Don't Miss!
- News
ಆರ್ಥಿಕ ಸಂಕಷ್ಟದ ನಡುವೆಯೇ ಪಾಕಿಸ್ತಾನದಲ್ಲಿ ಮತ್ತೊಂದು ದುರಂತ: ಮಸೀದಿಯಲ್ಲಿ ಆತ್ಮಹುತಿ ದಾಳಿ- 46 ಸಾವು, 150 ಮಂದಿಗೆ ಗಾಯ
- Sports
IND W vs WI W: ಭಾರತದ ಉತ್ತಮ ಆಲ್ರೌಂಡ್ ಪ್ರದರ್ಶನ: ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ
- Lifestyle
ಜನವರಿ 30ಕ್ಕೆ ಶನಿ ಅಸ್ತ: 35 ದಿನದವರೆಗೆ ಈ 6 ರಾಶಿಯವರು ಹೆಚ್ಚು ಜಾಗ್ರತೆವಹಿಸಬೇಕು
- Finance
ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
- Technology
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದಾಂಪತ್ಯ ಜೀವನಕ್ಕೆ ಅಡಿಯಿಡಲು ಸಜ್ಜಾದ 'ನಾನಿ' ನಟಿ ಪ್ರಿಯಾಂಕ
ಜುಲೈ 1ರಂದು ತೆರೆ ಕಾಣುತ್ತಿರುವ 'ನಾನಿ' ಎಂಬ ಹಾರರ್ ಥ್ರಿಲ್ಲರ್ ಚಿತ್ರದ ನಾಯಕಿ ಪ್ರಿಯಾಂಕ ರಾವ್ ಅವರು ಹಸೆಮಣೆ ಏರಲು ತಯಾರಿ ನಡೆಸುತ್ತಿದ್ದಾರೆ. ಯಾಕಪ್ಪಾ ಅಷ್ಟು ಬೇಗ ಅವರಿಗೆ ಸಿನಿಮಾ ರಂಗ ಸಾಕಾಯ್ತ, ಇನ್ನು ಮುಂದೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲ್ವಾ?, ಅಂತ ನಿಮಗೆ ನೀವೇ ಪ್ರಶ್ನೆ ಮಾಡಿಕೊಳ್ಳಬಹುದು.
ಯಾಕೆಂದರೆ ನಟಿ ಪ್ರಿಯಾಂಕ ರಾವ್ ಅವರು ಇಲ್ಲಿಯವರೆಗೆ ನಟಿಸಿದ್ದು, ಕೇವಲ ಮೂರೇ ಸಿನಿಮಾಗಳಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ 'ಸೂಪರ್ ರಂಗ' ಚಿತ್ರದಲ್ಲಿ ನಟಿ ಕೃತಿ ಖರಬಂದ ಅವರ ತಂಗಿಯ ಪಾತ್ರದಲ್ಲಿ ನಟಿಸಿದ್ದರು. ತದನಂತರ ಗಣೇಶ್ ರಚಿತಾ ರಾಮ್ ಅವರ 'ದಿಲ್ ರಂಗೀಲಾ' ಚಿತ್ರದಲ್ಲಿ ಕಾಣಿಸಿಕೊಂಡ ನಂತರ ಇದೀಗ 'ನಾನಿ' ಮೂರನೇ ಸಿನಿಮಾ.[ಶುಕ್ರವಾರದಿಂದ ಹಾರರ್-ಥ್ರಿಲ್ಲರ್ 'ನಾನಿ' ಅಬ್ಬರ ಶುರು]
ಆದರೆ ಪ್ರಿಯಾಂಕ ಅವರು ಹೇಳುವ ಪ್ರಕಾರ ಅವರೀಗ ಸದ್ಯಕ್ಕೆ ಬರೀ ನಿಶ್ಚಿತಾರ್ಥ ಮಾತ್ರ ಮಾಡಿಕೊಂಡಿದ್ದಾರೆ. ಮದುವೆ ಏನಿದ್ದರೂ ಮುಂದಿನ ವರ್ಷ. ಅಂದಹಾಗೆ ನಟಿ ಪ್ರಿಯಾಂಕ ರಾವ್ ಅವರು ನಿಶ್ಚಿತಾರ್ಥ ಮಾಡಿಕೊಂಡಿರೋದು ಚೆನ್ನೈ ಮೂಲದ ಸಾಫ್ಟ್ ವೇರ್ ಉದ್ಯೋಗಿ ಪ್ರವೀಣ್ ಕುಮಾರ್ ಎಂಬುವವರ ಜೊತೆ.
ವಿದೇಶದಲ್ಲೇ ಶಿಕ್ಷಣ ಪೂರೈಸಿರುವ ಪ್ರವೀಣ್ ಕುಮಾರ್ ಅವರು ಇದೀಗ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾರೆ. ಇವರಿಬ್ಬರು ಬಹಳ ಕಾಲದಿಂದ ಉತ್ತಮ ಸ್ನೇಹಿತರಾಗಿದ್ದವರು ಇದೀಗ ಎರಡೂ ಕುಟುಂಬಗಳ ಸಮ್ಮುಖದಲ್ಲಿ ದಂಪತಿಗಳಾಗುತ್ತಿದ್ದಾರೆ.[ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ನಟಿ ಪ್ರಿಯಾಮಣಿ]

ಇನ್ನು ಮದುವೆ ನಂತರ ನಟಿ ಪ್ರಿಯಾಂಕ ರಾವ್ ಅವರು ಚಿತ್ರರಂಗಕ್ಕೆ ಗುಡ್ ಬೈ ಹೇಳಿ ಕ್ಯಾಲಿಫೋರ್ನಿಯಾಗೆ ಹಾರುತ್ತಾರಾ?, ಅನ್ನೋ ಪ್ರಶ್ನೆಗೆ ಇಲ್ಲಾ ಎನ್ನುತ್ತಾರೆ. ಮದುವೆ ನಂತರ ಕೂಡ ನಟಿ ಪ್ರಿಯಾಂಕ ಅವರು ಸಿನಿಮಾಗಳಲ್ಲಿ ನಟಿಸಲಿದ್ದು, ಇದಕ್ಕೆ ಪ್ರವೀಣ್ ಕುಮಾರ್ ಅವರ ಮನೆಯವರ ಸಮ್ಮತಿ ಇದೆ ಎಂದಿದ್ದಾರೆ.
ಒಟ್ನಲ್ಲಿ ಸಂಸಾರದ ಸರಿಗಮಪದ ಜೊತೆ-ಜೊತೆಗೆ ಕನ್ನಡ ಚಿತ್ರರಂಗದಲ್ಲಿ ಭದ್ರ ನೆಲೆ ಕಂಡುಕೊಳ್ಳುವತ್ತ ನಟಿ ಪ್ರಿಯಾಂಕ ರಾವ್ ಒಂದೊಂದೇ ಹೆಜ್ಜೆ ಇಡುತ್ತಿದ್ದಾರೆ.