For Quick Alerts
  ALLOW NOTIFICATIONS  
  For Daily Alerts

  ಸೆಪ್ಟೆಂಬರ್ ನಲ್ಲಿ ಶುರುವಾಗಲಿದೆ 'ಜಾಗ್ವಾರ್' ಹಾಡುಗಳ ಹಬ್ಬ

  By ಮೈಸೂರು ಪ್ರತಿನಿಧಿ
  |

  ಹಾಲಿವುಡ್-ಬಾಲಿವುಡ್ ರೇಂಜ್ ನಲ್ಲಿ ತಯಾರಾಗುತ್ತಿರುವ 'ಜಾಗ್ವಾರ್' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಆಡಿಯೋ ಬಿಡುಗಡೆ ಕಾರ್ಯಕ್ರಮದ ಜೊತೆ-ಜೊತೆಗೆ ಸಂಕಷ್ಟದಲ್ಲಿರುವವರಿಗೆ ಆರ್ಥಿಕ ಸಹಾಯ ಮಾಡಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ತಿರ್ಮಾನಿಸಿದ್ದಾರೆ.

  ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳು, ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಿರಿಯ ಕಲಾವಿದರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ದೃಷ್ಟಿಯಲ್ಲಿ, ಪುತ್ರ ನಿಖಿಲ್ ಕುಮಾರ್ ಮತ್ತು ನಟಿ ದೀಪ್ತಿ ಸತಿ ಒಂದಾಗಿ ನಟಿಸಿರುವ 'ಜಾಗ್ವಾರ್' ಚಿತ್ರದ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮವನ್ನು ಸೆ.2ರಂದು, ಮಂಡ್ಯದ ಸರ್ ಎಂ.ವಿ. ಕ್ರೀಡಾಂಗಣದಲ್ಲಿ ನಡೆಸಲು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ನಿರ್ಧರಿಸಿದ್ದಾರೆ.[ಎತ್ತಣದಿಂದೆತ್ತಣಕ್ಕೆ 'ಭಜರಂಗಿ' ಲೋಕಿಯ ಪಯಣ]

  ನಗರದ ಸರ್.ಎಂ.ವಿ. ಕ್ರೀಡಾಂಗಣವನ್ನು ಮಂಗಳವಾರ (ಆಗಸ್ಟ್ 9) ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಜಾಗ್ವಾರ್' ಸಿನಿಮಾ ಕನ್ನಡ ಚಿತರಂಗದಲ್ಲೇ ಹೊಸ ಮೈಲಿಗಲ್ಲು ನಿರ್ಮಿಸಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

  'ಜಾಗ್ವಾರ್' ಚಿತ್ರವನ್ನು ದಕ್ಷಿಣ ಭಾರತದ ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಬಿಡುಗಡೆಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಬಾಲಿವುಡ್ ‍ಗೆ ಸರಿಸಮಾನವಾದ ಚಿತ್ರ ಎಂಬ ಹೆಗ್ಗಳಿಕೆ 'ಜಾಗ್ವಾರ್' ಚಿತ್ರಕ್ಕೆ ದೊರೆಯಲಿದೆ.[ಎಚ್.ಡಿ.ಕುಮಾರಸ್ವಾಮಿ ಸುಪುತ್ರ ನಿಖಿಲ್ ರೋಷ-ಆವೇಶ ಹೀಗಿದೆ....]

  Kannada Movie 'Jaguar' audio releasing on September 2nd

  ಸೆ.5ರಂದು ತೆಲುಗಿನಲ್ಲಿ, ಹಾಗೂ 22ರಂದು ತಮಿಳಿನಲ್ಲಿ ಚಿತ್ರದ ಧ್ವನಿ ಸುರುಳಿ ಬಿಡುಗಡೆಯಾಗಲಿದ್ದು, ಅಕ್ಟೋಬರ್ 6 ರಂದು 'ಜಾಗ್ವಾರ್' ಚಿತ್ರ ಎಲ್ಲಾ ಕಡೆ ಗ್ರ್ಯಾಂಡ್ ಆಗಿ ತೆರೆ ಕಾಣಲಿದೆ ಎಂದು ವಿವರಿಸಿದರು.

  ಮಂಡ್ಯ ಜಿಲ್ಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಮೃತರಾಗಿರುವ 108 ರೈತ ಕುಟುಂಬಗಳ ಪೈಕಿ ಈಗಾಗಲೇ 65 ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಗಿದೆ.[ಕನ್ನಡದ ಬಿಸಿ ಬೇಳೆಬಾತ್ ಬದ್ಲು ಹೈದರಾಬಾದ್ ಬಿರಿಯಾನಿ ಉಂಡ ಕುಮಾರಣ್ಣ.!]

  ಉಳಿದ ಮೃತ ರೈತ ಕುಟುಂಬಗಳಿಗೆ, ಜಿಲ್ಲೆಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಡಾ.ರಾಜ್ ಕುಮಾರ್ ಕಾಲದ ಹಿರಿಯ ಕಲಾವಿದರಾದ ಶಾಂತಮ್ಮ, ಲಕ್ಷ್ಮೀದೇವಿ, ಶನಿ ಮಹಾದೇವಪ್ಪ ಮುಂತಾದವರಿಗೆ ಕೈಲಾದ ಆರ್ಥಿಕ ನೆರವು ನೀಡುವ ಕಾರ್ಯಕ್ರಮದಲ್ಲಿ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಮಾಡುವ ಆಶಯ ನನ್ನದಾಗಿದೆ ಎಂದರು.

  English summary
  Kannada Movie 'Jaguar' audio releasing on September 2nd, At sir m vishweshwaraiah stadium Mandya. Kannada Actor Nikhil Kumar, Actress Deepthi Sati in the lead role. The movie is directed by Mahadev.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X