»   » ಕಿಚ್ಚನ ಕೋಟೆಯಿಂದ ಹೊರ ಬರ್ತಿದೆ ಜಿಲ್ ಜಿಲ್ 'ಜಿಗರ್ ಥಂಡ'

ಕಿಚ್ಚನ ಕೋಟೆಯಿಂದ ಹೊರ ಬರ್ತಿದೆ ಜಿಲ್ ಜಿಲ್ 'ಜಿಗರ್ ಥಂಡ'

Posted By:
Subscribe to Filmibeat Kannada

ಸ್ವಲ್ಪ ಲವ್ ಸ್ಟೋರಿ, ಫುಲ್ ಕಾಮಿಡಿ, ಖಡಕ್ ಫೈಟ್ ಒಳಗೊಂಡ ವಿಭಿನ್ನ ಸಿನಿಮಾ 'ಜಿಗರ್ ಥಂಡ' ನಾಳೆ (ಜೂನ್ 24) ತೆರೆಗೆ ಅಪ್ಪಳಿಸುತ್ತಿದೆ. ನಿರ್ದೇಶಕ ಶಿವ ಗಣೇಶ್ ಆಕ್ಷನ್-ಕಟ್ ಹೇಳಿರುವ ಈ ಚಿತ್ರದಲ್ಲಿ ನಟ ರಾಹುಲ್ ಮತ್ತು ರವಿಶಂಕರ್ ಅವರ ಕಾಂಬಿನೇಷನ್ ಅದ್ಭುತವಾಗಿ ಮೂಡಿಬಂದಿದೆ.

ಕಿಚ್ಚ ಕ್ರಿಯೇಷನ್ಸ್ ನಲ್ಲಿ ಮೂಡಿಬಂದಿರುವ ಈ ಸಿನಿಮಾ ಇಡೀ ಕರ್ನಾಟಕದಾದ್ಯಂತ ಅಂದಾಜು ಸುಮಾರು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. ಟ್ರೈಲರ್ ಮೂಲಕ ಬಹಳ ಕುತೂಹಲ ಮೂಡಿಸಿದ್ದ 'ಜಿಗರ್ ಥಂಡ' ತಮಿಳಿನ ರೀಮೇಕ್ ಆಗಿದೆ.['ಜಿಗರ್ ಥಂಡ' ಚಿತ್ರಕ್ಕೆ ಎಡಿಟಿಂಗ್ ಟಚ್ ಕೊಟ್ಟ ಕಿಚ್ಚ ಸುದೀಪ್]


Kannada Movie 'Jigarthanda' release in 200 Theatres

ತಮಿಳಿನಲ್ಲಿ ನಟ ಸಿದ್ಧಾರ್ಥ್, ನಟಿ ಲಕ್ಷ್ಮಿ ಮೆನನ್ ನಾಯಕ-ನಾಯಕಿಯಾಗಿ ಮತ್ತು ನಟ ಬಾಬಿ ಸಿಂಹ ಖಳನಟನಾಗಿ ಮಿಂಚಿದ್ದರು. ತಮಿಳಿನಲ್ಲಿ ಸೂಪರ್ ಹಿಟ್ ಆಗಿದ್ದ ಈ ಸಿನಿಮಾವನ್ನು ಅದೇ ಹೆಸರಿನಲ್ಲಿ ಕನ್ನಡದಲ್ಲಿ ರೀಮೇಡ್ ಮಾಡಿದ್ದಾರೆ.


'ಜಿಗರ್ ಥಂಡ' ನಟ ರಾಹುಲ್ ಅವರಿಗೆ ಕಮ್ ಬ್ಯಾಕ್ ಸಿನಿಮಾ ಆದರೆ ರವಿಶಂಕರ್ ಅವರಿಗೆ ಭರ್ಜರಿ 50ನೇ ಸಿನಿಮಾ. ಚಿತ್ರದಲ್ಲಿ ರವಿಶಂಕರ್ ಅವರು ವಿಭಿನ್ನ ಹೇರ್ ಸ್ಟೈಲ್ ಮತ್ತು ಕೆಂಚು ಗಡ್ಡ ಬಿಟ್ಟು, ಲುಂಗಿ ತೊಟ್ಟಿದ್ದಾರೆ.['ಜಿಗರ್ ಥಂಡ' ರಿಯಲ್ ಹೀರೋ ಆರ್ಮುಗಂ ರವಿಶಂಕರ್ ಸಂದರ್ಶನ]


Kannada Movie 'Jigarthanda' release in 200 Theatres

"ನಿರ್ಮಾಪಕರು ನನ್ನ ಮೇಲೆ ನಂಬಿಕೆ ಇಟ್ಟಿದ್ದರಿಂದ ಹೆಚ್ಚಿನ ಜವಾಬ್ದಾರಿ ಹೊತ್ತಿದ್ದೇನೆ. ಸುಮಾರು 8 ವರ್ಷ ಕಷ್ಟಪಟ್ಟ ನಂತರ ಈ ಯೋಜನೆ ಪಡೆದಿದ್ದೇನೆ. ಪ್ರಿಯಾ ಮೇಡಂ ಮತ್ತು ಸುದೀಪ್ ಅವರು ನನಗೆ ತುಂಬಾ ಬೆಂಬಲ ನೀಡಿದ್ದಾರೆ. ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು. ಅವರ ನಂಬಿಕೆಯನ್ನು ಖಂಡಿತ ಉಳಿಸಿಕೊಳ್ಳುತ್ತೇನೆ" ಎಂದು ವಿಶ್ವಾಸದಿಂದ ನುಡಿಯುತ್ತಾರೆ ನಟ ರಾಹುಲ್.


Kannada Movie 'Jigarthanda' release in 200 Theatres

"ಸಿನಿಮಾ ಸೋಲುತ್ತೋ, ಬಿಡುತ್ತೋ ಅನ್ನೋದು ನಮ್ಮ ಕೈಯಲ್ಲಿ ಇಲ್ಲ. ನಮ್ಮ ಕೆಲಸವನ್ನು ನಾವು ಶಕ್ತಿ ಮೀರಿ ಮಾಡಿದ್ದೇವೆ. ಸಿನಿಮಾ 100 ದಿನ ಓಡದೇ ಇರಬಹುದು. ಆದರೆ ನಿರ್ಮಾಪಕರು ನಮ್ಮ ಮೇಲೆ ಹೂಡಿರುವ ಹಣ ಮಾತ್ರ ಖಂಡಿತ ವಾಪಸ್ ಬರುತ್ತದೆ" ಎಂದಿದ್ದಾರೆ ರಾಹುಲ್.


Kannada Movie 'Jigarthanda' release in 200 Theatres

ಒಟ್ನಲ್ಲಿ ಎಲ್ಲರೂ ಕೂಡ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದು, ಸಿನಿಮಾ ಹಿಟ್ ಆಗುವ ಎಲ್ಲಾ ಲಕ್ಷಣ ಕಂಡು ಬರುತ್ತಿದೆ. ಅದಕ್ಕೆ ತಕ್ಕಂತೆ ರವಿಶಂಕರ್ ಅವರು ಕೂಡ ಈ ಸಿನಿಮಾದಲ್ಲಿ ಎಂದಿನಂತೆ ಇಲ್ಲದೆ ಕೊಂಚ ಡಿಫರೆಂಟ್ ಆಗಿದ್ದು, ಅಭಿಮಾನಿಗಳಿಗೆ ಖಂಡಿತ ಹಿಡಿಸುತ್ತಾರೆ.


ಈಗಾಗಲೇ 'ಜಿಗರ್ ಥಂಡ' ಬುಕ್ಕಿಂಗ್ ಆರಂಭವಾಗಿದ್ದು, ಬೆಂಗಳೂರಿನ ಮುಖ್ಯ ಚಿತ್ರಮಂದಿರ 'ಭೂಮಿಕ'ದಲ್ಲಿ ಈ ಸಿನಿಮಾ ತೆರೆ ಕಾಣುತ್ತಿದೆ.

English summary
Kannada Actor P. Ravi Shankar, Kannada Actor Rahul starrer Kannada Movie 'Jigarthanda' release in over 200 Theatres across Karnataka. The movie is directed by Shiva Ganesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada