»   » ಈ ಶುಕ್ರವಾರ ಬಿಡುಗಡೆ ಆಗುತ್ತಿರುವ ಕನ್ನಡ ಚಿತ್ರಗಳು

ಈ ಶುಕ್ರವಾರ ಬಿಡುಗಡೆ ಆಗುತ್ತಿರುವ ಕನ್ನಡ ಚಿತ್ರಗಳು

Posted By:
Subscribe to Filmibeat Kannada

'ವರ್ಲ್ಡ್ ಕಪ್' ಫೀವರ್ ಮುಗೀತು. ಈಗ ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿವೆ. ಈ ವಾರ ಬೆಳ್ಳಿತೆರೆಗೆ ಅಪ್ಪಳಿಸುತ್ತಿರುವ ಚಿತ್ರಗಳು 'ಮೆಲೋಡಿ' ಮತ್ತು 'ಮಳೆ ನಿಲ್ಲುವವರೆಗೆ'. ಒಂದು ಲವ್ ಸ್ಟೋರಿ ಮತ್ತೊಂದು ಹಾರರ್ ಕಮ್ ಥ್ರಿಲ್ಲರ್ ಸಿನಿಮಾ.

ನಟ ಕಮ್ ನಿರ್ದೇಶಕ ಮೋಹನ್ ನಿರ್ಮಾಣದ ಚೊಚ್ಚಲ ಚಿತ್ರ 'ಮಳೆ ನಿಲ್ಲುವವರೆಗೆ'. 1950 ರ ದಶಕದ 'ಡೆಡ್ಲಿ ಗೇಮ್' ನಾಟಕ ಆಧಾರಿತ ಚಿತ್ರ 'ಮಳೆ ನಿಲ್ಲುವವರೆಗೆ'. ನಿವೃತ್ತ ಪಬ್ಲಿಕ್ ಪ್ರಾಸಿಕ್ಯೂಟರ್, ಹ್ಯಾಂಗ್ ಮನ್, ಡಿಫೆನ್ಸ್ ವಕೀಲ ಮತ್ತು ಜೈಲು ಶಿಕ್ಷೆ ಅನುಭವಿಸಿದ ವ್ಯಕ್ತಿಯ ಸುತ್ತ ನಡೆಯುವ ಕಥೆ ಈ 'ಮಳೆ ನಿಲ್ಲುವವರೆಗೆ'. [ಪತ್ನಿ ಎದುರು ಪೇಚಿಗೆ ಸಿಲುಕಿದ ನಿರ್ದೇಶಕ ಮೋಹನ್.!]

Kannada Movie 'Male Nilluvavarege' and 'Melody' releasing this friday

'ಬಿವೇರ್ ಆಫ್ ರೇನ್' ಅನ್ನುವ ಅಡಿಬರಹ ಹೊಂದಿರುವ 'ಮಳೆ ನಿಲ್ಲುವವರೆಗೆ' ಚಿತ್ರದ ಮುಖ್ಯ ಪಾತ್ರಧಾರಿ ಮಳೆ. ತಾರಾಗಣದಲ್ಲಿ ಮೋಹನ್, ಕವಿತಾ ಬೋರಾ, ಭೂಮಿಕಾ, ಸೌಜನ್ಯ, ದತ್ತಣ್ಣ, ಕರಿಸುಬ್ಬು, ಶರತ್ ಲೋಹಿತಾಶ್ವ, ಶ್ರೀನಿವಾಸ್ ಪ್ರಭು ಇದ್ದಾರೆ. [ಪತ್ನಿಗೆ ಸವಾಲು ಹಾಕಿ ಗೆದ್ದ ನಿರ್ದೇಶಕ ಮೋಹನ್.!]

ಎರಡೇ ಹಾಡುಗಳಿರುವ ಈ ಚಿತ್ರದಲ್ಲಿ ಒಂದು ಹಾಡಿಗೆ ಮೋಹನ್ ದನಿಯಾಗಿದ್ದರೆ, ಇನ್ನೊಂದು ಹಾಡಲ್ಲಿ ಮೋಹನ್ ಪತ್ನಿ ಶ್ರೀವಿದ್ಯಾ ಗಾನಸುಧೆ ಹರಿಸಿದ್ದಾರೆ. ಲಯೇಂದ್ರ ಸಂಗೀತ ಸಂಯೋಜಿಸಿದ್ದಾರೆ. 'ಮಳೆ ನಿಲ್ಲುವವರೆಗೆ' ಜೊತೆಗೆ ಈ ವಾರ 'ಮೆಲೋಡಿ' ಚಿತ್ರ ಕೂಡ ತೆರೆಗೆ ಬರುತ್ತಿದೆ.

ಇಂದಿನ ಫೇಸ್ ಬುಕ್ ಯುಗದ ಉಪಯೋಗ-ದುರುಪಯೋಗಗಳನ್ನ ಸಮತೋಲನವಾಗಿ ಸೆರೆ ಹಿಡಿದು ಪ್ರೇಕ್ಷಕನ ಮುಂದೆ 'ಮೆಲೋಡಿ'ಯಾಗಿ ಪ್ರಸ್ತುತ ಪಡಿಸುವ ಪ್ರಯತ್ನ ಈ ಚಿತ್ರ. ಸುಮಧುರ ಸಂಗೀತವೇ ಪ್ರಧಾನವಾಗಿರುವ ಚಿತ್ರಕ್ಕೆ ಎಲ್.ಎನ್.ಶಾಸ್ತ್ರೀ ಸಂಗೀತ ಸಂಯೋಜಿಸಿದ್ದಾರೆ. [ಕ್ರಿಕೆಟ್ ಮುಗಿಯುವವರೆಗೆ ಬರಲ್ವಂತೆ 'ಮಳೆ ನಿಲ್ಲುವವರೆಗೆ']

melody

'ಗಾಳಿಪಟ' ನಂತ್ರ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ನಾಯಕ ನಟನಾಗಿ ಅಭಿನಯಿಸಿರುವುದು ಈ ಚಿತ್ರದಲ್ಲೇ. ಚೇತನ್ ಗಂಧರ್ವ, ಕಾರ್ತಿಕಾ ಮೆನನ್, ಅಕ್ಷತ ಮೂಲ್ರ, ಮಂಡ್ಯ ರಮೇಶ್, ಸುಧಾಕರ್ ಮತ್ತಿತರರು ತಾರಾಗಣದಲ್ಲಿದ್ದಾರೆ. [ಏಪ್ರಿಲ್ 17ರಿಂದ ಸವಿಯಿರಿ ರಾಜೇಶ್ ಕೃಷ್ಣನ್ 'ಮೆಲೋಡಿ']

ಲವ್ ಸ್ಟೋರಿ-ರೋಮ್ಯಾನ್ಸ್ ಬಯಸೋರಿಗೆ 'ಮೆಲೋಡಿ', ಹಾರರ್ ಮತ್ತು ಥ್ರಿಲ್ಲರ್ ಪ್ರಿಯರಿಗೆ 'ಮಳೆ ನಿಲ್ಲುವವರೆಗೆ'. ಈವೆರಡರಲ್ಲಿ ನಿಮ್ಮ ಆಯ್ಕೆ ಯಾವುದು? ನೀವೇ ನಿರ್ಧರಿಸಿ. (ಫಿಲ್ಮಿಬೀಟ್ ಕನ್ನಡ)

English summary
Director cum Actor Mohan starrer Kannada Movie 'Male Nilluvavarege' and Rajesh Krishnan starrer 'Melody' releasing this Friday (April 17th). Choose your pick.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada