»   » ತಮಿಳು-ತೆಲುಗಿನಲ್ಲಿ 'ಕೃಷ್ಣಲೀಲಾ' ರೀಮೇಕ್ ಪಕ್ಕಾ!

ತಮಿಳು-ತೆಲುಗಿನಲ್ಲಿ 'ಕೃಷ್ಣಲೀಲಾ' ರೀಮೇಕ್ ಪಕ್ಕಾ!

Posted By:
Subscribe to Filmibeat Kannada

'ಸ್ಯಾಂಡಲ್ ವುಡ್ ಕೃಷ್ಣ' ಅಜೇಯ್ ರಾವ್ ನಟಿಸಿ, ನಿರ್ಮಿಸಿರುವ 'ಕೃಷ್ಣಲೀಲಾ' ಚಿತ್ರ ಗಾಂಧಿನಗರದಲ್ಲಿ ಭರ್ಜರಿ ಬಿಜಿನೆಸ್ ಮಾಡಿದೆ. 'ಕೃಷ್ಣಲೀಲಾ' ಚಿತ್ರವನ್ನ ವೀಕ್ಷಿಸಿ ಕ್ರೇಜಿಸ್ಟಾರ್ ರವಿಚಂದ್ರನ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಎಲ್ಲೆಡೆ ವ್ಯಾಪಕ ಪ್ರಶಂಸೆ ಗಳಿಸುತ್ತಿರುವ 'ಕೃಷ್ಣಲೀಲಾ' ಚಿತ್ರ ಇದೀಗ ಕಾಲಿವುಡ್ ಮತ್ತು ಟಾಲಿವುಡ್ ಅಂಗಳಕ್ಕೆ ಕಾಲಿಡುತ್ತಿದೆ. ಕಾಲಿವುಡ್ ನಿರ್ಮಾಪಕ ಆರ್.ಬಿ.ಚೌಧರಿ 'ಕೃಷ್ಣಲೀಲಾ' ಚಿತ್ರವನ್ನ ವೀಕ್ಷಿಸಿ ತಮಿಳು ಮತ್ತು ತೆಲುಗಿಗೆ ರೀಮೇಕ್ ಮಾಡುವ ಮನಸ್ಸು ಮಾಡಿದ್ದಾರೆ. ['ಕೃಷ್ಣ ಲೀಲಾ' ರೀಮೇಕ್ ಚಿತ್ರಕ್ಕೆ ತಮಿಳು ನಟ ಜೀವಾ?]


Kannada Movie Krishna Leela to be remade in Telugu and Tamil

ಈ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ಗೆ ಮಾಹಿತಿ ನೀಡಿದ ನಿರ್ದೇಶಕ ಶಶಾಂಕ್, ''ತಮಿಳು ಮತ್ತು ತೆಲುಗಿಗೆ 'ಕೃಷ್ಣಲೀಲಾ' ಚಿತ್ರ ರೀಮೇಕ್ ಆಗುತ್ತಿದೆ ಅಂತ ಹೇಳಿಕೊಳ್ಳುವುದಕ್ಕೆ ಹೆಮ್ಮೆ ಆಗುತ್ತಿದೆ. ಆರ್.ಬಿ.ಚೌಧರಿ ರೀಮೇಕ್ ಹಕ್ಕುಗಳನ್ನ ಖರೀದಿಸಿದ್ದಾರೆ.'' ಅಂತ ಹೇಳಿದರು.


ತಮಿಳು ಆವೃತ್ತಿಯ ಚಿತ್ರದಲ್ಲಿ ನಿರ್ಮಾಪಕ ಆರ್.ಬಿ.ಚೌಧರಿ ಪುತ್ರ ಜೀವಾ ನಾಯಕನಾಗಿ ನಟಿಸಲಿದ್ದಾರೆ. ತೆಲುಗು ಅವತರಣಿಕೆಯ ಪಾತ್ರವರ್ಗ ಇನ್ನೂ ನಿರ್ಧಾರವಾಗಿಲ್ಲ. ಹಾಗೆ, ಆಕ್ಷನ್ ಕಟ್ ಹೇಳುವ ನಿರ್ದೇಶಕರು ಯಾರು? ಅನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ['ಕೃಷ್ಣಲೀಲಾ' ವಿಮರ್ಶೆ: ಗಿಮಿಕ್ ಇಲ್ಲ...ಎಲ್ಲೂ ಕೆಮ್ಮಂಗಿಲ್ಲ!]


ಒಟ್ನಲ್ಲಿ 'ಕೃಷ್ಣ' ಅಜೇಯ್ ರಾವ್ ವೃತ್ತಿಬದುಕಿಗೆ ದೊಡ್ಡ ತಿರುವು ಕೊಟ್ಟಿರುವ 'ಕೃಷ್ಣಲೀಲಾ' ಕಾಲಿವುಡ್ ಮತ್ತು ಟಾಲಿವುಡ್ ನೆಲಕ್ಕೂ ಕಾಲಿಡುತ್ತಿರುವುದು ಉತ್ತಮ ಬೆಳವಣಿಗೆಯೇ. ಸ್ಯಾಂಡಲ್ ವುಡ್ ನಲ್ಲಿ 'ರೀಮೇಕ್' ಚಿತ್ರಗಳೇ ಹೆಚ್ಚಾಗುತ್ತಿರುವ ಈಗಿನ ಕಾಲದಲ್ಲಿ ಕನ್ನಡ ಚಿತ್ರವೊಂದು ಪರಭಾಷೆಗೆ ರೀಮೇಕ್ ಆಗುತ್ತಿದೆ ಅಂದ್ರೆ ಹೆಮ್ಮೆಯ ವಿಚಾರ ಅಲ್ಲವೇ. (ಫಿಲ್ಮಿಬೀಟ್ ಕನ್ನಡ)

English summary
Ajay Rao starrer Kannada Movie 'Krishna Leela' to be remade in Telugu and Tamil. Producer R.B.Chowdary has acquired the remake rights of the movie. Tamil Actor Jeeva is roped into play lead in the Tamil version.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada