»   » 'ಕ್ವಾಟ್ಲೆ' ಪಕ್ಕಾ 420 ನನ್ ಮಗ ಬಿಡುಗಡೆಗೆ ಸಿದ್ಧ

'ಕ್ವಾಟ್ಲೆ' ಪಕ್ಕಾ 420 ನನ್ ಮಗ ಬಿಡುಗಡೆಗೆ ಸಿದ್ಧ

Posted By:
Subscribe to Filmibeat Kannada

'ಕ್ವಾಟ್ಲೆ' ಎಂಬ ಚಿತ್ರ ತನ್ನ ವಿಚಿತ್ರ ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದ ಗಮನಸೆಳೆದಿದೆ. ಮೈಸೂರಿನ ಕಡೆ ತರ್ಲೆ ಮಾಡುವವರನ್ನು ಏನೋ ಕ್ವಾಟ್ಲೆ ಎಂದು ಕರೆಯುವುದು ಸಾಮಾನ್ಯ. ಈಗ ಅದನ್ನೇ ಶೀರ್ಷಿಕೆಯಾಗಿಸಿ ಚಿತ್ರ ಮಾಡಿದ್ದಾರೆ ನಿರ್ದೇಶಕಿ ಹಾಗೂ ನಿರ್ಮಾಪಕಿ ಚಂದ್ರಕಲಾ (ಜೆ.ಸಿ.ಕೆ).

ಸಾಮಾನ್ಯವಾಗಿ ನಿರ್ದೇಶಕಿ ಎಂದರೆ ಕೌಟುಂಬಿಕ ಕಥಾಹಂದರ, ಲವ್ವು, ರೊಮ್ಯಾನ್ಸ್ ಸಬ್ಜೆಕ್ಟ್ ಎತ್ತಿಕೊಳ್ತಾರೆ. ಆದರೆ ಇವರೇನು ಲಾಂಗು ಮಚ್ಚು ಸ್ಟೋರಿಗೆ ಕೈಹಾಕಿದ್ದಾರೆ ಎನ್ನಿಸುತ್ತದೆ. ಈ ಚಿತ್ರದ ಅಡಿಬರಹ ಇನ್ನೂ ವಿಚಿತ್ರವಾಗಿದೆ. 'ಪಕ್ಕಾ 420 ನನ್ ಮಗ' ಎಂಬುದು ಟ್ಯಾಗ್ ಲೈನ್.

Kwatle movie still

ಚಿತ್ರದ ಶೀರ್ಷಿಕೆ ಹಾಗೂ ಅಡಿಬರಹ ಎರಡೂ ನೋಡಿದರೆ ಒಂದರ್ಧ ಕಥೆ ನಿಮಗೆ ಹೊಳೆದಿರಬಹುದು. ಈ ಚಿತ್ರದ ನಾಯಕನ ಹೆಸರು ಅಶೋಕ್ (ಪಾರ್ಥ). ಅವನ ಕೀಟಲೆ ಕೆಲಸಕ್ಕೆ ಬೇಸತ್ತ ಜನ ಅವರನ್ನು ಕ್ವಾಟ್ಲೆ ಎಂದು ಕರೆಯುತ್ತಿರುತ್ತಾರೆ. ಮೊದಲೇ ಬೇಜಬ್ದಾರಿ ಮನುಷ್ಯ. ಜೊತೆಗೆ ಸಣ್ಣಪುಟ್ಟ ಕಳ್ಳತನಗಳನ್ನೂ ಮಾಡುತ್ತಿರುತ್ತಾನೆ.

ಇಂಥವನಿಗೆ ಸ್ಲಂ ಹುಡುಗಿಯೊಬ್ಬಳು ಪರಿಚಯಾಗುತ್ತದೆ. ಪ್ರೀತಿ ಪ್ರೇಮ ಪ್ರಣಯ ಅಂದ್ರೆ ಅವನಿಗೆ ಅಷ್ಟಕ್ಕಷ್ಟೇ. ಒಮ್ಮೆ ಜೈಲಿಗೂ ಹೋಗಿ ಬಂದಿರುತ್ತಾನೆ. ಮುಂದೇನಾಗುತ್ತದೆ ಎಂಬ ಕುತೂಹಲದ ಹೂರಣವೇ 'ಕ್ವಾಟ್ಲೆ'. ಈಗ ಚಿತ್ರ ಸಿದ್ಧವಾಗಿದ್ದು ಬಿಡುಗಡೆಗೆ ಸಿದ್ಧವಾಗಿದೆ. ಡಿಸೆಂಬರ್ ನಲ್ಲೇ ತೆರೆಗೆ 'ಕ್ವಾಟ್ಲೆ' ಇಣುಕಲಿದ್ದಾನೆ.

'ಪಾರ್ಥ' ಈ ಚಿತ್ರದ ನಾಯಕ. ಯಜ್ಞಾಶೆಟ್ಟಿ ಚಿತ್ರದ ನಾಯಕಿ. ಐದು ಹಾಡುಗಳಿರುವ ಈ ಚಿತ್ರಕ್ಕೆ ಲಿಯೋ ಸಂಗೀತ ನೀಡಿದ್ದಾರೆ. ಚೆಲ್ವು ಛಾಯಾಗ್ರಹಣ, ಈಶ್ವರ್ ಸಂಕಲನ, ಹ್ಯಾರಿಸ್ ಜಾನಿ ಸಾಹಸ ನಿರ್ದೇಶನ, ರೇವಣ್ಣ ಕಲಾ ನಿರ್ದೇಶನ ಹಾಗೂ ಶರೀಫ್ ಬಾಂಬೆ, ಮನು ಶಶಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಗೌತಮ್ ಶ್ರೀವತ್ಸ ಈ ಚಿತ್ರಕ್ಕೆ ಹಿನ್ನಲೆ ಸಂಗೀತ ನೀಡಿದ್ದಾರೆ.

English summary
Kannada movie Kwatle slated for release in December, 2013. Chandrakala is the director of this film besides producing the film. The film with youngsters 'Kwatle'...Pakka 420 Nan Maga as the caption.
Please Wait while comments are loading...