»   » ಸಿಂಹಳಿ ಭಾಷೆಯ 'ಕರ್ವ' ಮುಂದಿನ ವಾರ ಗ್ರ್ಯಾಂಡ್ ರಿಲೀಸ್.!

ಸಿಂಹಳಿ ಭಾಷೆಯ 'ಕರ್ವ' ಮುಂದಿನ ವಾರ ಗ್ರ್ಯಾಂಡ್ ರಿಲೀಸ್.!

Posted By:
Subscribe to Filmibeat Kannada

'ಕರ್ವ' ಸಿನಿಮಾ ಅಕ್ಷರಶಃ ಸ್ಯಾಂಡಲ್ ವುಡ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ದೆವ್ವ ಇದ್ಯೋ? ಇಲ್ವೋ? ಎಂಬ ಸಸ್ಪೆನ್ಸ್ ಇಟ್ಟುಕೊಂಡೇ ಗಾಂಧಿನಗರವನ್ನು ಗಡ ಗಡ ನಡುಗಿಸಿದ 'ಕರ್ವ' ಸಿನಿಮಾ ಇದೀಗ ಶ್ರೀಲಂಕಾದಲ್ಲೂ ಸೌಂಡ್ ಮಾಡಲಿದೆ.

ಹೌದು, ಶ್ರೀಲಂಕಾದ ಸಿಂಹಳಿ ಭಾಷೆಗೆ ಡಬ್ ಆಗಿರುವ 'ಕರ್ವ', ಮುಂದಿನ ವಾರ ಅಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. [ರೆಕಾರ್ಡ್ ಬೆಲೆಗೆ ಡಬ್ಬಿಂಗ್ ರೈಟ್ಸ್ ಸೇಲ್ ಮಾಡಿದ ಕನ್ನಡ ಚಿತ್ರ ಯಾವುದು.?]


kannada-movie-karva-dubbed-to-sinhalese-release-next-week

'ಕರ್ವ' ಚಿತ್ರದ ಕೆಲವು ಭಾಗ ಶ್ರೀಲಂಕಾದಲ್ಲಿ ಚಿತ್ರೀಕರಣಗೊಂಡಿತ್ತು. ಹೀಗಾಗಿ, ಅಲ್ಲಿನ ನೇಟಿವಿಟಿಗೆ ಹತ್ತಿರವಾಗಿರುವುದರಿಂದ, ಸಿಂಹಳಿ ನಟರೊಬ್ಬರೇ 'ಕರ್ವ' ಚಿತ್ರವನ್ನ ಡಬ್ ಮಾಡಿಸಲು ಆಸಕ್ತಿ ತೋರಿದ್ದರು. ['ಕರ್ವ' ವಿಮರ್ಶೆ: ರಾಜ ಬಂಗಲೆ ರಹಸ್ಯ ನೋಡಿ, ಭಯಪಡಿ!]


ಅದರಂತೆ, ಸದ್ಯ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿದೆ. ಸಬ್ ಟೈಟಲ್ ಹಾಕುವ ಕೆಲಸ ಕೂಡ ಮುಕ್ತಾಯಗೊಂಡಿದ್ದು, ಶ್ರೀಲಂಕಾದಲ್ಲಿ 'ಕರ್ವ' ಬಿಡುಗಡೆಗೆ ದಿನಗಣನೆ ಶುರುವಾಗಿದೆ.


ಸಿಂಹಳಿ ಭಾಷೆಗೆ ಡಬ್ ಆಗಿರುವ ಕನ್ನಡದ ಮೊದಲ ಚಿತ್ರ 'ಕರ್ವ' ಎಂಬುದು ನಿಮಗೆ ತಿಳಿದಿರಲಿ. ಈ ಚಿತ್ರದಲ್ಲಿ ದೇವರಾಜ್, ತಿಲಕ್, ಆರ್.ಜೆ ರೋಹಿತ್, ಪೂನಂ ಸಿಂಗಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನವನೀತ್ ಆಕ್ಷನ್ ಕಟ್ ಹೇಳಿರುವ 'ಕರ್ವ'ಗೆ ಕೃಷ್ಣ ಚೈತನ್ಯ ನಿರ್ಮಾಪಕರು.

English summary
The Very first Kannada film to be dubbed in Sinhalese language is 'Karva'. Sinhalese dubbed version of 'Karva' is all set to release in next week. Navneeth directorial 'Karva' features Kannada Actor Devaraj, Tilak, Rohit in the prominent role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada