»   » ಆಡಿಯೋ ರಿಲೀಸ್ ಗೂ ಮುನ್ನ 'ಮಳೆ 2' ಹಾಡುಗಳು ಲೀಕ್.!

ಆಡಿಯೋ ರಿಲೀಸ್ ಗೂ ಮುನ್ನ 'ಮಳೆ 2' ಹಾಡುಗಳು ಲೀಕ್.!

Posted By:
Subscribe to Filmibeat Kannada

ಈ ಬಾರಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ಶಶಾಂಕ್ ಅವರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ 'ಮುಂಗಾರು ಮಳೆ 2' ಹಾಡುಗಳು ಭಾರಿ ನಿರೀಕ್ಷೆ ಹುಟ್ಟುಹಾಕಿವೆ.

2006 ರಲ್ಲಿ ತೆರೆಕಂಡಿದ್ದ 'ಮುಂಗಾರು ಮಳೆ ಭಾಗ 1' ಹಾಡುಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಒಂದರಿಂದ ಒಂದು ಹಾಡುಗಳು ಇಡೀ ಗಾಂಧಿನಗರದಲ್ಲಿ ಸಂಗೀತದ ವರ್ಷಧಾರೆಯನ್ನೇ ಸುರಿಸಿದ್ದವು.[ಸೆಪ್ಟೆಂಬರ್ ನಲ್ಲಿ 'ಮುಂಗಾರು ಮಳೆ 2' ಆರ್ಭಟ ಆರಂಭ.?]


Kannada movie 'Mungaru Male 2' one song leaked

ಅಂತೆಯೇ ಈ ಬಾರಿ ಕೂಡ ಹಾಡುಗಳ ಮಳೆ ಸುರಿಯಲಿದ್ದು, ನಾಳೆ(ಆಗಸ್ಟ್ 5) 'ಮಳೆ 2' ಆಡಿಯೋ ರಿಲೀಸ್ ಆಗಲಿದೆ. ಈಗಾಗಲೇ ಹಾಡಿನ ಟೀಸರ್ ಬಿಡುಗಡೆ ಆಗಿರುವುದರಿಂದ ಚಿತ್ರದಲ್ಲಿ ಯಾವ-ಯಾವ ಹಾಡುಗಳಿವೆ ಅಂತ ಅಭಿಮಾನಿಗಳಿಗೆ ಸಣ್ಣ ಕ್ಲ್ಯೂ ಕೂಡ ದೊರೆತಿದೆ.


ಈ ಬಾರಿ ಎಲ್ಲ ಹಾಡುಗಳು ಸಖತ್ ಕಿಕ್ ಕೊಡುತ್ತಿದ್ದು, ಸಂಗೀತ ಪ್ರಿಯರು ಯಾವಾಗ ಹಾಡು ರಿಲೀಸ್ ಆಗುತ್ತೋ ಅಂತ ಕಾತರದಿಂದ ಕಾಯುತ್ತಿದ್ದಾರೆ. ಅಂದಹಾಗೆ ವಿಷ್ಯ ಏನಪ್ಪಾ ಅಂದ್ರೆ, 'ಮುಂಗಾರು ಮಳೆ 2' ಆಡಿಯೋ ಬಿಡುಗಡೆಗೆ ಮುನ್ನವೇ ಹಾಡೊಂದು ಲೀಕ್ ಆಗಿದೆ. ['ಮುಂಗಾರು ಮಳೆ 2' ನಲ್ಲಿ ಗಣಿಗೆ ಎಷ್ಟು ಜನ ನಾಯಕಿಯರು.?]


Kannada movie 'Mungaru Male 2' one song leaked

ಇದೀಗ ಗಾಯಕ ಅರ್ಮಾನ್ ಮಲಿಕ್ ಹಾಡಿರುವ ಚಿತ್ರದ ಒಂದು ರೋಮ್ಯಾಂಟಿಕ್ ಹಾಡು ಲೀಕ್ ಆಗಿದ್ದು, ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ.


"ಸರಿಯಾಗಿ ನೆನಪಿದೆ ನನಗೆ, ಇದಕ್ಕೆಲ್ಲ ಕಾರಣ ಕಿರುನಗೆ...
ಮನದ ಪ್ರತಿ ಗಲ್ಲಿಯೊಳಗೂ ನಿನದೇ ಮೆರವಣಿಗೆ....
ಕಣ್ಣಲ್ಲೇ ಇದೆ ಎಲ್ಲ ಕಾಗದ ....
ನೀನೇ ನನ್ನಯ ಅಂಚೆ ಪೆಟ್ಟಿಗೆ ....
ಏನೇ ಕಂಡರೂ ನೀನೆ ಜ್ಞಾಪಕ .....
ನೀನೇ ಔಷಧಿ ನನ್ನ ಹುಚ್ಚಿಗೆ .....
ತೆರೆದು ನೀನು ಮುದ್ದಾದ ಅಧ್ಯಾಯ .....
ಸಿಗದೇ ಇದ್ರೆ ತುಂಬಾನೇ ಅನ್ಯಾಯ....
ಸೆರೆಸಿಕ್ಕಾಗ ಬೇಕಿಲ್ಲಾ ಜಾಮೀನು ......
ಸರಸಕ್ಕೀಗ ನಿಂದೇನೆ ಕಾನೂನು...."


ಹೀಗೆ ತುಂಬಾ ಮುದ್ದಾದ ಹಾಗೂ ಅರ್ಥಪೂರ್ಣ ಸಾಹಿತ್ಯ ಇರುವ ಈ ಹಾಡು ಈಗಲೇ ಎಲ್ಲರ ಮೊಬೈಲ್ ನಲ್ಲಿ ಓಡಾಡುತ್ತಿದೆ. ಇನ್ನು ಆಗಲೇ ಕೆಲವರು ತಮ್ಮ ಫೋನಿಗೆ ರಿಂಗ್ ಟೋನ್ ಹಾಕಿಕೊಂಡಿದ್ದಾರೆ.


Kannada movie 'Mungaru Male 2' one song leaked

ನಾಳೆ ಆಡಿಯೋ ರಿಲೀಸ್ ಆಗುತ್ತಿದ್ದು, ಚಿತ್ರದ ಎಲ್ಲಾ ಹಾಡುಗಳನ್ನು ಕೇಳಲು ಸಜ್ಜಾಗಿ. ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ನೇಹಾ ಶೆಟ್ಟಿ, ಐಂದ್ರಿತಾ ರೇ ಸೇರಿದಂತೆ ಹಲವರು ಪ್ರಮುಖ ಪಾತ್ರ ವಹಿಸಿದ್ದಾರೆ.

English summary
Kannada movie 'Mungaru Male 2', 'Sariyagi Nenapide Nanage' song Leaked. 'Mungaru Male 2' Audio releasing on August 5th. Kannada actor Ganesh, Kannada Actress Neha Shetty, Actress Aindrita Ray in the lead role. The movie is directed by Shashank.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada