»   » ಸ್ಯಾಟಲೈಟ್ ಹಕ್ಕಿನಲ್ಲೂ ದಾಖಲೆ ಮಾಡಿದ 'ಜಿಗರ್ ಥಂಡ'

ಸ್ಯಾಟಲೈಟ್ ಹಕ್ಕಿನಲ್ಲೂ ದಾಖಲೆ ಮಾಡಿದ 'ಜಿಗರ್ ಥಂಡ'

Posted By:
Subscribe to Filmibeat Kannada

ಇತ್ತೀಚಿನ ಸುಮಾರು 150 ಕನ್ನಡ ಸಿನಿಮಾಗಳ ಸ್ಯಾಟಲೈಟ್ ಹಕ್ಕನ್ನು ಯಾವುದೇ ಟಿವಿ ಚಾನೆಲ್ ಗಳು ಖರೀದಿ ಮಾಡಿಲ್ಲ. ಇದರಲ್ಲಿ ಖ್ಯಾತ ನಟರ ಸಿನಿಮಾಗಳು ಒಳಗೊಂಡಿವೆ. ಅದರಲ್ಲೂ ಕೆಲವು ಸಿನಿಮಾಗಳ ಸ್ಯಾಟಲೈಟ್ ಹಕ್ಕು ಸೋಲ್ಡ್ ಔಟ್ ಆದ್ರೂ, ಚಿತ್ರ ನಿರ್ಮಾಪಕರು ಅಂದುಕೊಂಡಷ್ಟು ಬೆಲೆಗೆ ಸಿನಿಮಾ ಮಾರಾಟ ಆಗಿಲ್ಲ.

ಇದಕ್ಕೆ ಉತ್ತಮ ನಿದರ್ಶನ ಅಂದ್ರೆ ದುನಿಯಾ ಸೂರಿ ಅವರ ನಿರ್ದೇಶನದ 'ಕೆಂಡಸಂಪಿಗೆ' ಸಿನಿಮಾ. ನಟಿ ಮಾನ್ವಿತಾ ಹರೀಶ್ ಮತ್ತು ಸಂತೋಷ್ ರೇವಾ ಕಾಣಿಸಿಕೊಂಡಿದ್ದ ಈ ಸಿನಿಮಾ ಬಾಕ್ಸಾಫೀಸ್ ನಲ್ಲಿ ಸೂಪರ್ ಡೂಪರ್ ಹಿಟ್ ಆಗಿತ್ತು. ಆದರೆ ಟಿವಿಗೆ 45 ಲಕ್ಷ ರೂಪಾಯಿಗೆ ಸೋಲ್ಡ್ ಔಟ್ ಆಗಿತ್ತು.['ಜಿಗರ್ ಥಂಡ' ರಿಯಲ್ ಹೀರೋ ಆರ್ಮುಗಂ ರವಿಶಂಕರ್ ಸಂದರ್ಶನ]


Kannada Movie 'Jigarthanda' satellite rights sold out for 1 crore

ಆದರೆ ಇದಕ್ಕೆಲ್ಲಾ ತದ್ವಿರುದ್ದ ಎನ್ನುವಂತೆ ನಟ ರಾಹುಲ್ ಗೆ ಬ್ರೇಕ್ ಕೊಟ್ಟ 'ಜಿಗರ್ ಥಂಡ' ಸಿನಿಮಾ ಮಾತ್ರ ಭರ್ಜರಿ ರೇಟ್ ಗೆ ಸೇಲ್ ಆಗಿದೆ. ರವಿಶಂಕರ್-ರಾಹುಲ್ ಕಾಂಬಿನೇಷನ್ ನ ಈ ಸಿನಿಮಾದ ಸ್ಯಾಟಲೈಟ್ ಹಕ್ಕು ಬರೋಬ್ಬರಿ 1 ಕೋಟಿ ಪ್ಲಸ್ ಗೆ ಮಾರಾಟಗೊಂಡಿದೆ.['ಜಿಗರ್ ಥಂಡ' ವಿಮರ್ಶೆ: ಆರ್ಮುಗಂಗೇ 'ಆಪ್' ಇಟ್ಟ ರಾಹುಲ್]


Kannada Movie 'Jigarthanda' satellite rights sold out for 1 crore

ಕಿಚ್ಚ ಕ್ರಿಯೇಷನ್ಸ್ ಅಡಿಯಲ್ಲಿ ಮೂಡಿಬಂದಿದ್ದ 'ಜಿಗರ್ ಥಂಡ' ಬಾಕ್ಸಾಫೀಸ್ ನಲ್ಲಿ ಕೊಂಚ ಮಟ್ಟಿಗೆ ಯಶಸ್ವಿಯಾಗಿತ್ತು. ಆದರೆ ಸಕಲಕಲಾವಲ್ಲಭ ರವಿಶಂಕರ್ ಮತ್ತು ನಟ ರಾಹುಲ್ ಮೋಡಿಗೆ ಮೆಚ್ಚಿದ ಪ್ರೇಕ್ಷಕರು ಶಿಳ್ಳೆ ಹಾಕಿದ್ದರು.[ಸಮಾಜ ಬದಲಾಗಲು ಕೊಬ್ರಿ ಮಂಜು ಸಿನಿಮಾ ಮಾಡಲ್ವಂತೆ.!]


Kannada Movie 'Jigarthanda' satellite rights sold out for 1 crore

ಇದೀಗ ಕಲರ್ಸ್ ಕನ್ನಡ ಚಾನೆಲ್ ಗೆ 1 ಕೋಟಿ ಪ್ಲಸ್ ಗೆ 'ಜಿಗರ್ ಥಂಡ' ಸ್ಯಾಟಲೈಟ್ ಹಕ್ಕು ಸೇಲ್ ಆಗಿದ್ದು, ಚಿತ್ರತಂಡಕ್ಕೆ ಖುಷಿ ತಂದಿದೆ. ಅಂತೂ ಥಿಯೇಟರ್ ನಲ್ಲಿ ಸಿನಿಮಾ ನೋಡದವರು ಸದ್ಯದಲ್ಲೇ ಕಲರ್ಸ್ ಕನ್ನಡದಲ್ಲಿ ಮನೆಯಲ್ಲೇ ಆರಾಮಾಗಿ ಕುಳಿತು 'ಆರ್ಮುಗಂ' ರವಿಶಂಕರ್ ಆರ್ಭಟವನ್ನು ನೋಡಬಹುದು.[ಕಿಚ್ಚನ ಕೋಟೆಯಿಂದ ಹೊರ ಬರ್ತಿದೆ ಜಿಲ್ ಜಿಲ್ 'ಜಿಗರ್ ಥಂಡ']


Kannada Movie 'Jigarthanda' satellite rights sold out for 1 crore

ಶಿವ ಗಣೇಶ್ ಆಕ್ಷನ್-ಕಟ್ ಹೇಳಿದ್ದ 'ಜಿಗರ್ ಥಂಡ' ಚಿತ್ರದಲ್ಲಿ ನಟ ರಾಹುಲ್ ಗೆ ನಾಯಕಿಯಾಗಿ ನಟಿ ಸಂಯುಕ್ತಾ ಹೊರನಾಡ್ ಕಾಣಿಸಿಕೊಂಡಿದ್ದರು. ಸ್ವಲ್ಪ ಲವ್, ಖಡಕ್ ಫೈಟ್ ಮತ್ತು ಪಕ್ಕಾ ಕಾಮಿಡಿ ಸಿನಿಮಾ ಆದ 'ಜಿಗರ್ ಥಂಡ' ರವಿಶಂಕರ್ ಅವರಿಗೆ 50ನೇ ಸಿನಿಮಾ ಅನ್ನೋದು ವಿಶೇಷ.


ಒಟ್ನಲ್ಲಿ 'ಕಲರ್ಸ್ ಕನ್ನಡ' ಚಾನೆಲ್ ನಲ್ಲಿ ರವಿಶಂಕರ್-ರಾಹುಲ್ ಜುಗಲ್ ಬಂದಿಯ ಥಂಡಾ ಥಂಡಾ 'ಜಿಗರ್ ಥಂಡ' ಸದ್ಯದಲ್ಲೇ ಪ್ರಸಾರವಾಗಲಿದೆ.

English summary
Kannada Movie 'Jigarthanda' satellite sold out for 1 crore. Kannada Actor P. Ravi Shankar, Kannada Actor Rahul, Kannada Actress Samyukta Belavadi in the lead role. The movie is directed by Shiva Ganesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada