»   » ಪವನ್ ಒಡೆಯರ್ 'ಜೆಸ್ಸಿ' ಚಿತ್ರದ ಫಸ್ಟ್ ಲುಕ್ ಔಟ್

ಪವನ್ ಒಡೆಯರ್ 'ಜೆಸ್ಸಿ' ಚಿತ್ರದ ಫಸ್ಟ್ ಲುಕ್ ಔಟ್

Posted By:
Subscribe to Filmibeat Kannada

'ರಣವಿಕ್ರಮ' ಹಿಟ್ ಆದ ಬಳಿಕ ನಿರ್ದೇಶಕ ಪವನ್ ಒಡೆಯರ್ ಆಕ್ಷನ್ ಕಟ್ ಹೇಳುತ್ತಿರುವ 'ಜೆಸ್ಸಿ' ಚಿತ್ರ ಸೆಟ್ಟೇರಿದೆ. ಈಗಾಗಲೇ 'ಜೆಸ್ಸಿ' ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದ್ದು, ನಾಯಕ ಧನಂಜಯ ಹಾಗೂ 'ಪ್ಯಾರ್ಗೆ ಆಗ್ಬುಟೈತೆ' ಹುಡುಗಿ ಪಾರುಲ್ ಯಾದವ್ ಮಿಂಚಿದ್ದಾರೆ.

ಇಬ್ಬರು ನಾಯಕರ ನಡುವಿನ ತ್ರಿಕೋನ ಪ್ರೇಮಕಥಾ ಹಂದರವನ್ನು ಹೊಂದಿರುವ ಚಿತ್ರದಲ್ಲಿ 'ಸವಾರಿ' ಖ್ಯಾತಿಯ ರಘು ಮುಖರ್ಜಿ ಕೂಡ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಪವನ್ ಒಡೆಯರ್ ಅವರ ಬ್ಲಾಕ್ ಬಾಸ್ಟರ್ ಹಿಟ್ 'ಗೂಗ್ಲಿ' ಸ್ಟೈಲ್ ನಲ್ಲಿ 'ಜೆಸ್ಸಿ' ರೆಡಿಯಾಗುತ್ತಿದೆ.

jessie

ಅಸಲಿಗೆ, ಇದು ಪಾರುಲ್ ಯಾದವ್ ಮತ್ತು ಪವನ್ ಒಡೆಯರ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಎರಡನೇ ಚಿತ್ರ. ಕೋಮಲ್ ಕುಮಾರ್ ನಾಯಕರಾಗಿದ್ದ 'ಗೋವಿಂದಾಯ ನಮಃ' ಚಿತ್ರ ಪವನ್ ಒಡೆಯರ್ ಮತ್ತು ಪಾರುಲ್ ಗೆ ಬ್ರೇಕ್ ನೀಡಿತ್ತು. ಈ ಇಬ್ಬರು 'ಜೆಸ್ಸಿ'ಗಾಗಿ ಜೊತೆಯಾಗಿದ್ದಾರೆ. ['ರಣವಿಕ್ರಮ' ಆಯ್ತು..! ಪವನ್ ಒಡೆಯರ್ ಕಥೆಯೇನು?]

ಸತತ ಸೋಲು ಕಂಡಿರುವ ಧನಂಜಯಗೆ 'ಜೆಸ್ಸಿ' ಹೊಸ ಟರ್ನಿಂಗ್ ಪಾಯಿಂಟ್ ನೀಡುವ ನಿರೀಕ್ಷೆ ಇದೆ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿದ್ದು, ರಾಮಕೃಷ್ಣ, ಅವಿನಾಶ್, ಚಿಕ್ಕಣ್ಣ ಮುಂತಾದವರ ತಾರಾ ಬಳಗವಿದೆ.

English summary
Kannada movie 'Jessie' first look poster is released. 'Jessie' features Kannada actor Dhananjaya, Parul Yadav and Raghu Mukherjee in the lead roles. The movie is directed by Pavan Wadeyar of 'Googly' fame.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada