For Quick Alerts
  ALLOW NOTIFICATIONS  
  For Daily Alerts

  ಸೈಮಾ ಅವಾರ್ಡ್ಸ್ ನಲ್ಲೂ ದಾಖಲೆ ಬರೆದ ಯಶ್ 'ರಾಮಾಚಾರಿ'

  By Harshitha
  |

  ಕಳೆದ ವರ್ಷ ರಿಲೀಸ್ ಆದ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾ ಹವಾ ಇನ್ನೂ ಜೋರಾಗಿದೆ. ಇತ್ತೀಚಿಗಷ್ಟೆ ಪ್ರತಿಷ್ಠಿತ 'ಫಿಲ್ಮ್ ಫೇರ್' ಪ್ರಶಸ್ತಿಯನ್ನು ಬಾಚಿಕೊಂಡ ಈ ಚಿತ್ರ ಇದೀಗ 2015ನೇ ಸಾಲಿನ ಸೈಮಾ ಅವಾರ್ಡ್ಸ್ ನೂ ಮುಡಿಗೇರಿಸಿಕೊಂಡಿದೆ.

  ಅದು ಒಂದೆರಡು ವಿಭಾಗಗಳಲ್ಲಿ ಅಲ್ಲ. ಬರೋಬ್ಬರಿ 10 ವಿಭಾಗಗಳಲ್ಲಿ ಪ್ರಶಸ್ತಿ ಗಿಟ್ಟಿಸಿಕೊಳ್ಳುವ ಮೂಲಕ ಸೈಮಾ ಅವಾರ್ಡ್ಸ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ.

  ಉತ್ತಮ ಚಿತ್ರ - ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ
  ಉತ್ತಮ ನಿರ್ದೇಶಕ - ಸಂತೋಷ್ ಆನಂದ್ ರಾಮ್
  ಉತ್ತಮ ನಟ - ಯಶ್ [ಮಾಸ್ಟರ್ಪೀಸ್ ಕನಿಷ್ಠ ದೀಪಾವಳಿಗಾದರೂ ಬರತ್ತಾ ಯಶ್?]
  ಉತ್ತಮ ನಟಿ - ರಾಧಿಕಾ ಪಂಡಿತ್
  ಉತ್ತಮ ಛಾಯಾಗ್ರಹಣ - ಎಸ್.ವೈದಿ
  ಉತ್ತಮ ಸಂಗೀತ ನಿರ್ದೇಶಕ - ವಿ.ಹರಿಕೃಷ್ಣ
  ಉತ್ತಮ ಸಾಹಸ ನಿರ್ದೇಶಕ - ರವಿ ವರ್ಮಾ
  ಉತ್ತಮ ಗೀತ ಸಾಹಿತ್ಯ ರಚನೆಗಾರ - ಗೌಸ್ ಪೀರ್ (ಕಾರ್ಮೋಡ ಸರಿದು)
  ಉತ್ತಮ ಗಾಯಕ - ರಾಜೇಶ್ ಕೃಷ್ಣನ್ (ಕಾರ್ಮೋಡ ಸರಿದು)
  ಉತ್ತಮ ಪೋಷಕ ನಟ
  - ಅಚ್ಯುತ್ ಕುಮಾರ್[ಸೈಮಾ ಪ್ರಶಸ್ತಿ : ಯಶ್ -ರಾಧಿಕಾ ಸೇರಿ ತಾರೆಯರ ರಂಗು]

  'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ಯಶಸ್ಸಿಗೆ ಶ್ರಮಿಸಿದ ಮೇಲ್ಕಂಡ ಎಲ್ಲರಿಗೂ ಸೈಮಾ ಅವಾರ್ಡ್ ದೊರೆತಿದೆ. ಮೊನ್ನೆಯಷ್ಟೆ ದುಬೈನಲ್ಲಿ ಸೈಮಾ ಪ್ರಶಸ್ತಿ ಪ್ರಧಾನ ಸಮಾರಂಭ ಅದ್ದೂರಿಯಾಗಿ ನೆರವೇರಿತು.[ಯಶ್ ಬಗ್ಗೆ ಫೇಸ್ ಬುಕ್ ನಲ್ಲಿ ರಾಧಿಕಾ ಪಂಡಿತ್ ಹೇಳಿದ್ದೇನು?]

  ಕನ್ನಡ ಚಿತ್ರಗಳ ಪೈಕಿ ಎಲ್ಲಾ ವಿಭಾಗಗಳಲ್ಲೂ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರಕ್ಕೆ ಹೆಚ್ಚಿನ ಮತಗಳು ಲಭ್ಯವಾಗಿತ್ತು. ಅದರ ಪರಿಣಾಮವೇ ಈ ದಾಖಲೆ. ಗಲ್ಲಪೆಟ್ಟಿಗೆಯಲ್ಲಿ ದಾಪುಗಾಲು ಹಾಕುತ್ತಾ ಕೋಟಿ ಕೋಟಿ ಲೂಟಿ ಮಾಡಿದ 'ರಾಮಾಚಾರಿ' ಪ್ರಶಸ್ತಿ ಪಡೆಯುವುದರಲ್ಲೂ ಹಿಂದೆಬಿದ್ದಿಲ್ಲ ಅನ್ನುವುದಕ್ಕೆ ಇದೇ ಸಾಕ್ಷಿ.

  English summary
  Kannada Movie 'Mr and Mrs Ramachari' has bagged 10 prestigious SIIMA Awards 2015 including Best Actor, Best Actress, Best Movie and Best Director category.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X