For Quick Alerts
  ALLOW NOTIFICATIONS  
  For Daily Alerts

  ಚಿತ್ರರಸಿಕರ ಜತೆ ಶಟ್ಲ್ ಕಾಕ್ ಆಡಲಿರುವ 'ಜೈ ಲಲಿತ'

  By Rajendra
  |

  'ಜೈ ಲಲಿತ' ಚಿತ್ರದ ಪೋಸ್ಟರ್ ಗಳನ್ನು ನೋಡಿ ನೋಡಿ ಪಡ್ಡೆ ಹುಡುಗರು ಬಳಲಿ ಬೆಂಡಾಗಿ ಹೋಗಿದ್ದಾರೆ. ಅವರ ಮನಸನ್ನು ತಣಿಸಲು 'ಜೈ ಲಲಿತ' ತೆರೆಗೆ ಅಡಿಯಿಡುತ್ತಿದ್ದಾಳೆ. ಇದೇ ಶುಕ್ರವಾರ (ಜೂ.27) ನೆಚ್ಚಿನ ಚಿತ್ರಮಂದಿರಗಳಲ್ಲಿ 'ಜೈ ಲಲಿತ' ಶಟ್ಲ್ ಕಾಕ್ ಆಡಲು ಬರುತ್ತಿದ್ದಾರೆ.

  ಇಂದಿರ ಪ್ರೊಡಕ್ಷನ್ ಅಡಿಯಲ್ಲಿ ಪಿ ಇಂದಿರ, ಅರುಣ್ ಕುಮಾರ್, ಮಂಜುಳ ಶಂಕರ್ ಅವರು ನಿರ್ಮಿಸಿರುವ ನಕ್ಕು ನಗಿಸುವ ಕನ್ನಡ ಸಿನೆಮಾ 'ಜೈ ಲಲಿತ' ಈ ವಾರ ತೂಗುದೀಪ ಡಿಸ್ಟ್ರಿಬೂಷನ್ ವತಿಯಿಂದ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. [ಕ್ರೇಜಿಸ್ಟಾರ್ ರವಿಚಂದ್ರನ್ ಮೌನದ ಹಿಂದಿನ ಮರ್ಮ]

  'Rambo' ಹಾಗೂ 'ವಿಕ್ಟರಿ' ಯಶಸ್ಸಿನ ಗುಂಗಿನಲ್ಲಿ ಇರುವ ನಾಯಕ ಶರಣ್ ಅವರು ಹ್ಯಾಟ್ರಿಕ್ ಗಳಿಸುವ ಉತ್ಸಾಹದಲ್ಲಿ ಇದ್ದಾರೆ. ಈ ಚಿತ್ರದಲ್ಲಿ ಅವರು ಶೇ.75 ರಷ್ಟು ಹೆಣ್ಣಿನ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ.

  ಪಿ ಕುಮಾರ್ ಅವರ ನಿರ್ದೇಶನದಲ್ಲಿ ತಯಾರಾಗಿರುವ 'ಜೈ ಲಲಿತ' ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ಅವರ ಸಂಗೀತ ಇದ್ದು, ಈಗಾಗಲೇ ಚಿತ್ರದ ಹಾಡುಗಳು ಭರ್ಜರಿ ಹಿಟ್ ಆಗಿದೆ. ಕರುಣಾಕರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಅಂದಹಾಗೆ ಇದು ಮಲಯಾಳಂನ 'ಮಾಯಾ ಮೋಹಿನಿ' ಚಿತ್ರದ ರೀಮೇಕ್.

  'ಜೈ ಲಲಿತ' ಚಿತ್ರಕ್ಕೆ ಯೋಗರಾಜ್ ಭಟ್, ವಿ ನಾಗೇಂದ್ರ ಪ್ರಸಾದ್, ಕವಿರಾಜ್ ಅವರ ಸಾಹಿತ್ಯವಿದೆ, ಕೆ ಎಂ ಪ್ರಕಾಶ್ ಅವರು ಸಂಕಲನ ಮಾಡಿದ್ದಾರೆ. ತಾರಾಗಣದಲ್ಲಿ ದಿಶಾ ಪಾಂಡೆ, ಐಶ್ವರ್ಯಾ ದೇವನ್, ರವಿಶಂಕರ್ ಗೌಡ, ಹರೀಶ್ ರಾಜ್, ಟಿ ಎಸ್ ನಾಗಾಭರಣ ಹಾಗೂ ಇತರರು ಇದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Actor Sharan lead Kannada comdey film Jai Lalitha releases on 27th June in over 150 screens. ‘Jai Lalitha’ with 80 percent of Sharan portion in female get up has been taken up for distribution by Toogudeepa Distribution owned by Dinakar and Darshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X