»   » ಜುಲೈ 7ರಂದು ಗಾಂಧಿನಗರಕ್ಕೆ ಬರ್ತಿದೆ 'ಕೋಲಾರ'

ಜುಲೈ 7ರಂದು ಗಾಂಧಿನಗರಕ್ಕೆ ಬರ್ತಿದೆ 'ಕೋಲಾರ'

Posted By:
Subscribe to Filmibeat Kannada

ಲೂಸ್ ಮಾದ ಖ್ಯಾತಿಯ ಯೋಗಿ ಅಭಿನಯದ ಕೋಲಾರ ಚಿತ್ರ ಬಿಡುಗಡೆ ಸಿದ್ದವಾಗಿದೆ. ಈಗಾಗಲೇ ಟ್ರೈಲರ್ ಮತ್ತು ಹಾಡುಗಳನ್ನ ಬಿಡುಗಡೆ ಮಾಡಿ ಕುತೂಹಲ ಹುಟ್ಟಿಹಾಕಿರುವ 'ಕೋಲಾರ' ಜುಲೈ 7 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ.

ಅಂದ್ಹಾಗೆ, 'ಕೋಲಾರ' ನೈಜ ಘಟನೆಯಾಧಾರಿತ ಸಿನಿಮಾವಾಗಿದ್ದು, ರೌಡಿಂ ತಂಗಂ ಕಥೆ ಎಂದು ಹೇಳಲಾಗ್ತಿದೆ. ಸದ್ಯ, ಟ್ರೈಲರ್ ನಲ್ಲೂ ಬರಿ ಮಚ್ಚು, ಲಾಂಗುಗಳೇ ಜಳಪಳಿಸಿದ್ದು, ಸಖತ್ ಮಾಸ್ ಆಗಿದೆ.

ಲೂಸ್ ಮಾದ ಯೋಗಿಗೆ ಇಂಡಸ್ಟ್ರಿಯಲ್ಲಿ ಬೆಸ್ಟ್ ಫ್ರೆಂಡ್ ಯಾರು?

Kannada Movie 'Kolar' is all set to Release on July 7th

ಆರ್ಯ ಎಂ ಮಹೇಶ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಲಕ್ಷ್ಮಿ ನಾರಾಯಣ ಮತ್ತು ರಮೇಶ್ ಎಂಬುವರು ಜಂಟಿ ನಿರ್ಮಾಣ ಮಾಡಿದ್ದಾರೆ. ಬಿ ಆರ್ ಹೇಮಂತ್ ಕುಮಾರ್ ಅವರ ಸಂಗೀತ ಚಿತ್ರಕ್ಕಿದೆ. 'ಬೆತ್ತನಗೆರೆ', 'ಊಟಿ' ಚಿತ್ರಗಳಲ್ಲಿ ನಟಿಸಿದ್ದ ನೈನಾ ಸರ್ವೆರ್ ಈ ಚಿತ್ರದಲ್ಲಿ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ.

ಕೊಟ್ಟ ಮಾತು ಉಳಿಸಿಕೊಳ್ಳದೇ ಅಮ್ಮನಿಂದ ಕಪಾಳಕ್ಕೆ ಏಟುತಿಂದಿದ್ರು ಯೋಗಿ! ಏಕೆ?

ಉಳಿದಂತೆ ಚಿತ್ರದಲ್ಲಿ ಶೋಭರಾಜ್, ತಿಲಕ್, ಅಕ್ಷಯ್, ತಮಿಳಿನ ರಾಜೇಂದ್ರನ್, ಸಂಪತ್ ಕುಮಾರ್ ಸೇರಿದಂತೆ ಹಲವರು 'ಕೋಲಾರ' ಚಿತ್ರದಲ್ಲಿ ನಟಿಸಿದ್ದಾರೆ.

English summary
Kannada Actor Loose Mada Yogesh starrer Kannada Movie 'Kolar' is all set to release on July 7th all over Karnataka. The movie is directed by Aryaa Mahesh features Naina Sarwar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada