»   » ಇಡೀ ಭಾರತದಾದ್ಯಂತ ಸದ್ದು-ಸುದ್ದಿ ಮಾಡಲಿದೆ ಕನ್ನಡದ 'ಕರ್ವ'.!

ಇಡೀ ಭಾರತದಾದ್ಯಂತ ಸದ್ದು-ಸುದ್ದಿ ಮಾಡಲಿದೆ ಕನ್ನಡದ 'ಕರ್ವ'.!

Posted By:
Subscribe to Filmibeat Kannada

ಕಳೆದ ತಿಂಗಳಷ್ಟೇ ಕರ್ನಾಟಕ ರಾಜ್ಯಾದ್ಯಂತ 'ಕರ್ವ' ಸಿನಿಮಾ ತೆರೆಗೆ ಬಂದಿತ್ತು. ಪ್ರೇಕ್ಷಕರಿಂದ ಶಿಳ್ಳೆ-ಚಪ್ಪಾಳೆ ಗಿಟ್ಟಿಸಿ, ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾಗಿದ್ದ 'ಕರ್ವ' ಸಿನಿಮಾ ಇದೀಗ ಭಾರತದಾದ್ಯಂತ ಬಿಡುಗಡೆ ಆಗುತ್ತಿದೆ.

ಚೊಚ್ಚಲ ಬಾರಿಗೆ ನವನೀತ್ ನಿರ್ದೇಶನದ 'ಕರ್ವ' ಚಿತ್ರಕ್ಕೆ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಿರುವ ಅಭೂತಪೂರ್ವ ಪ್ರತಿಕ್ರಿಯೆ ನೋಡಿ, ಬೇರೆ ರಾಜ್ಯಗಳ ವಿತರಕರು ಭಾರತದಾದ್ಯಂತ ರಿಲೀಸ್ ಮಾಡಲು ಮುಂದೆ ಬಂದಿದ್ದಾರೆ. ['ಕರ್ವ' ವಿಮರ್ಶೆ: ರಾಜ ಬಂಗಲೆ ರಹಸ್ಯ ನೋಡಿ, ಭಯಪಡಿ!]


kannada-movie-karva-to-release-all-over-india-shortly

ಹೀಗಾಗಿ, ಮುಂಬೈ, ಆಂಧ್ರ ಪ್ರದೇಶ, ತೆಲಾಂಗಣ, ಚೆನ್ನೈ, ಕೇರಳಾ, ದೆಹಲಿ ಸೇರಿದಂತೆ ಭಾರತದ ಪ್ರಮುಖ ಪ್ರಾಂತ್ಯಗಳಲ್ಲಿ 'ಕರ್ವ' ಸಿನಿಮಾ ಸದ್ಯದಲ್ಲೇ ಗ್ರ್ಯಾಂಡ್ ರಿಲೀಸ್ ಆಗಲಿದೆ. ಬಿಡುಗಡೆ ದಿನಾಂಕ ಇಂದು ಅಥವಾ ನಾಳೆ ನಿಗದಿ ಆಗಲಿದೆ.


'6-5=2' ಸಿನಿಮಾ ಬಳಿಕ 'ಕರ್ವ' ಮೂಲಕ ನಿರ್ಮಾಪಕ ಕೃಷ್ಣ ಚೈತನ್ಯ ಗೆಲುವಿನ ಓಟ ಮುಂದುವರೆಸಿದಂತಾಗಿದೆ.


ತಿಲಕ್, ರೋಹಿತ್, ದೇವರಾಜ್, ಅನಿಶಾ ಅಂಬ್ರೋಸ್, ಅನು ಪೂವಮ್ಮ, ಪೂನಂ ಸಿಂಗಾರ್, ವಿಜಯ್ ಚೆಂಡೂರ್ 'ಕರ್ವ' ಚಿತ್ರದ ಪ್ರಮುಖ ತಾರಾಗಣದಲ್ಲಿದ್ದು, ಎಲ್ಲರೂ ಉತ್ತಮ ಪರ್ಫಾಮೆನ್ಸ್ ನೀಡಿದ್ದರು.

English summary
Suspense-thriller film 'Karva' is all set release All Over India shortly. Navneeth directorial 'Karva' features Kannada Actor Devaraj, Tilak, Rohit in the prominent role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada