»   » ಸೆನ್ಸಾರ್ ಅಂಗಳದಿಂದ 'Mr.ಐರಾವತ' ಪಾಸ್.! ರಿಲೀಸ್ ಯಾವಾಗ?

ಸೆನ್ಸಾರ್ ಅಂಗಳದಿಂದ 'Mr.ಐರಾವತ' ಪಾಸ್.! ರಿಲೀಸ್ ಯಾವಾಗ?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಇಲ್ಲಿದೆ ಗುಡ್ ನ್ಯೂಸ್. 'ದಾಸ' ದರ್ಶನ್ ಅಭಿನಯದ 'Mr.ಐರಾವತ' ಚಿತ್ರ ಸೆನ್ಸಾರ್ ಅಂಗಳದಿಂದ ಕ್ಲೀನ್ ಚಿಟ್ ಪಡೆದಿದೆ.

ಎ.ಪಿ.ಅರ್ಜುನ್ ನಿರ್ದೇಶನದ 'Mr.ಐರಾವತ' ಚಿತ್ರವನ್ನ ವೀಕ್ಷಿಸಿದ ಸೆನ್ಸಾರ್ ಮಂಡಳಿ U/A ಸರ್ಟಿಫಿಕೇಟ್ ನೀಡಿದೆ. ಸಿನಿಮಾದಲ್ಲಿ ಆಕ್ಷನ್ ಸೀಕ್ವೆನ್ಸ್ ಕೊಂಚ ಜಾಸ್ತಿ ಇರುವ ಕಾರಣ U/A ಸರ್ಟಿಫಿಕೇಟ್ ಸಿಕ್ಕಿದೆ. [ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿ]


airavatha

ಅಲ್ಲಿಗೆ, ಸೆನ್ಸಾರ್ ಪರೀಕ್ಷೆಯಲ್ಲಿ ಪಾಸ್ ಆಗಿರುವ 'Mr.ಐರಾವತ' ರಿಲೀಸ್ ಯಾವಾಗ ಅಂತ ಕೇಳುತ್ತಿದ್ದ ಅಭಿಮಾನಿಗಳಿಗೆ, ಚಿತ್ರತಂಡದಿಂದ ಸಿಕ್ಕಿರುವ ಉತ್ತರ ಅಕ್ಟೋಬರ್ 1.


ದರ್ಶನ್ ಜೊತೆ ಊರ್ವಶಿ ರೌಟೇಲ ಜೋಡಿಯಾಗಿ ನಟಿಸಿರುವ 'ಐರಾವತ' ಚಿತ್ರದಲ್ಲಿ ಪ್ರಕಾಶ್ ರೈ ವಿಲನ್ ಆಗಿ ನಟಿಸಿರುವುದು ಹೈಲೈಟ್. ಹಾಗೇ, ದರ್ಶನ್ ಪುತ್ರ ವಿನೀಶ್ ಕೂಡ ಖಾಕಿ ಖದರ್ ನಲ್ಲಿ ಕಾಣಿಸಿಕೊಂಡಿರುವುದು 'Mr.ಐರಾವತ' ಸ್ಪೆಷಾಲಿಟಿ. [ಚಾಲೆಂಜಿಂಗ್ ಸ್ಟಾರ್ 'ಮಿಸ್ಟರ್ ಐರಾವತ' ಟೀಸರ್ ಔಟ್]ಸಂದೇಶ್ ನಾಗರಾಜ್ ನಿರ್ಮಿಸಿರುವ 'Mr.ಐರಾವತ' ಅಕ್ಟೋಬರ್ 1 ರಂದು ತೆರೆಗೆ ಬರುವುದಕ್ಕೆ ಸಿದ್ಧವಾಗಿದೆ. 'Mr.ಐರಾವತ'ರನ್ನ ಬರಮಾಡಿಕೊಳ್ಳುವುದಕ್ಕೆ ನೀವು ರೆಡಿಯಾಗಿ.

English summary
AP Arjun directorial, Challenging Star Darshan starrer Kannada Movie 'Mr.Airavata' gets U/A certificate from censor board. The movie is all set to release on October 1st.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada