»   » ಚಾಮರಾಜಪೇಟೆ ರುದ್ರಭೂಮಿಯಲ್ಲಿ 'ಮಸಣ' ಶುರು

ಚಾಮರಾಜಪೇಟೆ ರುದ್ರಭೂಮಿಯಲ್ಲಿ 'ಮಸಣ' ಶುರು

Posted By:
Subscribe to Filmibeat Kannada

ಫ್ಯಾಮಿಲಿ, ಸೆಂಟಿಮೆಂಟ್ ಚಿತ್ರಗಳು ಇತ್ತೀಚೆಗೆ ತುಂಬಾ ವಿರಳವಾಗಿದ್ದು ಭಯೋತ್ಪಾದನೆ, ರೌಡಿಸಮ್ ಚಿತ್ರಗಳನ್ನೇ ಜನ ಹೆಚ್ಚಾಗಿ ಇಷ್ಟ ಪಡುತ್ತಿದ್ದಾರೆ. ಅಂಥದ್ದೇ ಚಿತ್ರವೊಂದು ಮೊನ್ನೆ ಸೆಟ್ಟೇರಿದೆ. ಯುವ ನಿರ್ದೇಶಕ ಮಂಜುನಾಥ್ ಕಡೂರ್ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ 'ಮಸಣ' ಚಿತ್ರದ ಮುಹೂರ್ತ ಇತ್ತೀಚೆಗೆ ನಡೆಯಿತು.

ಚಿತ್ರದ ಹೆಸರೇ ಮಸಣವಾದ್ದರಿಂದ ಚಾಮರಾಜಪೇಟೆ ರುದ್ರಭೂಮಿಯಲ್ಲಿ ಚಿತ್ರದ ಮುಹೂರ್ತ ನಡೆಸಲಾಯಿತು. ಪ್ರಶಾಂತವಾಗಿದ್ದ ಹಳ್ಳಿಯೊಂದಕ್ಕೆ ಟೆರರಿಸ್ಟ್ ಗಳು ಬಂದು ಅಲ್ಲಿನ ಮುಗ್ಧ ಜನರನ್ನು ಬಳಸಿಕೊಂಡು ದುಷ್ಕೃತ್ಯಗಳನ್ನು ನಡೆಸುತ್ತಾರೆ. [ಸ್ಮಶಾಣದಲ್ಲಿ ಪುಸ್ತಕ ಬಿಡುಗಡೆ]

A still from movie Masana

ಆ ಟೆರರಿಸ್ಟ್ ಗಳು ಕಾಲಿಟ್ಟ ದಿನದಿಂದ ಆ ಹಳ್ಳಿ ಮಸಣದಂತಾಗುತ್ತದೆ. ನಂತರದ ದಿನಗಳಲ್ಲಿ ತಮ್ಮ ತಪ್ಪು ಅರಿವಾದಾಗ ಆ ಮುಗ್ಧ ಹಳ್ಳಿಯ ಯುವಕರು ಪಶ್ಚಾತ್ತಾಪ ಪಡುತ್ತಾರೆ. ಕೃಷ್ಣಮೂರ್ತಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಮೋಹನ್ ಛಾಯಾಗ್ರಹಣ, ರಾಜಾ ಭಾಸ್ಕರ್ ಸಂಗೀತ, ಕಪಿಲ್ ನೃತ್ಯ ನಿರ್ದೇಶನ, ವಿನಾಯಕ್, ಅಂಜನಾದ್ರಿ ಸಾಹಿತ್ಯ ಶ್ರೀಜವಳಿ ಸಂಕಲನ ಚಿತ್ರಕ್ಕಿದೆ.

ಕೆ.ಎಸ್.ತಮ್ಮಯ್ಯ, ಶ್ರೀನಿವಾಸ್ ಸಹ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ಕುಮಾರ್ ನಿತಿನ್ ಗೌಡ, ಸೋಮೇಶ್ ಸ್ವಾಮಿ, ಲಕ್ಷ್ಮಿ, ದಿವ್ಯಾ, ಮಾದೇಶ್, ತಮ್ಮಯ್ಯ, ಪರಮೇಶ್, ಹೇಮಂತ್ ಗೌಡ, ಆನಂದ್ ಇನ್ನೂ ಮುಂತಾದವರು ತಾರಾಬಳಗವಿದೆ. (ಒನ್ಇಂಡಿಯಾ ಕನ್ನಡ)

English summary
A new Kannada movie titled as 'Masana' (Means Burial Ground). As for the title the movie shooting starts at Chamarajpet burial ground. The movie is directed by Manjunath Kadur.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada