»   » ನಾಗಶೇಖರೂ ದಯವಿಟ್ಟು ಟ್ರಾಜಿಡಿ ಬಿಡಪ್ಪ

ನಾಗಶೇಖರೂ ದಯವಿಟ್ಟು ಟ್ರಾಜಿಡಿ ಬಿಡಪ್ಪ

Posted By:
Subscribe to Filmibeat Kannada

ಅರಮನೆ, ಸಂಜು ವೆಡ್ಸ್ ಗೀತಾ ಹಾಗೂ ಮೈನಾ ಮೂರು ಚಿತ್ರಗಳಲ್ಲೂ ಕಾಮನ್ ಫ್ಯಾಕ್ಟರ್ ಏನು ಎಂದು ಪ್ರಶ್ನಿಸಿದರೆ ಯಾರಾದರೂ ಥಟ್ಟನೆ ಉತ್ತರಿಸುತ್ತಾರೆ. ಇದು ನಾಗಶೇಖರ್ ರಾಚಯ್ಯ ಅವರ್ ಚಿತ್ರ. ಅದರೆ, ಇದರ ಜೊತೆಗೆ ಮೂರು ಚಿತ್ರಗಳಲ್ಲೂ ಕಾಮನ್ ಆಗಿರೋದು ಟ್ರಾಜಿಡಿ ಎಂಡಿಂಗ್.

ಹೀರೋಯಿನ್ ಗಳು ಗ್ಲಿಸಿರೀನ್ ಸುರಿದುಕೊಂಡು ಲೀಟರ್ ಗಟ್ಟಲೆ ಪರದೆ ಒದ್ದೆ ಮಾಡುವಂತೆ ಅಳುತ್ತಿದ್ದ ಕಾಲದಿಂದ ಕನ್ನಡ ಚಿತ್ರರಂಗ ಬದಲಾದರೂ ನಿರ್ದೇಶಕ ಮಾತ್ರ ತನ್ನ ಸಕ್ಸೆಸ್ ಫಾರ್ಮೂಲಾದಲ್ಲಿ ರಾಜಿಯಾಗುತ್ತಿಲ್ಲ.

ಮೈನಾ ಚಿತ್ರದಲ್ಲಿ ಎಲ್ಲವೂ ಇದೆ, ಕಥೆ(ಸ್ವಮೇಕ್ ಚಿತ್ರವಾದ್ದರಿಂದ ದೊಡ್ಡ ವಿಶಲ್ ಹೊಡಿಬೇಕು) ಚಿತ್ರಕಥೆ, ಸತ್ಯ ಹೆಗಡೆ ಛಾಯಾಗ್ರಹಣ, ನಾಯಕ ಚೇತನ್, ನಾಯಕಿ ನಿತ್ಯಾ ಮೆನನ್ ಅಭಿನಯ, ತಾರೆಗಳ ದಂಡೆ ಇದೆ. ಆದರೆ, ಚಿತ್ರ ಟ್ರಾಜಿಡಿ ಎಂಡ್ ಮಾಡಿರೋದು ಹಲವಾರು ಅಭಿಮಾನಿಗಳಿಗೆ ಇರಸು ಮುರಸು ಉಂಟು ಮಾಡಿದೆ.

ರಿಯಲ್ ಕಥೆಯಲ್ಲಿ ಇಲ್ಲದ ಎಂಡಿಂಗ್ ರೀಲ್ ಕಥೆಯಲ್ಲಿ ಯಾಕಪ್ಪ ಮಾಡಿದೆ ಎಂದು ಫ್ಯಾನ್ಸ್ ಪ್ರಶ್ನಿಸಿದ್ದಾರೆ. ನಾಗಶೇಖರೂಗೆ ಬಹುಶಃ ಲವ್ ಫೇಲ್ಯೂರ್ ಇರ್ಬೇಕು ಕಣ್ರಿ ಅದ್ಕೆ ಎಲ್ಲಾ ಸಿನಿಮಾನೂ ಸ್ಯಾಡ್ ಎಂಡಿಂಗ್ ಮಾಡುತ್ತಾನೆ ಛೇ ಎಂದು ಪ್ರೀತಿಯಿಂದ ನಾಗಶೇಖರ್ ನನ್ನು ಬೈದುಕೊಂಡ ಫ್ಯಾಮಿಲಿ ಪ್ರೇಕ್ಷಕರಿದ್ದಾರೆ.

ಪಕ್ಕಾ ಕಮರ್ಷಿಯಲ್, ಐಟಂ ಸಾಂಗ್ಸ್, ಫೈಟ್ಸ್, ಫಾರೀನ್ ಶೂಟಿಂಗ್ ಎನ್ನುವ ನಿರ್ದೇಶಕರ ನಡುವೆ ವಿಭಿನ್ನವಾಗಿ ನಿಲ್ಲುವ ನಾಗಶೇಖರ್ ಅವರು ಮೂರು ಪ್ರಯತ್ನಗಳಲ್ಲಿ ಗೆದ್ದಿದ್ದಾರೆ ನಿಜ. ಆದರೆ, ನಿರೂಪಣಾ ಶೈಲಿ ಬದಲಾಯಿಸಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ಅದು ಆರೋಗ್ಯಕರ ಬೆಳವಣಿಗೆಯಾಗುತ್ತದೆ ಕೂಡಾ.

ಟ್ರಾಜಿಡಿ ಎಂಡಿಂಗ್ ಇರುವುದಕ್ಕೋ ಏನೋ ಮೈನಾ ಈ ವಾರ ಗಳಿಕೆಯಲ್ಲಿ ಕೊಂಚ ಹಿಂದೆ ಬಿದ್ದಿದೆ. ಆದರೆ, ಹಾಕಿದ ಕಾಸಿಗೆ ನಷ್ಟವಿಲ್ಲ. ವಿಮರ್ಶಕರಿಂದಲೂ ಚಿತ್ರ ಮೆಚ್ಚುಗೆ ಪಡೆದಿದ್ದು, ಈ ವರ್ಷ ಪ್ರಶಸ್ತಿಗಳನ್ನು ಬಾಚುವ ನಿರೀಕ್ಷೆಯಿದೆ.

ಪ್ರೇಕ್ಷಕರು, ಅಭಿಮಾನಿಗಳ ಒತ್ತಾಯಕ್ಕೆ ಮಣಿದೋ ಏನೋ ಇತ್ತೀಚೆಗೆ ಮಾಧ್ಯಮಗಳಲ್ಲಿ ನಾಗಶೇಖರ್ ಅವರು ತಮ್ಮ ಶೈಲಿ ಬದಲಾಯಿಸುವ ಭರವಸೆ ನೀಡಿದ್ದಾರೆ. ಮೈನಾ ಚಿತ್ರದಲ್ಲಿ ನಾಯಕ ನಾಯಕಿಗೆ ಗುಂಡೇಟು ಬೀಳುವುದಷ್ಟೇ ತೋರಿಸಲಾಗಿದೆ. ಇಬ್ಬರು ಸಾಯುತ್ತ್ತಾರೆ ಎಂದು ಹೇಳಿಲ್ಲ. ನಿಜ ಜೀವನದಲ್ಲಿ ಕಥೆ ಸುಖಾಂತ್ಯವಾಗಿದೆ.

ಮೈನಾ ಭಾಗ 2 ರಲ್ಲಿ ಮುಂದುವರೆದ ಕಥೆಯನ್ನು ನಿರೀಕ್ಷಿಸಬಹುದು. ಹೊಸ ನಿರೂಪಣಾ ಶೈಲಿಯನ್ನು ಕೂಡಾ ಎಂದು ನಿರ್ದೇಶಕ ನಾಗಶೇಖರ್ ಗಡ್ಡ ನೀವಿಕೊಂಡಿದ್ದಾರೆ. ಯಾರಿಗೆ ಗೊತ್ತು ಮೈನಾ 2 ಆರಂಭದಲ್ಲಿ ಹ್ಯಾಪಿ ಹ್ಯಾಪಿಯಾಗಿದ್ದು ಕೊನೆಗೆ ಮತ್ತದೇ ಟ್ರಾಜಿಡಿ ಟ್ರ್ಯಾಕ್ ಹಿಡಿಯಬಹುದು. ಎನಿವೇ ಬೆಸ್ಟ್ ಆಫ್ ಲಕ್ ಟು ನಾಗಶೇಖರ್ ಅಂಡ್ ಟೀಂ.

English summary
‘We have just shown the lovers collapsing after shot by the police. We have nowhere said that they are dead. The film is based on a real incident and the real couple are living happily now. I want to show what all happened after the lovers collapse in the second part’ says Director Nagshekhar.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada