»   » ರೆಕಾರ್ಡ್ ಬೆಲೆಗೆ ಡಬ್ಬಿಂಗ್ ರೈಟ್ಸ್ ಸೇಲ್ ಮಾಡಿದ ಕನ್ನಡ ಚಿತ್ರ ಯಾವುದು.?

ರೆಕಾರ್ಡ್ ಬೆಲೆಗೆ ಡಬ್ಬಿಂಗ್ ರೈಟ್ಸ್ ಸೇಲ್ ಮಾಡಿದ ಕನ್ನಡ ಚಿತ್ರ ಯಾವುದು.?

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎದ್ದಿದೆ. ಪ್ರತಿಭಾವಂತ ಹೊಸಬರು ಮಾಡುತ್ತಿರುವ ಹೊಸ ಹೊಸ ಪ್ರಯೋಗಗಳಿಗೆ ಕನ್ನಡ ಪ್ರೇಕ್ಷಕರು ಮಾತ್ರ ಅಲ್ಲ, ಪಕ್ಕದ ರಾಜ್ಯದವರೂ ಫಿದಾ ಆಗುತ್ತಿದ್ದಾರೆ. ಬಾಲಿವುಡ್ ಮಂದಿ ಕೂಡ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತಾಗಿದೆ.

ನವ ಪ್ರತಿಭೆಗಳ ಬಗ್ಗೆ ನಾವು ಇಷ್ಟೆಲ್ಲಾ ಪೀಠಿಕೆ ಹಾಕುತ್ತಿರುವುದಕ್ಕೆ ಕಾರಣ 'ಕರ್ವ' ಸಿನಿಮಾ. ಹೊಸ ಹುಡುಗ ನವನೀತ್ ನಿರ್ದೇಶನದ, ಕೃಷ್ಣ ಚೈತನ್ಯ ನಿರ್ಮಾಣದ ತಿಲಕ್, ರೋಹಿತ್ ಅಭಿನಯದ 'ಕರ್ವ' ಚಿತ್ರದಲ್ಲಿ ಕೆಲಸ ಮಾಡಿರುವ ತಂತ್ರಜ್ಞರೆಲ್ಲಾ ಹೊಸಬರೇ. ['ಕರ್ವ' ವಿಮರ್ಶೆ: ರಾಜ ಬಂಗಲೆ ರಹಸ್ಯ ನೋಡಿ, ಭಯಪಡಿ!]


kannada-movie-karva-hindi-dubbing-rights-sold-for-record-price

ಯುವಕರ ತಂಡಕ್ಕೆ ನಮ್ಮ ಕರ್ನಾಟಕ ಜನತೆ ಬೆನ್ನು ತಟ್ಟಿದ ಬೆನ್ನಲ್ಲೇ, ಬಾಲಿವುಡ್ ನ ಪ್ರತಿಷ್ಠಿತ ಫಿಲ್ಮ್ ಮೇಕಿಂಗ್ ಕಂಪನಿಯೊಂದು ರೆಕಾರ್ಡ್ ಮೊತ್ತ ಕೊಟ್ಟು 'ಕರ್ವ' ಚಿತ್ರದ ಡಬ್ಬಿಂಗ್ ರೈಟ್ಸ್ ಪಡೆದಿದೆ. (ದಾಖಲೆ ಬೆಲೆ ಎಷ್ಟು ಎಂಬುದು ಬಹಿರಂಗವಾಗಿಲ್ಲ)


ಈ ಮಧ್ಯೆ 'ಕರ್ವ' ಚಿತ್ರವನ್ನ ಹಿಂದಿ ಭಾಷೆಗೆ ರೀಮೇಕ್ ಮಾಡುವ ಬಗ್ಗೆ ಕೂಡ ಮಾತುಕತೆ ನಡೆಯುತ್ತಿದೆ. ಹೇಳಿ ಕೇಳಿ, ಬಾಲಿವುಡ್ ನಲ್ಲಿ ಸಸ್ಪೆನ್ಸ್-ಥ್ರಿಲ್ಲರ್ ಚಿತ್ರಗಳಿಗೆ ಬೇಡಿಕೆ ಹೆಚ್ಚು. 'ಕರ್ವ' ಚಿತ್ರದಲ್ಲಿ ಕಡೆವರೆಗೂ ಕುತೂಹಲ ಇರುವುದರಿಂದ ಬಿಟೌನ್ ಮಂದಿ ಕ್ಲೀನ್ ಬೌಲ್ಡ್ ಆಗಿದ್ದಾರೆ. [ಇಡೀ ಭಾರತದಾದ್ಯಂತ ಸದ್ದು-ಸುದ್ದಿ ಮಾಡಲಿದೆ ಕನ್ನಡದ 'ಕರ್ವ'.!]

English summary
Suspense-thriller Kannada film 'Karva' Hindi dubbing rights is sold for Record Price. Navneeth directorial 'Karva' features Kannada Actor Devaraj, Tilak, Rohit in the prominent role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada