For Quick Alerts
  ALLOW NOTIFICATIONS  
  For Daily Alerts

  ರಕ್ಷಿತ್ ಶೆಟ್ಟಿ ಅವರ ಜೊತೆ ನಟಿಸಲು ಇಲ್ಲಿದೆ ಉತ್ತಮ ಅವಕಾಶ

  By Suneetha
  |

  'ಉಳಿದವರು ಕಂಡಂತೆ' ಹಾಗೂ 'ರಿಕ್ಕಿ' ಚಿತ್ರಗಳ ಯಶಸ್ವಿ ನಟ ರಕ್ಷಿತ್ ಶೆಟ್ಟಿ ಅವರು ತಮ್ಮ ಮುಂದಿನ ಹೊಸ ಚಿತ್ರದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಲು ನಿರ್ಧರಿಸಿದ್ದಾರೆ.

  'ರಿಕ್ಕಿ' ಸಿನಿಮಾ ಮಾಡಿದ್ದ ನಿರ್ದೇಶಕ ರಿಶಬ್ ಶೆಟ್ಟಿ ಮತ್ತು ನಟ ಕಮ್ ನಿರ್ದೇಶಕ ರಿಶಬ್ ಶೆಟ್ಟಿ ಅವರು ಇದೀಗ ಮತ್ತೆ 'ಕಿರಿಕ್ ಪಾರ್ಟಿ' ಎಂಬ ಹೊಸ ಸಿನಿಮಾ ಮಾಡಲು ಹೊರಟಿದ್ದು, ಆ ಚಿತ್ರದಲ್ಲಿ ಹೊಸಬರಿಗೆ ಅವಕಾಶ ಕೊಡಲು ಪ್ರತಿಭೆಗಳ ಅನ್ವೇಷಣೆಯಲ್ಲಿ ತೊಡಗಿದ್ದಾರೆ.[ರಕ್ಷಿತ್ ಶೆಟ್ಟಿ 'ಕಿರಿಕ್ ಪಾರ್ಟಿ' ಸದ್ಯದಲ್ಲೇ ಶುರು ಕಣ್ರೀ.!]

  ನಟ ರಕ್ಷಿತ್ ಶೆಟ್ಟಿ ಅವರ ನಿರ್ಮಾಣ ಸಂಸ್ಥೆ ಪರಂವಾ ಸ್ಟುಡಿಯೋಸ್ ನಿಂದ ಮೂಡಿಬರುತ್ತಿರುವ ಚೊಚ್ಚಲ ಚಿತ್ರ 'ಕಿರಿಕ್ ಪಾರ್ಟಿ'. ಈ ಚಿತ್ರಕ್ಕೆ ಕಾಲೇಜಿಗೆ ಹೋಗುವ ಹುಡುಗ-ಹುಡುಗಿಯರ ಪಾತ್ರ ಮಾಡಲು ನಟ-ನಟಿಯರು ಬೇಕಾಗಿದ್ದಾರೆ.[ನಟ-ನಿರ್ದೇಶಕನ ನಂತರ ನಿರ್ಮಾಪಕರಾಗಿ ಶೆಟ್ರ ಹೊಸ ವರಸೆ]

  ಸುಮಾರು 20 ರಿಂದ 30 ವರ್ಷ ವಯಸ್ಸಿನ ಪ್ರತಿಭೆಗಳ ಅನ್ವೇಷಣೆಯಲ್ಲಿ ಇರುವ 'ಕಿರಿಕ್ ಪಾರ್ಟಿ' ಚಿತ್ರತಂಡ ಮಾರ್ಚ್ 6 ಮತ್ತು 7ನೇ ತಾರೀಖಿನಂದು ಆಡಿಷನ್ ಗೆ ಕರೆದಿದ್ದಾರೆ. ರಿಶಬ್ ಶೆಟ್ಟಿ ಅವರ ಟ್ವೀಟ್ ಇಲ್ಲಿದೆ ನೋಡಿ...

  ಬೆಂಗಳೂರಿನ ಜಯನಗರದಲ್ಲಿರುವ ವಿಜಯಾ ಕಾಲೇಜಿನಲ್ಲಿ ಆಡಿಷನ್ ನಡೆಯಲಿದ್ದು, ಆಡಿಷನ್ ನಲ್ಲಿ ನಿರ್ದೇಶಕ ರಿಶಬ್ ಶೆಟ್ಟಿ, ನಟ ರಕ್ಷಿತ್ ಶೆಟ್ಟಿ ಸೇರಿದಂತೆ ಚಿತ್ರತಂಡದ ಕೆಲವು ಪ್ರಮುಖರು ಪ್ರತಿಭೆಗಳನ್ನು ಆಯ್ಕೆ ಮಾಡಲಿದ್ದಾರೆ.[ನೀವು 'ರಂಗಿತರಂಗ' ತಂಡದೊಂದಿಗೆ ಕೆಲಸ ಮಾಡಬೇಕೆ? ಇಲ್ಲಿದೆ ಅವಕಾಶ!]

  ಯಾರ್ಯಾರಿಗೆ ಸಿನಿಮಾದಲ್ಲಿ ನಟಿಸಬೇಕೆಂದು ಆಸೆ ಇದೆ. ಯಾರಿಗೆಲ್ಲಾ ಟ್ಯಾಲೆಂಟ್ ಇದೆ. ಯಾರೆಲ್ಲಾ ಆಸಕ್ತರು ಇದ್ದೀರೋ ಎಲ್ಲರೂ ವಿಜಯಾ ಕಾಲೇಜಿಗೊಮ್ಮೆ ಭೇಟಿ ಕೊಟ್ಟು ಆಡಿಷನ್ ನಲ್ಲಿ ಪಾಲ್ಗೊಳ್ಳಿ.

  English summary
  Kannada movie 'Kirik Party' team launches talent hunt. Director Rishab Shetty and Actor Rakshit Shetty are teaming up again for the new film 'Kirik Party'. They have invited people with creative talent.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X