»   » ನಿಮ್ಮೆಲ್ಲರ ಎದೆ ನಡುಗಿಸಲು ಬರಲಿದೆ 'ಮತ್ತೆ ಶ್'.!

ನಿಮ್ಮೆಲ್ಲರ ಎದೆ ನಡುಗಿಸಲು ಬರಲಿದೆ 'ಮತ್ತೆ ಶ್'.!

Posted By:
Subscribe to Filmibeat Kannada

'ಶ್' ಅಂದಾಕ್ಷಣ ನಿಮಗೆ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ 1993ರಲ್ಲಿ ತೆರೆಕಂಡ 'ಶ್' ನೆನಪಿಗೆ ಬರಬಹುದು. ಸಸ್ಪೆನ್ಸ್-ಥ್ರಿಲ್ಲರ್ ಚಿತ್ರವಾದ 'ಶ್' ಅಂದು ಸೂಪರ್ ಹಿಟ್ ಆಗಿತ್ತು. ಈಗ 'ಮತ್ತೆ ಶ್' ತೆರೆಗೆ ಬರುತ್ತಿದೆ.

ಹಾಗಂದಾಕ್ಷಣ, 'ಶ್' ಸಿನಿಮಾ ರೀ-ರಿಲೀಸ್ ಆಗುತ್ತಿದೆ ಅಂದುಕೊಳ್ಳಬೇಡಿ. 'ಶ್' ಚಿತ್ರದಂತೆಯೇ ಹಾರರ್-ಸಸ್ಪೆನ್ಸ್-ಥ್ರಿಲ್ಲರ್ ಕಥಾನಕ ಹೊಂದಿರುವ, ಹೊಸಬರು ಸೇರಿ ಸದ್ದಿಲ್ಲದೆ ತಯಾರು ಮಾಡಿರುವ 'ಮತ್ತೆ ಶ್' ಸಿನಿಮಾ ಸದ್ಯದಲ್ಲೇ ಬಿಡುಗಡೆ ಆಗಲಿದೆ. [ಉಪೇಂದ್ರ ನಿರ್ದೇಶನದ 'ಶ್' ಚಿತ್ರಕ್ಕೂ 'ಮತ್ತೆ ಶ್'ಗೂ ಏನು ಸಂಬಂಧ?]

Kannada Movie 'Matte Shh' ready for release

'ಮತ್ತೆ ಶ್' ಅಂತ ಹೇಳಿದ ಕೂಡಲೆ, ಇದು ಹೇಮಂತ್ ಹೆಗಡೆ ನಿರ್ದೇಶನದ ಶೀರ್ಷಿಕೆ ವಿವಾದದಲ್ಲಿದ್ದ 'ಮತ್ತೊಮ್ಮೆ ಶ್' ಚಿತ್ರ ಅಂತ ಕನ್ಫ್ಯೂಸ್ ಆಗ್ಬೇಡಿ. ಅದೇ ಬೇರೆ. ಇದೇ ಬೇರೆ.

ಈ ಹಿಂದೆ 'ಮೊದಲ ಮಿಂಚು' ಎಂಬ ಚಿತ್ರ ನಿರ್ದೇಶನ ಮಾಡಿದ್ದ ವೆಸ್ಲೆ ಬ್ರೌನ್ ಈಗ 'ಮತ್ತೆ ಶ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ನಟ ವಿಜಯ್ ಚೆಂಡೂರ್, ಶ್ರುತಿ ಹೀರಾ, ರಚಿತ್, ರಾಹುಲ್ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.

'ಎಸ್.ಆರ್.ಟಾಕೀಸ್' ಲಾಂಛನದಡಿಯಲ್ಲಿ ದಯಾನಂದ್ ಮಠ್ಪತಿ ನಿರ್ಮಿಸಿರುವ 'ಮತ್ತೆ ಶ್' ರಿಲೀಸ್ ಗೆ ರೆಡಿಯಾಗಿದೆ. ಸೆನ್ಸಾರ್ ಅಂಗಳದಿಂದ ಪಾಸ್ ಆಗಿ, ಥಿಯೇಟರ್ ಸಿಕ್ಕ ಕೂಡ ಕೂಡಲೆ ನಿಮ್ಮೆಲ್ಲರ ಎದುರಿಗೆ 'ಮತ್ತೆ ಶ್' ಬರಲಿದೆ.

English summary
Kannada Actor Vijay Chandoor starrer 'Matte Shh' is all set for the release.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada