸನ್' ವಿಜಿಗೆ ಪೊರಕೆ ಸೇವೆ!]


Kannada Movie Jackson on 15th January Sankranti festival

ಸಾಹಸ ಸಿನಿಮಾಗಳ ಸರದಾರ, ಹಾಸ್ಯ ಹಾಗೂ ಭಾವನಾತ್ಮಕ ಸಿನಿಮಾಗಳಿಗೂ ವಿಜಿ ಫೇಮಸ್ ಆದವರು. ವಿಜಯ್ ಹಾಗೂ ವೃಂದ (ಪಾವನಿ) ಮುಖ್ಯ ತಾರಾಗಣದ ಚಿತ್ರಕ್ಕೆ 35 ದಿವಸಗಳ ಮಾತಿನ ಭಾಗದ ಚಿತ್ರೀಕರಣ ಮಾಡಲಾಗಿದೆ. ಅರ್ಜುನ್ ಜನ್ಯ ಅವರ ಹಾಡುಗಳು ಇತ್ತೀಚಿಗೆ ಬಿಡುಗಡೆ ಆಗಿ ಅಪಾರ ಕೇಳುಗರನ್ನು ಸಂಪಾದಿಸಿಕೊಂಡಿದೆ. ದುನಿಯ ಟಾಕೀಸ್ ಅರ್ಪಿಸುವ, ಕೆ ಪಿ ಎಸ್ ಕಂಬೈನ್ಸ್ ಚಿತ್ರ 'ಜಾಕ್ಸನ್'.


ಸುಂದರ್ ಗೌಡ್ರು 'ಜಾಕ್ಸನ್' ಚಿತ್ರದ ನಿರ್ಮಾಪಕರು. ತಮಿಳಿನ 'ಇದಕುತಾನ ಆಸೈ ಪಟ್ಟೈ ಬಾಲಕುಮರ' ಚಿತ್ರದ ರೀಮೇಕ್ ಕಾಮಿಡಿ ತುಂಬಿದ ಮನರಂಜನೆ ಸಿನಿಮಾ. ಒಂದು ಸಂದೇಶ ಸಹ ಚಿತ್ರ ಒಳಗೊಂಡಿದೆ.ಚಿತ್ರದ ನಿರ್ದೇಶಕ ಈ ಮೊದಲು ಸಂಕಲನಕರ ಆಗಿದ್ದ ಸನತ್ ಕುಮಾರ್. ರಂಗಾಯಣ ರಘು, ನಾಗೇಂದ್ರ ಶಾ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ. ಕಿರಣ್ ಅವರ ಸಂಭಾಷಣೆ, ಸೆಲ್ವಮ್ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇದೆ. ಯೋಗರಾಜ್ ಭಟ್, ಚೇತನ್ ಕುಮಾರ್, ಅವರ ಹಾಡುಗಳು ಒದಗಿಸಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
Duniya Vijay lead action packed Kannada movie Jackson releases on Sankranti festival, which is on 15th January. It's a remake of 'Idukathana Aasai Patteya Balakumara'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada