»   » 'ಮುಗುಳುನಗೆ'ಗೆ ಪಾಂಡಿಚೇರಿಯಲ್ಲಿ ಮಳೆ ಕಾಟ!

'ಮುಗುಳುನಗೆ'ಗೆ ಪಾಂಡಿಚೇರಿಯಲ್ಲಿ ಮಳೆ ಕಾಟ!

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ನಿರ್ದೇಶಕ ಯೋಗರಾಜ್ ಭಟ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ 'ಮುಗುಳುನಗೆ' ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಚಿತ್ರೀಕರಣ ಮಾಡಲಿರುವ 'ಮುಗುಳುನಗೆ' ಈಗ ಪಾಂಡಿಚೇರಿಯಲ್ಲಿ ಬೀಡುಬಿಟ್ಟಿದೆ.['ಮುಗುಳುನಗೆ' ಚಿತ್ರಕ್ಕಾಗಿ ಭಟ್ಟರು ಬರೆದರು 'ಮುಗುಳುಗೀತೆ'.! ]

ಕಳೆದ ಕೆಲವು ದಿನಗಳಿಂದ ಪಾಂಡಿಚೇರಿಯಲ್ಲಿ ಚಿತ್ರೀಕರಣ ಮಾಡುತ್ತಿದ್ದ ಗಣೇಶ್ ಚಿತ್ರಕ್ಕೀಗ ಮಳೆ ಕಾಟ ಎದುರಾಗಿದೆಯಂತೆ. ನಿನ್ನೆ (ಜನವರಿ 20) ಸುರಿದ ಮಳೆಯಿಂದಾಗಿ ಶೂಟಿಂಗ್ ಮುಗಿಸಲು ಸಾಧ್ಯವಾಗಿಲ್ಲವಂತೆ. ಈ ಕುರಿತು ಗೋಲ್ಡನ್ ಸ್ಟಾರ್ ಗಣೇಶ್ ಅವರು ವಿಡಿಯೋವೊಂದನ್ನ ಕೂಡ ಟ್ವಿಟ್ಟರ್ ನಲ್ಲಿ ಅಪ್ ಲೌಡ್ ಮಾಡಿ, ಚಿತ್ರದ ಬಗ್ಗೆ ಅಪ್ ಡೇಟ್ ನೀಡಿದ್ದಾರೆ.[ವಿಡಿಯೋ ಇಲ್ಲಿದೆ ನೋಡಿ]

Kannada Movie Mugulunage Shooting In Pondicherry

ಅಂದ್ಹಾಗೆ, 'ಗಾಳಿಪಟ' ಚಿತ್ರದ ನಂತರ ಗಣೇಶ್ ಮತ್ತು ಯೋಗರಾಜ್ ಭಟ್ 'ಮುಗುಳುನಗೆ' ಚಿತ್ರದಲ್ಲಿ ಒಂದಾಗಿದ್ದು, ರೊಮ್ಯಾಂಟಿಕ್ ಲವ್ ಸ್ಟೋರಿ ನೀಡುವ ತಯಾರಿಯಲ್ಲಿದ್ದಾರಂತೆ. ಇಡೀ ಸಿನಿಮಾ ನಗು ಮೂಡ್ ನಲ್ಲಿ ಸಾಗುವುದರಿಂದ ಚಿತ್ರಕ್ಕೆ 'ಮುಗುಳ್ನಗೆ' ಅಂತ ಹೆಸರಿಡಲಾಗಿದೆಯಂತೆ. ಇನ್ನೂ ಚಿತ್ರದಲ್ಲಿ ಗಣೇಶ್ ಅವರು ಸಖತ್ ಸ್ಟೈಲಿಶ್ ಮತ್ತು ಡಿಫ್ರೆಂಟ್ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಮತ್ತೊಂದು ವಿಶೇಷ.[ಫೋಟೋ ನೋಡಿ: ಸ್ಟೈಲಿಶ್ ಆಗಿದೆ ಗಣೇಶ್ 'ಮುಗುಳ್ನಗೆ' ]

Kannada Movie Mugulunage Shooting In Pondicherry

ಉಳಿದಂತೆ 'ಮುಗುಳ್ನಗೆ' ಚಿತ್ರದಲ್ಲಿ ಗಣೇಶ್ ಗೆ ನಾಯಕಿಯಾಗಿ ಅಮೂಲ್ಯ ಆಯ್ಕೆ ಆಗಿದ್ದು, 'ಕ್ರೇಜಿಬಾಯ್' ನಾಯಕಿ ಆಶಿಕ, ಮತ್ತು ನಿಖಿತಾ ನಾರಾಯಣ್ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

English summary
After the second schedule in Mysore, the team of 'Mugulunage' starring Ganesh and directed by Yogaraj Bhatt are currently in Pondicherry to shoot some major portions for the film

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada