For Quick Alerts
  ALLOW NOTIFICATIONS  
  For Daily Alerts

  IBN Poll:ಅತ್ಯುತ್ತಮರ ಸಾಲಿನಲ್ಲಿ ಡಾ.ರಾಜ್, ಸರೋಜಾದೇವಿ

  |

  ಭಾರತೀಯ ಚಿತ್ರರಂಗಕ್ಕೆ ನೂರು ವರ್ಷದ ತುಂಬಿದ ಹಿನ್ನಲೆಯಲ್ಲಿ ರಾಷ್ಟ್ರೀಯ ಆಂಗ್ಲ ಸುದ್ದಿವಾಹಿನಿ ಸಿಎನ್ಎನ್ ಐಬಿಎನ್ ತನ್ನ ಒದುಗರ ಜನಾಭಿಪ್ರಾಯ ಸಂಗ್ರಹಿಸಲು ನಿರ್ಧರಿಸಿ 'poll question' ಮುಂದಿಟ್ಟಿದೆ.

  ಚಿತ್ರರಂಗದ ಇದುವರೆಗಿನ ಇತಿಹಾಸದಲ್ಲಿ ನಮ್ಮನ್ನೆಲ್ಲಾ ರಂಜಿಸಿದ ನಟ, ನಟಿ, ಸಂಗೀತ ನಿರ್ದೇಶಕರು, ಕಲಾವಿದರು, ತಂತ್ರಜ್ಞರಿಗೆಲ್ಲಾ ಈ ಮೂಲಕ ಗೌರವ ಸಲ್ಲಿಸಲು ಉತ್ತಮ ನಟ, ನಟಿ, ಚಿತ್ರ, ನಿರ್ದೇಶಕ ಮತ್ತು ಸಂಗೀತ ನಿರ್ದೇಶಕರು ಯಾರು ಎಂದು ಜನಾಭಿಪ್ರಾಯ ಸಂಗ್ರಹಿಸುತ್ತಿದೆ.

  ಇದರಂತೆ ಕನ್ನಡ ಸೇರಿದಂತೆ ಎಲ್ಲಾ ಭಾಷೆಯ ಕಲಾವಿದರನ್ನು ಈ ಪಟ್ಟಿಯಲ್ಲಿ ಸೇರಿಸಿದೆ. ಆದರೆ ಸೋಜಿಗದ ಸಂಗತಿಯೆಂದರೆ ಪಟ್ಟಿಯಲ್ಲಿ ಬಹಳಷ್ಟು ಕಲಾವಿದರ ಹೆಸರೇ ಇಲ್ಲದಿರುವುದು. ಇದಕ್ಕೆ ಕೊಡಬಹುದಾದ ಉದಾಹರಣೆಯೆಂದರೆ ನಟರ ಪಟ್ಟಿಯಲ್ಲಿ ಡಾ.ವಿಷ್ಣುವರ್ಧನ್, ರಜನೀಕಾಂತ್, ಅಕ್ಕಿನೇನಿ ನಾಗೇಶ್ವರ್ ರಾವ್, ಅಮಿತಾಬ್ ಬಚ್ಚನ್ ಮುಂತಾದ ಮೇರು ನಟರ ಹೆಸರೇ ಇಲ್ಲದಿರುವುದು.

  ನಟಿಯರ ಬಗ್ಗೆ ಹೇಳುವುದಾದರೆ ಬಿ ಸರೋಜಾ ದೇವಿಯ ಹೆಸರು ಬಿಟ್ಟರೆ ಕನ್ನಡದ ನಟಿಯರ ಯಾರ ಹೆಸರೂ ಇಲ್ಲ. ನಿರ್ದೇಶಕರ ಪಟ್ಟಿಯಲ್ಲಿ ಕನ್ನಡ ಚಿತ್ರರಂಗ ಕಂಡ ಮಹಾನ್ ನಿರ್ದೇಶಕರುಗಳಾದ ಪುಟ್ಟಣ್ಣ ಕಣಗಾಲ್, ಕಣಗಾಲ್ ಪ್ರಭಾಕರ್ ಶಾಸ್ತ್ರಿ ಮುಂತಾದವರ ಹೆಸರೇ ಇಲ್ಲ.

  ಅತ್ಯುತ್ತಮ ಚಿತ್ರದ ಪಟ್ಟಿಯಲ್ಲಿ ಕನ್ನಡದ ಯಾವುದೇ ಚಿತ್ರಗಳಿಲ್ಲ. ಒಟ್ಟಾರೆ ಈ ಪಟ್ಟಿಯಲ್ಲಿ ಅತ್ಯುತ್ತಮ ನಟ ಯಾರು ಎನ್ನುವ ಪ್ರಶ್ನೆಗೆ ಮೊದಲ ಐದೂ ಸ್ಥಾನ ದಕ್ಷಿಣ ಭಾರತದ ನಟರಿಗೆ ಸಿಕ್ಕಿದೆ.

  ಕನ್ನಡದ ವರನಟ ಡಾ. ರಾಜ್, ನಟಿ ಸರೋಜಾ ದೇವಿ ಮತ್ತು ನಿರ್ದೇಶಕ ಗಿರೀಶ್ ಕಾಸರವಳ್ಳಿ ಯಾವ ಸ್ಥಾನದಲ್ಲಿದ್ದಾರೆ? ಅತ್ಯುತ್ತಮ ಚಿತ್ರ ಯಾವುದು? ಸ್ಲೈಡ್ ನೋಡಿ.

  ಈ ಕೊಂಡಿ ಮೂಲಕ ನೀವೂ ಮತ ಚಲಾಯಿಸಬಹುದು

  ಅತ್ಯುತ್ತಮ ನಟ

  ಅತ್ಯುತ್ತಮ ನಟ

  ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಟಿ ರಾಮರಾವ್ ಶೇ.49 ಮತ ಪಡೆದು ಮೊದಲ ಸ್ಥಾನದಲ್ಲಿದ್ದಾರೆ, ಕನ್ನಡದ ಕಣ್ಮಣಿ ಡಾ. ರಾಜಕುಮಾರ್
  ಶೇ. 17 ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಕಮಲಹಾಸನ್, ಮಮ್ಮುಟ್ಟಿ ಮತ್ತು ಮೋಹನ್ ಲಾಲ್ ನಂತರದ ಸ್ಥಾನದಲ್ಲಿದ್ದಾರೆ.

  ಅತ್ಯುತ್ತಮ ನಟಿ

  ಅತ್ಯುತ್ತಮ ನಟಿ

  ಮೊದಲ ಸ್ಥಾನದಲ್ಲಿ ಪಂಚಭಾಷಾ ನಟಿ ಶ್ರೀದೇವಿ. ಕೊಮ್ಮರೆಡ್ಡಿ ಸಾವಿತ್ರಿ, ಮಾಧುರಿ ದೀಕ್ಷಿತ್, ಐಶ್ವರ್ಯಾ ರೈ ನಂತರದ ಸ್ಥಾನ ಬಿ. ಸರೋಜಾ ದೇವಿಗೆ. ಅತ್ಯುತ್ತಮ ನಟ ರಾಜ್ ಮತ್ತು ಅತ್ಯುತ್ತಮ ನಟಿ ಸಾಲಿನಲ್ಲಿ ಮಿಂಚಿತ್ತಿರುವ ಸರೋಜಾದೇವಿಯವರು ಜತೆಯಾಗಿ ನಟಿಸಿದ ಅಮೋಘ ಚಿತ್ರ ಭಾಗ್ಯವಂತರು.

  ಅತ್ಯುತ್ತಮ ಚಿತ್ರ

  ಅತ್ಯುತ್ತಮ ಚಿತ್ರ

  ಮೊದಲ ಸ್ಥಾನದಲ್ಲಿದೆ ಶೋಲೆ ಚಿತ್ರ. ಕನ್ನಡದ ಯಾವ ಚಿತ್ರಗಳೂ ಪಟ್ಟಿಯಲಿಲ್ಲ. ಬಹುಷ: ಪಟ್ಟಿ ತಯಾರಿಸಿದವರಿಗೆ ಬಂಗಾರದ ಮನುಷ್ಯ, ನಾಗರಹಾವು, ಅಂತ ಮೊದಲಾದ ಚಿತ್ರಗಳ special screening ಮಾಡಿಸುವುದು ಒಳ್ಳೆಯದು.

  ಅತ್ಯುತ್ತಮ ಸಂಗೀತ ನಿರ್ದೇಶಕ

  ಅತ್ಯುತ್ತಮ ಸಂಗೀತ ನಿರ್ದೇಶಕ

  ಮೊದಲ ಸ್ಥಾನದಲ್ಲಿ ಕನ್ನಡ ಚಿತ್ರಗಳಿಗೂ ಸಂಗೀತ ನೀಡಿದ ಇಳಯರಾಜ. ಮಾತು ತಪ್ಪಿದ ಮಗ, ಪಲ್ಲವಿ ಅನುಪಲ್ಲವಿ, ನನ್ನ ಪ್ರೀತಿಯ ರಾಮು ಮುಂತಾದ ಕನ್ನಡ ಚಿತ್ರಗಳಿಗೆ ಇಳಯರಾಜ ಸಂಗೀತ ನೀಡಿದ್ದಾರೆ.

  ಅತ್ಯುತ್ತಮ ನಿರ್ದೇಶಕ

  ಅತ್ಯುತ್ತಮ ನಿರ್ದೇಶಕ

  ಮೊದಲ ಸ್ಥಾನದಲ್ಲಿ ಸತ್ಯಜಿತ್ ರೇ ಇದ್ದಾರೆ. ಎರಡನೆಯ ಸ್ಥಾನದಲ್ಲಿ ಮಣಿರತ್ನಂ ಮತ್ತು ಕನ್ನಡದ ಹೆಮ್ಮೆಯ ಪ್ರತಿಭೆ ಗಿರೀಶ್ ಕಾಸರವಳ್ಳಿ ಮೂರನೇ ಸ್ಥಾನದಲ್ಲಿದ್ದಾರೆ. ಕಲಾತ್ಮಕ ಚಿತ್ರದ ನಿರ್ದೇಶಕರಾದ ಪದ್ಮಶ್ರೀ ಪ್ರಶಸ್ತಿ ವಿಜೇತ ಕಾಸರವಳ್ಳಿ ಅವರ ಗುಲಾಬಿ ಟಾಕೀಸ್ ಚಿತ್ರಕ್ಕೆ ಸ್ವರ್ಣಕಮಲ ಪ್ರಶಸ್ತಿ ಒಲಿದಿತ್ತು.

  English summary
  Dr. Rajkumar, Dr. B Saroja Devi and Girish Kasaravalli among most voted Kannada movie artist and Directors in the CNN IBN poll to mark 100 years of Indian cinema. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X