»   » 'ಮುಂಗಾರು ಮಳೆ 2' ಹಾಡಿಗೆ ಚಂದನ್ ಶೆಟ್ಟಿ ರ‍್ಯಾಪ್ ಟಚ್

'ಮುಂಗಾರು ಮಳೆ 2' ಹಾಡಿಗೆ ಚಂದನ್ ಶೆಟ್ಟಿ ರ‍್ಯಾಪ್ ಟಚ್

Posted By:
Subscribe to Filmibeat Kannada

ನಿರ್ದೇಶಕ ಶಶಾಂಕ್ ಅವರು 'ಮುಂಗಾರು ಮಳೆ' ಚಿತ್ರದ ಮುಂದುವರಿದ ಭಾಗ 'ಮುಂಗಾರು ಮಳೆ 2' ಮಾಡುತ್ತಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಇದೀಗ ಚಿತ್ರದ ಚಿತ್ರೀಕರಣವನ್ನು ಸಂಪೂರ್ಣಗೊಳಿಸಿರುವ ನಿರ್ದೇಶಕ ಮುಂದಿನ ವಾರದಿಂದ ಪ್ರಚಾರ ಕಾರ್ಯ ಶುರು ಮಾಡಲಿದ್ದಾರೆ.

ಅಂದಹಾಗೆ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಅವರು ಅಪ್ಪ-ಮಗನ ಪಾತ್ರದಲ್ಲಿ ಮಿಂಚುತ್ತಿರುವುದರಿಂದ ಅಭಿಮಾನಿಗಳಲ್ಲಿ ಕೊಂಚ ಕುತೂಹಲ ಜಾಸ್ತಿ ಇದೆ.[ಸ್ಲೊವೇನಿಯಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಗೆ ಏನು ಕೆಲಸ?]


Kannada movie 'Mungaru Male 2' shooting completed

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಮ್ಯೂಸಿಕ್ ಕಂಪೋಸ್ ಮಾಡಿರುವ ಚಿತ್ರದಲ್ಲಿ ಒಂದು ಹಾಡಿದ್ದು, ಆ ಹಾಡಿನಲ್ಲಿ ಗಣೇಶ್ ಮತ್ತು ರವಿಚಂದ್ರನ್ ಅವರ ನಡುವಿನ ಭಾವನಾತ್ಮಕ ಸಂಬಂಧವಿರುವ ದೃಶ್ಯಗಳು ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ಈ ಹಾಡಿಗೆ ರ‍್ಯಾಪ್ ಕಿಂಗ್ ಚಂದನ್ ಶೆಟ್ಟಿ ಅವರು ಗೀತೆ ರಚನೆ ಮಾಡಿದ್ದಾರೆ.['ಮುಂಗಾರು ಮಳೆ 2' ನಲ್ಲಿ ಗಣಿ ಜೊತೆ ಐಂದ್ರಿತಾ ಡ್ಯುಯೆಟ್]


Kannada movie 'Mungaru Male 2' shooting completed

'ಏನೇ ಮಾಡು ಬಯ್ಯೋದಿಲ್ಲ ನನ್ನ ಡ್ಯಾಡಿ, ಚಿಕ್ಕೋನಿದ್ದಾಗ ತಿದ್ದಿಸಿದ್ರು ಎಬಿಸಿಡಿ' ಅನ್ನೋ ಸಾಲುಗಳಿರುವ ಹಾಡು ಸಾಕಷ್ಟು ಸುಂದರವಾಗಿದೆ ಮೂಡಿಬಂದಿದೆ. ಇನ್ನು ಈ ತಿಂಗಳ ಅಂತ್ಯಕ್ಕೆ ಚಿತ್ರದ ಆಡಿಯೋ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ಜುಲೈ ತಿಂಗಳಿನಲ್ಲಿ ಸಿನಿಮಾ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ.[ಒಂಟೆ ಸವಾರಿ ಮಾಡಿ ಗಾಯ ಮಾಡಿಕೊಂಡ 'ಮಳೆ 2' ಹುಡುಗಿ]


Kannada movie 'Mungaru Male 2' shooting completed

ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿರುವ ಕರಾವಳಿ ಬೆಡಗಿ ನೇಹಾ ಶೆಟ್ಟಿ ಅವರು ಬೆಳ್ಳಿತೆರೆಯ ಮೇಲೆ ಯಾವ ರೀತಿ ಕಮಾಲ್ ಮಾಡುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

English summary
The shooting for the Kannada movie 'Mungaru Male 2', which features Actor Ganesh, Actress Neha Shetty in the lead roles has been completed. The movie is directed by Shashank.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada