»   » 'ಲೀ' ಚಿತ್ರದ ಟೀಸರ್ ನೋಡೋ ಜೊತೆಗೆ ಗೇಮ್ ಆಡೋ ಅವಕಾಶ

'ಲೀ' ಚಿತ್ರದ ಟೀಸರ್ ನೋಡೋ ಜೊತೆಗೆ ಗೇಮ್ ಆಡೋ ಅವಕಾಶ

Posted By:
Subscribe to Filmibeat Kannada

ಈ ಹಿಂದೆ ದರ್ಶನ್ ಮತ್ತು ಜಗ್ಗೇಶ್ ನಟಿಸಿದ್ದ 'ಅಗ್ರಜ' ಚಿತ್ರವನ್ನು ನಿರ್ದೇಶಿಸಿದ್ದ ಶ್ರೀ ನಂದನ್ ಮತ್ತೊಮ್ಮೆ ನಿರ್ದೇಶನದತ್ತ ಹೊರಳಿದ್ದಾರೆ. ಈ ಬಾರಿ 'ಬೆತ್ತನ ಗೆರೆ' ಖ್ಯಾತಿಯ ನಟ ಸುಮಂತ್ ಶೈಲೇಂದ್ರ ಮತ್ತು ಪಟ್ ಪಟಾಕಿ ನಭಾ ನಟೇಶ್ ಗೆ ಆಕ್ಷನ್-ಕಟ್ ಹೇಳಿದ್ದಾರೆ.

'ಲೀ' ಎಂಬ ವಿಭಿನ್ನ ಹೆಸರಿನಲ್ಲಿ ಮೂಡಿ ಬರುತ್ತಿರೋ ಈ ಚಿತ್ರದ ಟೀಸರ್ ಮತ್ತು 'ಲೀ ಗೇಮ್' ಅದ್ದೂರಿಯಾಗಿ ಬಿಡುಗಡೆ ಆಯಿತು. ಈ ಕಾರ್ಯಕ್ರಮಕ್ಕೆ ಕನ್ನಡದ ಹಿರಿಯ ನಿರ್ದೇಶಕ ಟಿ.ಎಸ್.ನಾಗಾಭರಣ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.['ಲೀ'ಗಾಗಿ ಮಾರ್ಷಲ್ ಆರ್ಟ್ಸ್ ಕಲಿತ ಸುಮಂತ್ ಶೈಲೇಂದ್ರ]

Kannada Movie 'Lee' teaser and mobile game released

'ಮೊಬಿ 2 ಫನ್' ಎಂಬ ಕಂಪೆನಿ ಈ ಹಿಂದೆ 'ಓಂ' ಮತ್ತು 'ಉಪ್ಪಿ -2' ಚಿತ್ರದ ಗೇಮ್‍ ಗಳನ್ನು ರೂಪಿಸಿತ್ತು. ಈಗ ಅದೇ ಸಂಸ್ಥೆ 'ಲೀ ಗೇಮ್' ಅನ್ನು ಸಿದ್ದಪಡಿಸಿದೆ. ಲೀ ಸಿನಿಮಾದಲ್ಲಿ ಮಾರ್ಷಲ್ ಆರ್ಟ್ಸ್ ಬಹುಮುಖ್ಯ ಪಾತ್ರ ವಹಿಸಿರುವುದರಿಂದ, ಈ 3D ಗೇಮ್ ಎಲ್ಲರನ್ನೂ ಆಕರ್ಷಿಸಲಿದೆ.

Kannada Movie 'Lee' teaser and mobile game released

ಈ ಗೇಮ್ ನಲ್ಲಿ ನಾಯಕ ನಾಯಕಿಯನ್ನು ವಿಲನ್ ನಿಂದ ಹೇಗೆ ತಪ್ಪಿಸಿಕೊಳ್ಳುತ್ತಾ ಹೋಗುತ್ತಾನೆ ಎನ್ನುವುದು ಕುತೂಹಲ ಹುಟ್ಟಿಸುತ್ತದೆ. ಈ ಗೇಮ್ ಗೆ ಚಿತ್ರದ ಹಿನ್ನೆಲೆ ಸಂಗೀತವನ್ನೇ ಬಳಸಿಕೊಳ್ಳಲಾಗಿದೆ. ಮಾತ್ರವಲ್ಲದೆ, ಗೇಮ್‍ ನಲ್ಲಿ ನಾಯಕ ಸುಮಂತ್, ಖಳನಟ ರಾಹುಲ್ ದೇವ್ ಮತ್ತು ಸಹನಟರ ಮುಖ ಚಹರೆಯನ್ನೇ ಬಳಸಿಕೊಂಡಿರುವುದು ವಿಶೇಷ.['ಬೆತ್ತನಗೆರೆ' ಸೀನನ (ಸುಮಂತ್ ಶೈಲೇಂದ್ರ) ಜೊತೆ ಚಿಟ್ ಚಾಟ್]

Kannada Movie 'Lee' teaser and mobile game released

'ಲೀ' ಚಿತ್ರವನ್ನು ಶೈಲೇಂದ್ರ ಬಾಬು ಅವರು ಅರ್ಪಿಸಿ, ದರ್ಶನ್ ಕೃಷ್ಣ, ಸತೀಶ್, ವಿನಯ್ ಅವರು ಸೇರಿ ನಿರ್ಮಿಸಿದ್ದಾರೆ. ಶ್ರೀನಂದನ್ ನಿರ್ದೇಶನದ ಈ ಚಿತ್ರದ ಹಾಡುಗಳು ಶೀಘ್ರದಲ್ಲೇ ಬಿಡುಗಡೆಯಾಗಲಿವೆ. ಸುಂತ್ ಶೈಲೇಂದ್ರ ಈ ಚಿತ್ರದಲ್ಲಿ ಮೂರು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಜ್ರಕಾಯ ಚಿತ್ರದ ಪಟಾಕಾ ಪಾತ್ರದ ಮೂಲಕ ಹೆಸರು ಮಾಡಿರುವ ನಭಾ ನಟೇಶ್ ಸುಮಂತ್ ಶೈಲೇಂದ್ರ ಅವರೊಂದಿಗೆ ನಾಯಕಿಯಾಗಿ ನಟಿಸಿದ್ದಾರೆ. ನಭಾ ನಟೇಶ್ ಈ ಚಿತ್ರದಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ.

Kannada Movie 'Lee' teaser and mobile game released

ಜೊತೆಗೆ ಈ ಚಿತ್ರದಲ್ಲಿ ಮುಂಬೈ ಮೂಲದ ಸ್ನೇಹ ದ್ವಿತೀಯ ನಾಯಕಿಯಾಗಿ ನಟಿಸಿದ್ದಾರೆ. ಆನಂದ್ ರಾಜಾವಿಕ್ರಮ ಚಿತ್ರಕ್ಕೆ ಸಂಗೀತ ನೀಡಿದ್ದು, ಗುರುಕಿರಣ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಸಾಧು ಕೋಕಿಲ, ರಂಗಾಯಣ ರಘು, ಚಿಕ್ಕಣ್ಣ, ಸುಚೇಂದ್ರ ಪ್ರಸಾದ್, ತಬಲಾನಾಣಿ ಉಳಿದ ತಾರಾಗಣದಲ್ಲಿ ನಟಿಸಿದ್ದಾರೆ ಬಾಲಿವುಡ್ ನಟ ರಾಹುಲ್ ದೇವ್ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ.

English summary
Kannada Actor Sumanth Shailendra's new film 'Lee' is complete and on Tuesday (November 1st) the teaser and the mobile game of the film were released. While senior director T S Nagabharana released the teaser, producer Shailendra Babu released the mobile game designed by Mobi2Fun. Kannada Actress Nabha Natesh in the lead role. The film is being written and directed by Srinandan of 'Agraja' fame.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada