»   » ಏಪ್ರಿಲ್ 17ರಿಂದ ಸವಿಯಿರಿ ರಾಜೇಶ್ ಕೃಷ್ಣನ್ 'ಮೆಲೋಡಿ'

ಏಪ್ರಿಲ್ 17ರಿಂದ ಸವಿಯಿರಿ ರಾಜೇಶ್ ಕೃಷ್ಣನ್ 'ಮೆಲೋಡಿ'

Posted By:
Subscribe to Filmibeat Kannada

ಪ್ರತಿಭಾವಂತ ಸಂಭಾಷಣೆಕಾರ ನಂಜುಂಡ ಅವರು 14 ವರ್ಷಗಳ ಬಳಿಕ ನಿರ್ದೇಶನಕ್ಕೆ ಹಿಂತಿರುಗಿರುವ ಚಿತ್ರ 'ಮೆಲೋಡಿ'. ಈ ಮೂಲಕ ನಂಜುಂಡ ಕೃಷ್ಣ ಆಗಿ ಆಧುನಿಕವಾದ ಕಥಾವಸ್ತು ಇರುವ ಚಿತ್ರ ಕೊಡುತ್ತಿದ್ದಾರೆ. 'ಮೆಲೋಡಿ' ಚಿತ್ರ ಏಪ್ರಿಲ್ 17ರಂದು ಬಿಡುಗಡೆ ಆಗುತ್ತಿದೆ.

ಇಂದಿನ ಫೇಸ್ ಬುಕ್ ಯುಗದ ಆಭಾಸ, ಉಪಯೋಗ ಮುಂತಾದವನ್ನು ಸಮತೋಲನವಾಗಿ ಸೆರೆ ಹಿಡಿದು ಪ್ರೇಕ್ಷಕನ ಮುಂದೆ 'ಮೆಲೋಡಿ' ಮುಖಾಂತರ ತೆರೆದಿಡಲಾಗುತ್ತಿದೆ. ಚಿತ್ರದಲ್ಲಿ ಸುಮಧುರವಾದ ಸಂಗೀತ ಪ್ರೇಕ್ಷಕರಿಗೆ ಭಿನ್ನ ಅನುಭವ ನೀಡಲಿದೆ. [ಇದು ಫೇಸ್ ಬುಕ್ ಮನಸುಗಳ 'ಮೆಲೋಡಿ' ಕಥೆ]

A still from Melody

ಶ್ರೀ ಅಂಬಾ ಭಗವತಿ ಫಿಲ್ಮ್ಸ್ ಲಾಂಛನದಲ್ಲಿ ಎಸ್ ಕೃಷ್ಣಮೂರ್ತಿ ಅವರು ನಿರ್ಮಾಣದ ಈ ಚಿತ್ರಕ್ಕೆ ಎಲ್ ಎನ್ ಶಾಸ್ತ್ರೀ ಅವರ ಮಾರ್ಗದರ್ಶನ ಹಾಗೂ ಸಂಗೀತ ನಿರ್ದೇಶನ ಸಹ ಇದೆ. ಖ್ಯಾತ ಹಿನ್ನಲೆ ಗಾಯಕ ರಾಜೇಶ್ ಕೃಷ್ಣನ್ ಅವರು 'ಗಾಳಿಪಟ' ನಂತರ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಜೊತೆಗೆ ಚೇತನ್ ಗಂಧರ್ವ, ಕಾರ್ತಿಕ ಮೆನನ್, ಅಕ್ಷತಾ, ರಾಮಕೃಷ್ಣ, ಮಂಡ್ಯ ರಮೇಶ್, ಸುಧಾಕರ್, ಶಮಂತ್, ಯಮುನ ಶ್ರೀನಿಧಿ, ಪ್ರಶಾಂತ್ ಸಂಭರ್ಗಿ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ. ಆರ್ ವಿ ನಾಗೇಶ್ವರ ರಾವ್ ಛಾಯಾಗ್ರಹಣ, ವಿ. ನಾಗೇಂದ್ರ ಪ್ರಸಾದ್ ಅವರ ಗೀತರಚನೆ, ಎಂ ಎಸ್ ಪಾಟೀಲ್ ಅವರ ಚಿತ್ರಕಥೆ ಇರುವ ಈ ಚಿತ್ರಕ್ಕೆ ತ್ರಿಭುವಣ್ ಅವರ ನೃತ್ಯ ಒದಗಿಸಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
Kannada movie Melody slated for release on 17th April. Rajesh Krishnan is back to acting after 'Gaalipata', the title aptly suits this mellifluous singer. A familiar dialogue writer Nanjunda is adding 'Krishna' to his name in his comeback to direction after 14 years.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada