For Quick Alerts
  ALLOW NOTIFICATIONS  
  For Daily Alerts

  ಸಾಫ್ಟ್ ವೇರು ಹಾರ್ಡ್ ವೇರು ನಿದ್ದೆಗೆಡಿಸಿರುವ ಸರಳಾ!

  By Rajendra
  |

  "ಸರಸಕೆ ಬಾರೇ ಸರಳ ಸನಿಹಕೆ ಬಾರೇ ಸರಳ ನಿನ್ನ ಬ್ಯೂಟಿ ಅತಿ ವಿರಳ..." ಎಂಬ ಹಾಡಿನ ಮೂಲಕ ಎಲ್ಲರ ಗಮನಸೆಳೆದಿರುವ ಚಿತ್ರ ಕೋಮಲ್ ಕುಮಾರ್ ಅವರ 'ಕರೋಡ್ ಪತಿ'. ಈ ಚಿತ್ರ ಈ ಶುಕ್ರವಾರ (ಮಾ.14) ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

  ಪ್ರಮುಖ ಚಿತ್ರಮಂದಿರ ಬೆಂಗಳೂರಿನ ಮೂವಿಲ್ಯಾಂಡ್ ಸೇರಿದಂತೆ ಮಲ್ಟಿಫ್ಲೆಕ್ಸ್ ಗಳಲ್ಲೂ ಬಿಡುಗಡೆಯಾಗುತ್ತಿದೆ. ಅಶ್ವಿನಿ ಫಿಲ್ಮ್ ಡಿಸ್ಟ್ರಿಬ್ಯೂಟರ್ಸ್ ಈ ಚಿತ್ರದ ವಿಶಾಲ ಕರ್ನಾಟಕ ಹಂಚಿಕೆದಾರರು.

  ಸರಳಾ ಸರಳಾ ಹಾಡು ಪ್ರೇಕ್ಷಕರು ಕೇಳಿ ಕೇಳಿ ಆನಂದಿಸಿದ್ದಾರೆ. ಇನ್ನೂ ಕೇಳುತ್ತಲೇ ಇದ್ದಾರೆ. ಸಾಮಾಜಿಕ ವಿಡಿಯೋ ಹಂಚಿಕೆ ತಾಣ ಯೂಟ್ಯೂಬ್ ನಲ್ಲಂತೂ ಈ ಹಾಡು ಹಿಗ್ಗಾಮುಗ್ಗಾ ಹಿಟ್ ಆಗಿದೆ. ಸರಳಾ is waiting 4 U ಚಿತ್ರಮಂದಿರದಲ್ಲಿ ನಿಮ್ಮ ಸುಖಾಗಮನ ಬಯಸುವ ಸರಳಾ ಸರಳಾ ಸರಳಾ...

  ಅಭಿಮಾನ್ ರಾಯ್ ಸಂಗೀತದ ಹಾಡು

  ಅಭಿಮಾನ್ ರಾಯ್ ಸಂಗೀತದ ಹಾಡು

  ಈ ಹಾಡಿನ ಮೇಕಿಂಗ್, ಸಂಗೀತ, ಸಾಹಿತ್ಯ ಎಲ್ಲವೂ ವಿಭಿನ್ನವಾಗಿದ್ದು ಚಿತ್ರಪ್ರೇಮಿಗಳನ್ನು ಕಾಡುತ್ತಿದೆ. ಅಭಿಮಾನ್ ರಾಯ್ ಸಂಗೀತ ಹಾಗೂ ಸಾಹಿತ್ಯ ಈ ಹಾಡಿಗಿದ್ದು ಗಮಕ ವಿದ್ವಾನ್ ಎಲ್.ಆರ್.ರಾಮಾನುಜಂ ಬಹಳ ಸೊಗಸಾಗಿ ಹಾಡಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ವಿಶೇಷ ಸೆಟ್ ಹಾಕಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಸತತ ಮೂರು ದಿನಗಳ ಕಾಲ ಹಾಡನ್ನು ಚಿತ್ರೀಕರಿಸಿದ್ದಾರೆ.

  ತ್ರಿಪುಲ್ ಎಸ್ ಸುರೇಶ್ ನಿರ್ಮಾಣದ ಚಿತ್ರ

  ತ್ರಿಪುಲ್ ಎಸ್ ಸುರೇಶ್ ನಿರ್ಮಾಣದ ಚಿತ್ರ

  ಪಿಸಿಆರ್ ರಮೇಶ್ ಆಕ್ಷನ್ ಕಟ್ ಹೇಳಿರುವ 'ಕರೋಡ್ ಪತಿ' ಚಿತ್ರವನ್ನು ಎಸ್ಎಸ್ಎಸ್ ಸುರೇಶ್ ನಿರ್ಮಿಸಿದ್ದಾರೆ. ಈ ಹಾಡಿನ ಬಗ್ಗೆ ಕೋಮಲ್ ಮಾತನಾಡುತ್ತಾ, "ಬಹುಶಃ ನನ್ನ ಹಳೆ ರೆಕಾರ್ಡ್ಸ್ ಮುರಿಯುವಂತಹ ಸಾಂಗ್ ಇದು" ಎಂದಿದ್ದಾರೆ.

  ಸಾಫ್ಟ್ ವೇರ್, ಹಾರ್ಡ್ ವೇರ್ ಲೈಕ್ ಮಾಡುವ ಚಿತ್ರ

  ಸಾಫ್ಟ್ ವೇರ್, ಹಾರ್ಡ್ ವೇರ್ ಲೈಕ್ ಮಾಡುವ ಚಿತ್ರ

  ಸಾಫ್ಟ್ ವೇರ್, ಹಾರ್ಡ್ ವೇರ್ ಇಬ್ಬರೂ ಲೈಕ್ ಮಾಡುವಂತಹ ಹಾಡಿದು. ಒಂದ್ಸಲ ಥಿಯೇಟರ್ ಗೆ ಹೋಗಿ ನೋಡೇ ಬಿಡೋಣ. ಅದೇನ್ ದಬ್ಬಾಕಿದ್ದಾರೋ ಎಂಬ ಅಭಿಪ್ರಾಯ ಹಾಡು ಕೇಳಿದ ಎಲ್ಲರಿಗೂ ಮೂಡಿದೆ.

  ಇಷ್ಟಕ್ಕೂ ಚಿತ್ರದ ಒನ್ ಲೈನ್ ಸ್ಟೋರಿ

  ಇಷ್ಟಕ್ಕೂ ಚಿತ್ರದ ಒನ್ ಲೈನ್ ಸ್ಟೋರಿ

  ಒಂದು ಹೊತ್ತಿನ ಊಟಕ್ಕೂ ಪರದಾಡುವವನೊಬ್ಬ 'ಕರೋಡ್ ಪತಿ' ಹೇಗಾಗುತ್ತಾನೆ ಎಂಬುದೇ ಚಿತ್ರದ ಒನ್ ಲೈನ್ ಸ್ಟೋರಿ. ಈ ಚಿತ್ರದಲ್ಲಿ ಸಾಕಷ್ಟು ಎಕ್ಸ್ ಪೋಸ್ ಇದ್ದ ಕಾರಣ ಪ್ರಿಯಾ ಎಂಬ ಹೊಸ ನಟಿ ಅಭಿನಯಿಸಲು ನಿರಾಕರಿಸಿದ್ದರು. ಆ ಜಾಗಕ್ಕೆ ದೆಹಲಿ ಮೂಲದ ಜಾಸ್ಮಿನ್ ಬಂದಿದ್ದರು.

  ಚಿತ್ರದ ನಾಯಕ ಮೀರಾ ನಂದನ್

  ಚಿತ್ರದ ನಾಯಕ ಮೀರಾ ನಂದನ್

  ಎಸ್ ಎನ್ ರಮೇಶ್ ನಿರ್ಮಿಸಿರುವ ಈ ಚಿತ್ರಕ್ಕೆ ಅಭಿಮಾನ್ ರಾಯ್ ಸಂಗೀತ ನೀಡಿದ್ದಾರೆ. ಚಿತ್ರದ ಉಳಿದ ತಾರಾಗಣದಲ್ಲಿ ಕೋಮಲ್ ಕುಮಾರ್, ಮೀರಾನಂದನ್, ಜಾಸ್ಮಿನ್, ಮಾಳವಿಕ, ಗುರುಪ್ರಸಾದ್, ಬಿರಾದರ್, ಡಿಂಗ್ರಿ ನಾಗರಾಜ್, ಜಯಶ್ರೀ ಕೃಷ್ಣ, ಯತಿರಾಜ್ ಮುಂತಾದವರಿದ್ದಾರೆ.

  English summary
  Comedy actor Komal Kumar's much expected Kannada movie Karodpathi releases on 14th March. Along with Komal Kumar, Meera Nandan, Guru Prasad, Jasmine are in cast. Music by Abhimann Roy, Directed by Ramesha PCR.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X