For Quick Alerts
  ALLOW NOTIFICATIONS  
  For Daily Alerts

  ಮಗಳ ಜೊತೆ ಓಂ ಪ್ರಕಾಶ್ ಹೊಸ 'ಕಟ್ಟೆ' ಪುರಾಣ

  By Rajendra
  |

  ಓಂಪ್ರಕಾಶ್ ರಾವ್ ಮತ್ತೊಂದು ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಅವರು ತಮ್ಮ ಮಗಳು ಶ್ರಾವ್ಯಾ ನಾಯಕಿಯಾಗಿರುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ಗೊತ್ತೇ ಇದೆ. ಚಿತ್ರದಲ್ಲಿ ಇಬ್ಬರು ನಾಯಕರು ನಾಗಶೇಖರ್ ಮತ್ತು ಚಂದನ್.

  'ಚಂದ್ರಲೇಖ' ಯಶಸ್ಸಿನ ಬಳಿಕ ಓಂಪ್ರಕಾಶ್ ರಾವ್ ನಿರ್ದೇಶಿಸುತ್ತಿರುವ ಮತ್ತೊಂದು ರೀಮೇಕ್ ಚಿತ್ರ ಇದಾಗಿದೆ. ಇದು ತಮಿಳಿನ 'ಕೇಡಿ ಬಿಲ್ಲಾ ಕಿಲಾಡಿ ರಂಗ' ಚಿತ್ರದ ಕನ್ನಡ ಆವೃತ್ತಿ. ಇನ್ನು ಈ ಚಿತ್ರವನ್ನು ಕನ್ನಡದಲ್ಲಿ ಉಮೇಶ್ ರೆಡ್ಡಿ ನಿರ್ಮಿಸುತ್ತಿದ್ದಾರೆ. [ಮಗಳು ಶ್ರಾವ್ಯಾ ಜತೆ 'ಕಟ್ಟೆ' ಮೇಲೆ ಓಂ ಪ್ರಕಾಶ್ ರಾವ್]

  ಈ ಚಿತ್ರದಲ್ಲಿ ಶ್ರಾವ್ಯಾ ಜೊತೆಗೆ ಮತ್ತೊಬ್ಬ ನಾಯಕಿಯೂ ಇದ್ದಾರೆ. ಚಂದನ್ ಜೊತೆಗೆ ವೃಕ್ಷಾ ಇದ್ದರೆ, ನಾಗಶೇಖರ್ ಗೆ ಶ್ರಾವ್ಯಾ ಜೋಡಿ. ಕೇವಲ ಮೂವತ್ತೆಂಟು ದಿನಗಳಲ್ಲಿ ಚಿತ್ರೀಕರಣ ಮುಗಿಸಲು ಯೋಜನೆ ಹಾಕಿಕೊಳ್ಳಲಾಗಿದೆ.

  ಅಣಜಿ ನಾಗರಾಜ್ ಅರ್ಪಿಸುವ ರೇಣುಕ ಮೂವಿ ಮೆಕರ್ಸ್ ಅಡಿಯಲ್ಲಿ ಉಮೇಶ್ ರೆಡ್ಡಿ ಎ ಎಂ ಅವರು ನಿರ್ಮಿಸುತ್ತಿರುವ 'ಕಟ್ಟೆ' ಸಿನಿಮಾಕ್ಕೆ ಎಂ ಎಸ್ ರಮೇಶ್ ಅವರ ಸಂಭಾಷಣೆ ಇದೆ, ಲಕ್ಷ್ಮಣ್ ರೆಡ್ಡಿ ಅವರ ಸಂಕಲನ, ಕಲೈ ಹಾಗೂ ತ್ರಿಭುವಣ್ ಅವರ ನೃತ್ಯ ನಿರ್ದೇಶನವಿದೆ.

  ಕಟ್ಟೆ' ತಂದೆ ಹಾಗೂ ಮಗನ ಬಾಂಧವ್ಯದ ಬಗ್ಗೆ ಅಲ್ಲದೆ ಒಂದು ಸುಮಧುರ ಪ್ರೀತಿ ಜೊತೆಗೆ ಯುವ ಜನತೆಯಲ್ಲಿ ಒಂದು ಪ್ರಜ್ಞೆ ಸಹ ಮೂಡಿಸುವ ವಸ್ತುವನ್ನು ಹೊಂದಿದೆ. ಶ್ರೀರಂಗಪಟ್ಟಣದ ಸುತ್ತಮುತ್ತ ಮೊದಲನೇ ಹಂತದ ಚಿತ್ರೀಕರಣ ಪ್ರಾರಂಭವಾಗಿದೆ.

  ಎರಡನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಪ್ರಾರಂಭವಾಗಲಿದೆ. ಪಾತ್ರವರ್ಗದಲ್ಲಿ ನಾಗಶೇಖರ್, ರೂಕ್ಸಾ, ಓಂ ಪ್ರಕಾಶ್ ರಾವ್, ಶ್ರೀನಿವಾಸಮೂರ್ತಿ, ಅವಿನಾಶ್, ಸತ್ಯಜಿತ್, ಲಕ್ಷ್ಮಣ್ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ. (ಫಿಲ್ಮಿಬೀಟ್ ಕನ್ನಡ)

  English summary
  Om Prakash Rao directional venture 'Katte' is a remake of Tamil movie Kedi Billa Khiladi Ranga. There are two heroines in the film and while Shravya is cast opposite Nagashekhar, Vriksha is seen opposite Chandan in this film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X