For Quick Alerts
  ALLOW NOTIFICATIONS  
  For Daily Alerts

  ಟ್ವಿಟ್ಟರ್-ಫೇಸ್ ಬುಕ್ಕಿನಲ್ಲಿ ವೀರಪ್ಪನ್ ಹವಾ ಶುರು ಗುರು

  By Suneetha
  |

  ತೆಲುಗಿನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಆಕ್ಷನ್-ಕಟ್ ಹೇಳಿರುವ ಬಹುನಿರೀಕ್ಷಿತ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಇಂದು ( ಜನವರಿ 1) ಬೆಂಗಳೂರಿನ ಕಪಾಲಿ ಚಿತ್ರಮಂದಿರದಲ್ಲಿ ಹಾಗೂ ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಿದ್ದು, ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

  ಈ ವರ್ಷ ಆರಂಭವಾಗುವಾಗಲೇ ನಿರ್ದೇಶಕರು ಈ ಸಿನಿಮಾ ಬಿಡುಗಡೆ ಮಾಡಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿಮಾನಿಗಳಿಗೆ ಹೊಸ ವರ್ಷಕ್ಕೆ ಭರ್ಜರಿ ಉಡುಗೊರೆ ನೀಡಿದಂತಾಗಿದೆ.[ವಿಘ್ನ ನಿವಾರಣೆ ಆಯ್ತು, ಜ.1ಕ್ಕೆ ವೀರಪ್ಪನ್ ಬೇಟೆ ಪಕ್ಕಾ]

  ಬೆಂಗಳೂರಿನ ತಾವರೆಕೆರೆ ಲಕ್ಷ್ಮಿ ಚಿತ್ರಮಂದಿರದಲ್ಲಿ ಇಂದು ಮುಂಜಾನೆ 6 ಘಂಟೆಗೆ 'ಕಿಲ್ಲಿಂಗ್ ವೀರಪ್ಪನ್' ಶೋ ಆರಂಭವಾಗಿದೆ. ನಿನ್ನೆ ಮಧ್ಯರಾತ್ರಿವರೆಗೂ ಹೊಸ ವರ್ಷದ ಪಾರ್ಟಿ ಆಚರಿಸಿದ ಗುಂಗಲ್ಲೆ ಇಂದು ಸಿನಿರಸಿಕರು ಚಿತ್ರಮಂದಿರಕ್ಕೆ ವೀರಪ್ಪನ್ ನನ್ನು ನೋಡಲು ನಿದ್ದೆಗಣ್ಣಲ್ಲಿ ಆಗಮಿಸಿದ್ದಾರೆ.

  ಈಗಾಗಲೇ ಸಿನಿಮಾ ನೋಡಲು ಥಿಯೇಟರ್ ಗೆ ನುಗ್ಗಿರುವ ಅಭಿಮಾನಿಗಳು ತಮ್ಮ ಅಭಿಪ್ರಾಯಗಳನ್ನು ಫೇಸ್ ಬುಕ್ಕ್ ಮತ್ತು ಟ್ವಿಟ್ಟರ್ ಗಳಲ್ಲಿ ವ್ಯಕ್ತಪಡಿಸಿದ್ದಾರೆ ಅದೇನೆಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

  ರಾಕ್ಷಸನ ರೂಪ ತಾಳಿದ ಶಿವಣ್ಣ

  ರಾಕ್ಷಸನ ರೂಪ ತಾಳಿದ ಶಿವಣ್ಣ

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಈ ಸಿನಿಮಾದಲ್ಲಿ ಸೂಪರ್ ಕಾಪ್ ಆಗಿ ಕಾಡುಗಳ್ಳ ವೀರಪ್ಪನ್ ಅವರ ಬೇಟೆಯಾಡಲು ಸಜ್ಜಾಗಿದ್ದಾರೆ. ಅಂದಹಾಗೆ ಇವರು ವೀರಪ್ಪನ್ ಗಿಂತಲೂ ಭಯಂಕರವಾಗಿ ಚಿತ್ರದಲ್ಲಿ ಮಿಂಚಿದ್ದಾರೆ. 'ಒಬ್ಬ ರಾಕ್ಷಸನ ಸಂಹಾರಕ್ಕೆ ಮತ್ತೊಬ್ಬ ರಾಕ್ಷಸನಾಗಿ ರೂಪಾಂತರಗೊಳ್ಳಬೇಕು ಮತ್ತು ಈ ಪಾತ್ರಕ್ಕೆ ಆ ರೂಪಾಂತರ ಅವಶ್ಯಕವಾಗಿತ್ತು' ಎನ್ನುತ್ತಾರೆ ಶಿವಣ್ಣ.[ಚಂದನವನದಲ್ಲಿ ಮತ್ತೆ ಕಮಾಲ್ ಮಾಡಲಿರುವ 'ಕಿಲ್ಲಿಂಗ್' ಜೋಡಿ]

  ಶಿವರಾಜ್ ಕುಮಾರ್ ಯುವ ಸೇನೆ

  ಇಡೀ ಕರ್ನಾಟಕದಾದ್ಯಂತ ಇಂದು 'ಕಿಲ್ಲಿಂಗ್ ವೀರಪ್ಪನ್' ಸಿನಿಮಾಗೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಈಗಾಗಲೇ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಚಿತ್ರವನ್ನು ಇಂದು ಬೆಳ್ಳಂಬೆಳಗ್ಗೆ ವೀಕ್ಷಿಸಿರುವ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಅಭಿಮಾನಿಗಳ ಸಂಘ 'ಬಾಸ್ ಹವಾ' ಎಂದು ಫೇಸ್ ಬುಕ್ಕಿಗೆ ಫೊಟೋ ಅಪ್ ಲೋಡ್ ಮಾಡಿದ್ದಾರೆ.

  ಶಿವಣ್ಣ ಅವರ ಅಭಿಮಾನಿಗಳನ್ನು ಯಾರೂ ಮೀರಕ್ಕಾಗಲ್ಲ.

  ಇಡೀ ಭಾರತದಲ್ಲಿ ಯಾವೊಬ್ಬ ಹೀರೋಗು ಸಿನಿಮಾ ಬಿಡುಗಡೆ ಆಗುವ 1 ವಾರದ ಮುಂಚೆಯೆ ಚಿತ್ರಮಂದಿರದ ಮುಂದೆ ಕಟೌಟ್ ನಿಲ್ಲಿಸಿ ಹಾರ ಹಾಕಿ ಹಾಲಿನ ಅಭಿಷೇಕ ಮಾಡುವ ಅಭಿಮಾನಿಗಳು ಕರುನಾಡ ಚಕ್ರವರ್ತಿ ಡಾ.ಶಿವಣ್ಣ ಅಭಿಮಾನಿಗಳು ಮಾತ್ರ. ಗಾಂಧಿನಗರದ ಗಂಡು ಶಿವಣ್ಣಗೆ ಜೈ ಎಂದ ಅಭಿಮಾನಿಗಳು ಫೇಸ್ ಬುಕ್ಕಿನಲ್ಲಿ ಹಾಕಿಕೊಂಡಿದ್ದಾರೆ.

  ಅಭಿಮಾನಿ ಅವಿನಾಶ್ ಆರ್.ಪಿ

  ಶಿವಣ್ಣ ಅವರ ವೀರಪ್ಪನ್ ಹವಾ ಎಷ್ಟು ಜೋರಾಗಿದೆ ಅಂದ್ರೆ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿಮಾನಿ ಅವಿನಾಶ್ ಆರ್.ಪಿ ಎನ್ನುವವರು ಹೊಸ ವರ್ಷದ ಸಂಭ್ರಮಾಚರಣೆ ಮುಗಿಸಿ ಸುಮಾರು 2.45 ಕ್ಕೆ ಮಲಗಿದವರು ಬೆಳ್ಳಂಬೆಳಗ್ಗೆ 6.15 ರ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಶೋಗೆ ತಾವರೆಕೆರೆಯ ಲಕ್ಷ್ಮಿ ಚಿತ್ರಮಂದಿರಕ್ಕೆ ಹೋಗಿದ್ದೇನೆ ಎಂದು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.

  ಇಲ್ಲಿ ಯಾರು ಪಾತ್ರಗಳನ್ನು ಮಾಡಿಲ್ಲತಾವೇ ಪಾತ್ರಧಾರಿಗಳಾಗಿದ್ದಾರೆ..ವೀರಪ್ಪನ್ ಕುರಿತು ಮೂರ್ನಾಲ್ಕು ಸಿನಿಮಾ ಬಂದಿರಬಹುದು ಆದರೆ ಇದು ಪೂರ್ಣ ಭ...

  Posted by Sagar Manasu on Thursday, December 31, 2015

  ಶಿವಣ್ಣ ಅವರ ಅಭಿಮಾನಿ ಸಾಗರ್ ಮನಸು

  'ಇಲ್ಲಿ ಯಾರು ಪಾತ್ರಗಳನ್ನು ಮಾಡಿಲ್ಲ ತಾವೇ ಪಾತ್ರಧಾರಿಗಳಾಗಿದ್ದಾರೆ. ವೀರಪ್ಪನ್ ಕುರಿತ ಮೂರ್ನಾಲ್ಕು ಸಿನಿಮಾ ಬಂದಿರಬಹುದು ಆದರೆ ಇದು ಪೂರ್ಣ ಭಿನ್ನ-ವಿಭಿನ್ನ. ಇಲ್ಲಿ ಡಾ.ಶಿವರಾಜ್ ಕುಮಾರ್ ಎಂಬ ದೈತ್ಯ ಪ್ರತಿಭೆ ಇದೆ. ಆ ಪ್ರತಿಭೆಗೆ ಸಂದೀಪ್, ಸಂಚಾರಿ ವಿಜಯ್, ರಾಜೇಶ್, ಪಾರುಲ್, ಯಜ್ಞಾ ಶೆಟ್ಟಿ ಹಾಗೂ ಅನೇಕ ಕಲಾವಿದರು ಸಾಥ್ ನೀಡಿದ್ದಾರೆ. ವರ್ಮಾ ಕಿಲ್ಲಿಂಗ್ ಮೂಲಕ ತಮ್ಮ ಹಳೇ ಚಾರ್ಮ್ ಗೆ ಮರಳಿದ್ದಾರೆ ನಿಜ ವೀರಪ್ಪನ್ ತೆರೆಯ ಮೇಲೆ ಅಟ್ಟಹಾಸ ಮೆರೆದಿದ್ದಾನೆ. ಇಡೀ ಚಿತ್ರವನ್ನು ಆವರಿಸಿಕೊಂಡಿರುವ ಶಿವಣ್ಣ ತಮ್ಮ ಕಣ್ಣುಗಳಿಂದಲೇ ತೆರೆಯಲ್ಲಿ ಅಬ್ಬರಿಸಿದ್ದಾರೆ. ವಿರಾಮದ ಮೊದಲು ಶಿವಣ್ಣ ಅಣ್ಣಾವ್ರ ಅದೇ ಕಣ್ಣು, ಚಿತ್ರ ನೆನಪಿಸುತ್ತಾರೆ. ಎಂದು ಚಿತ್ರ ವೀಕ್ಷಿಸಿದ ಶಿವಣ್ಣ ಅವರ ಅಭಿಮಾನಿ ಸಾಗರ್ ಮನಸು ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದಾರೆ.

  ನಿರ್ದೇಶಕ ರಾಮ್ ಗೋಪಾಲ್ ವರ್ಮಾ

  ಒಂದು ವೇಳೆ ನಾನು 'ಕಿಲ್ಲಿಂಗ್ ವೀರಪ್ಪನ್' ಸಿನಿಮಾವನ್ನು ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಅವರಿಗೆ ತೋರಿಸಿದರೆ ಅವರು ಏನು ಮಾಡಬಹುದು ಎಂದು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಟ್ವೀಟ್ ಮಾಡಿದ್ದಾರೆ.

  'ಕಿಲ್ಲಿಂಗ್' ನಿರ್ದೇಶಕ ಆರ್.ಜಿ.ವಿ

  'ತುಂಬಾ ಜನ 'ಕಿಲ್ಲಿಂಗ್ ವೀರಪ್ಪನ್' ಟ್ರೈಲರ್ ನೋಡಿದ ನಂತರ ಹಲವರು ಹೆದರಿಕೊಂಡಿದ್ದರು. ಆದರೆ ನಾನು ಒಂದೊಳ್ಳೆಯ ಸಿನಿಮಾ ಮಾಡಿದ್ದೇನೆ'. ಎಂದು ನಿರ್ದೇಶಕ ವರ್ಮಾ ಅವರು ಟ್ವೀಟ್ ಮಾಡಿದ್ದಾರೆ.

  ರಾಮ್ ಗೋಪಾಲ್ ವರ್ಮಾ

  'ಪೊಲೀಸ್ ಗಳು ಕ್ರೂರರಾದ್ರೆ, ಕ್ರಿಮಿನಲ್ ಗಳ ಕ್ರೂರತ್ವ ಕೂಡ ಕಡಿಮೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂಬುದೇ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಮುಖ್ಯ ಪಾಯಿಂಟ್' ಎಂದು ನಿರ್ದೇಶಕ ಆರ್.ಜಿ.ವಿ ಅವರು ಟ್ವೀಟ್ ಮಾಡಿದ್ದಾರೆ.

  ಮೈಸೂರಿನ ಶಾಂತಲಾ ಥಿಯೇಟರ್ ನಲ್ಲಿ ಟಿಕೆಟ್ ಸೋಲ್ಡ್ ಔಟ್

  ಮೈಸೂರಿನ ಶಾಂತಲಾ ಥಿಯೇಟರ್ ನಲ್ಲಿ ನಿನ್ನೆಯಿಂದಲೇ ಟಿಕೆಟ್ ಹಂಚಲು ಶುರು ಹಚ್ಚಿಕೊಂಡಿದ್ದು, ಈಗಾಗಲೇ ಎಲ್ಲಾ ಟಿಕೆಟ್ ಗಳು ಸೋಲ್ಡ್ ಔಟ್ ಆಗಿ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ ಎಂದು ಶಿವು ಅಡ್ಡಾ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

  ನಟಿ ಪಾರುಲ್ ಯಾದವ್

  ಸುದೀರ್ಘ ಮತ್ತು ತುಂಬಾ ಜೋಕ್ ಆಗಿರೋ ಸಂದರ್ಶನವನ್ನು ಇಂದು ಬಿಡುಗಡೆಯಾಗುತ್ತಿರುವ 'ಕಿಲ್ಲಿಂಗ್ ವೀರಪ್ಪನ್'ಗಾಗಿ ಎದುರಿಸುತ್ತಿದ್ದೇನೆ. ಅಭಿಮಾನಿಗಳೇ ನೀವು ನಿಜವಾಗಲೂ ಈ ಸಿನಿಮಾವನ್ನು ತುಂಬಾ ಇಷ್ಟ ಪಡುತ್ತೀರಿ ಎಂದು ಅಂದುಕೊಂಡಿದ್ದೇನೆ. ಯಾಕೆಂದರೆ ನಾನು ಈ ಸಿನಿಮಾದಲ್ಲಿ ಇದ್ದೇನೆ ಎಂದು ನಟಿ ಪಾರುಲ್ ಅವರು ಟ್ವೀಟ್ ಮಾಡಿದ್ದಾರೆ.

  English summary
  Twitter and Facebook reaction to Kannada Movie 'Killing Veerappan' which got released on January 1st. The movie is directed by Ram Gopal Varma, Kannada Actor Shiva Rajkumar, Kannada Actress Parul Yadav, Actress Yagna Shetty in the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X