»   » 'ಮಾಸ್ತಿ ಗುಡಿ' ಆಯ್ತು, 'ಮಾಸ್ತಿ ಗುಡಿ-2' ಬರಲಿದೆ ನಿರೀಕ್ಷಿಸಿ...

'ಮಾಸ್ತಿ ಗುಡಿ' ಆಯ್ತು, 'ಮಾಸ್ತಿ ಗುಡಿ-2' ಬರಲಿದೆ ನಿರೀಕ್ಷಿಸಿ...

Posted By:
Subscribe to Filmibeat Kannada

ದುನಿಯಾ ವಿಜಯ್ ಅಭಿನಯದ 'ಮಾಸ್ತಿ ಗುಡಿ' ಚಿತ್ರ ಇಂದು ರಾಜ್ಯಾದ್ಯಂತ ತೆರೆಗೆ ಬಂದಿದೆ. 'ಮಾಸ್ತಿ ಗುಡಿ' ಚಿತ್ರಕ್ಕೆ ನಿರೀಕ್ಷಿಸಿದಂತೆ ಬಿಗ್ ಓಪನ್ನಿಂಗ್ ಸಿಕ್ಕಿದೆ.

ವನ್ಯ ಸಂಪತ್ತನ್ನು ರಕ್ಷಿಸಲು ಇಡೀ ಜೀವನವನ್ನೇ ಮುಡಿಪಾಗಿಡುವ 'ಮಾಸ್ತಿ' ಪಾತ್ರದಲ್ಲಿ ನಟ ದುನಿಯಾ ವಿಜಯ್ ಘರ್ಜಿಸಿದ್ದಾರೆ. ಯುವಕನಿಂದ ಹಿಡಿದು ಮುದುಕನಾಗುವವರೆಗೂ ಅರಣ್ಯ ಸಂರಕ್ಷಣೆ ಮಾಡುವ ಹೊಣೆ ಹೊತ್ತ 'ಮಾಸ್ತಿ' ಮನುಷ್ಯ ರೂಪದ ಮೃಗಗಳನ್ನ ಬಗ್ಗುಬಡಿಯುತ್ತಾನೆ. ಅಲ್ಲಿಗೆ, 'ಮಾಸ್ತಿ ಗುಡಿ' ಸಿನಿಮಾ ಮುಗೀತು ಅಂತ ಅಂದುಕೊಂಡರೆ, ನಿಮ್ಮ ಊಹೆ ತಪ್ಪು. ಯಾಕಂದ್ರೆ, 'ಮಾಸ್ತಿ ಗುಡಿ-2' ಬರಲಿದೆ.[ವಿಮರ್ಶೆ: 'ಮಾಸ್ತಿ ಗುಡಿ'ಯ ಸೇವಕನಿಗೆ ಹುಲಿ ರಕ್ಷಣೆಯೇ ಕಾಯಕ]


 Kannada Movie 'Maasthi Gudi-2' coming soon

'ಜಾ ಟ್ರ್ಯಾಪ್' ಮೂಲಕ ದುಷ್ಟರ ಬಲೆಗೆ ಹುಲಿ ಸಿಕ್ಕಾಕೊಂಡಾಗ 'ಮುದುಕ'ನಾದ 'ಮಾಸ್ತಿ' ಮತ್ತೆ ಸಿಡಿದೇಳುತ್ತಾನೆ. ಅಲ್ಲಿಂದ, 'ಮಾಸ್ತಿ ಗುಡಿ-2' ಪ್ರಾರಂಭ ಎಂದು ಸಿನಿಮಾದ ಕೊನೆಯಲ್ಲಿ ನಿರ್ದೇಶಕ ನಾಗಶೇಖರ್ ಘೋಷಿಸಿದ್ದಾರೆ. 'ಮಾಸ್ತಿ ಗುಡಿ-2' ಸಿನಿಮಾ ಮಾಡುವ ಬಗ್ಗೆ ನಾಗಶೇಖರ್ ಘೋಷಿಸಿದ್ದಾರೆ ವಿನಃ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ.

English summary
Kannada Movie 'Maasthi Gudi-2' coming soon
Please Wait while comments are loading...