For Quick Alerts
  ALLOW NOTIFICATIONS  
  For Daily Alerts

  'ಜೆಸ್ಸಿ' ಮೂಲಕ ಮತ್ತೊಂದು ಹಿಟ್ ನೀಡ್ತಾರಾ ಪವನ್ ಒಡೆಯರ್?

  By Harshitha
  |

  'ಗೋವಿಂದಾಯ ನಮಃ' ಹಿಟ್ ಆಯ್ತು. ಇನ್ನೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಗೂಗ್ಲಿ' ಹಾಗೂ ಪುನೀತ್ ರಾಜ್ ಕುಮಾರ್ ರವರ 'ರಣವಿಕ್ರಮ' ಚಿತ್ರದ ಯಶಸ್ಸು ನಿಮಗೆ ಗೊತ್ತಿದೆ.

  ಗಾಂಧಿನಗರದಲ್ಲಿ ಮೂರ್ಮೂರು ಹಿಟ್ ನೀಡಿ 'ಹ್ಯಾಟ್ರಿಕ್ ಡೈರೆಕ್ಟರ್' ಅಂತ ಖ್ಯಾತಿ ಗಳಿಸಿರುವ ನಿರ್ದೇಶಕ ಪವನ್ ಒಡೆಯರ್ ಈಗ 'ಜೆಸ್ಸಿ' ಅಂತಹ ಪ್ರೇಮ ಕಾವ್ಯ ಹೊತ್ತು ಇದೇ ವಾರ ಅದೃಷ್ಟ ಪರೀಕ್ಷೆಗೆ ನಿಮ್ಮ ಮುಂದೆ ಬರ್ತಿದ್ದಾರೆ. ['ಜೆಸ್ಸಿ' ನಮ್ಮಲ್ಲಿ ಮಾತ್ರವಲ್ಲ, ತಮಿಳು-ತೆಲುಗಲ್ಲೂ ಕಮಾಲ್ ಮಾಡ್ತಾಳೆ]

  ಅರ್ಥಾತ್ ಇದೇ ಶುಕ್ರವಾರ ಅಂದ್ರೆ, ಮಾರ್ಚ್ 25 ರಂದು 'ಜೆಸ್ಸಿ' ಚಿತ್ರ ಬಿಡುಗಡೆ ಆಗಲಿದೆ. U/A ಸರ್ಟಿಫಿಕೇಟ್ ಪಡೆದಿರುವ 'ಜೆಸ್ಸಿ' ಸಿನಿಮಾ ಸೆನ್ಸಾರ್ ಅಂಗಳದಿಂದ ಪಾಸ್ ಆಗಿದೆ.

  ಆರ್.ಎಸ್.ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ತಯಾರಾಗಿರುವ 'ಜೆಸ್ಸಿ' ಸಿನಿಮಾ ತೆಲುಗಿನಲ್ಲೂ ತೆರೆ ಕಾಣುತ್ತಿರುವುದು ವಿಶೇಷ. ನಟ ಧನಂಜಯ್, ಪಾರುಲ್ ಯಾದವ್, ರಘು ಮುಖರ್ಜಿ 'ಜೆಸ್ಸಿ' ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.

  ಅನೂಪ್ ಸೀಳಿನ್ ಸಂಗೀತ ನೀಡಿರುವ 'ಜೆಸ್ಸಿ' ಹಾಡುಗಳು ಎಲ್ಲೆಡೆ ಸದ್ದು ಮಾಡುತ್ತಿದೆ. ಈಗ 'ಜೆಸ್ಸಿ' ತೆರೆ ಕಾಣುವುದೊಂದೇ ಬಾಕಿ....

  English summary
  Kannada Actress Parul Yadav and Kannada Actor Dhananjay starrer 'Jessie' has received U/A certificate from Censor Board. 'Jessie' is all set to release on March 25th. Pawan Wadeyar has directed this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X