»   » 'ನಾನು ಮತ್ತು ವರಲಕ್ಷ್ಮಿ'ಯ ಹಾಡುಗಳನ್ನು ಆಲಿಸಲು ಸಜ್ಜಾಗಿ

'ನಾನು ಮತ್ತು ವರಲಕ್ಷ್ಮಿ'ಯ ಹಾಡುಗಳನ್ನು ಆಲಿಸಲು ಸಜ್ಜಾಗಿ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಜಿ.ಕೆ ವೆಂಕಟೇಶ್ ಅವರ ಮೊಮ್ಮಗ ನಟ ಪೃಥ್ವಿ ಅವರ ಚೊಚ್ಚಲ ಚಿತ್ರ 'ನಾನು ಮತ್ತು ವರಲಕ್ಷ್ಮಿ' ಚಿತ್ರೀಕರಣ ಸಂಪೂರ್ಣಗೊಳಿಸಿದ್ದು, ಸದ್ಯದಲ್ಲೇ ತೆರೆಗೆ ಅಪ್ಪಳಿಸಲಿದೆ.

ಇದೀಗ ಚಿತ್ರದ ಆಡಿಯೋ ಬಿಡುಗಡೆಗೆ ದಿನಗಣನೆ ಶುರುವಾಗಿದ್ದು, ಜುಲೈ 24 ರಂದು ಚಿತ್ರದ ಹಾಡುಗಳ ಬಿಡುಗಡೆ ಅದ್ಧೂರಿಯಾಗಿ ಜರುಗಲಿದೆ. ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಚಿತ್ರದ ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದು, 'ಡಿ-ಬೀಟ್ಸ್' ಆಡಿಯೋ ಮಾರಾಟದ ಜವಾಬ್ದಾರಿ ಹೊತ್ತುಕೊಂಡಿದೆ.['ನಾನು ಮತ್ತು ವರಲಕ್ಷ್ಮಿ' ಸ್ಯಾಂಡಲ್ ವುಡ್ ನ ಮೊದಲ ಬೈಕ್ ರೇಸಿಂಗ್ ಸಿನಿಮಾ..!]


Kannada Movie 'Naanu Mattu Varalakshmi' Audio Release On July 24

ಕನ್ನಡ ಚಿತ್ರರಂಗದಲ್ಲೇ ಮೊದಲ ಬಾರಿಗೆ ಬೈಕ್ ರೇಸಿಂಗ್ ಆಧಾರಿತ ಕಥೆಯನ್ನು ನಿರ್ದೇಶಕ ಪ್ರೀತಂ ಗುಬ್ಬಿ ಅವರು ಬಹಳ ಸುಂದರವಾಗಿ ತೆರೆಯ ಮೇಲೆ ತಂದಿದ್ದಾರೆ. ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಬೈಕ್ ರೇಸರ್ ಕೋಚ್ ಆಗಿ ಈ ಚಿತ್ರದಲ್ಲಿ ಮಿಂಚಿದ್ದಾರೆ.


ನಟಿ ಮಾಳವಿಕಾ ಮೋಹನನ್ ಅವರು ನಟ ಪೃಥ್ವಿ ಅವರ ಜೊತೆ 'ನಾನು ಮತ್ತು ವರಲಕ್ಷ್ಮಿ' ಚಿತ್ರದಲ್ಲಿ ಮಿಂಚುವ ಮೂಲಕ ಮೊಟ್ಟ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಎಂಟ್ರಿ ಕೊಡುತ್ತಿದ್ದಾರೆ.['ನಾನು ಮತ್ತು ವರಲಕ್ಷ್ಮಿ' ಚಿತ್ರದ ಟ್ರೈಲರ್ ನೋಡಿದ್ರಾ?]


Kannada Movie 'Naanu Mattu Varalakshmi' Audio Release On July 24

ಕೊಲ್ಲೂರು ಮೂಕಾಂಬಿಕ ಕ್ರಿಯೇಷನ್ಸ್ ಅಡಿಯಲ್ಲಿ ಈ ಚಿತ್ರ ಮೂಡಿಬರುತ್ತಿದ್ದು, ನಟ ಪೃಥ್ವಿ ಅವರ ತಂದೆ ಕೆ.ಮಂಜುನಾಥ್ ಅವರು ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಸುಮಾರು 50 ಲಕ್ಷ ಬಜೆಟ್ ನಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡಲಾಗಿದ್ದು, ಪ್ರೊಫೆಷನಲ್ ಬೈಕ್ ರೇಸರ್ ಆದ ಅಶೋಕ್ ಮತ್ತು ವಿಜಯ್ ಕುಮಾರ್ ಅವರನ್ನು ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಬಳಸಿಕೊಳ್ಳಲಾಗಿದೆ.[ಪ್ರೀತಂ ಗುಬ್ಬಿ ಹೊಸ ಚಿತ್ರಕ್ಕೆ ಸಿಕ್ತು ಟೈಟಲ್]


ಒಟ್ನಲ್ಲಿ ಹೊಸ ಕಾನ್ಸೆಪ್ಟ್ ಮತ್ತು ಹೊಸ ನಾಯಕ-ನಾಯಕಿ ಜೊತೆ 'ನಾನು ಮತ್ತು ವರಲಕ್ಷ್ಮಿ' ಚಿತ್ರದ ಮೂಲಕ ನಿರ್ದೇಶಕ ಪ್ರೀತಂ ಗುಬ್ಬಿ ಅವರು ಗಾಂಧಿನಗರಕ್ಕೆ ಕಾಲಿಟ್ಟಿದ್ದು, ಕನ್ನಡಾಭಿಮಾನಿಗಳು ಹೊಸ ಪ್ರತಿಭೆಗಳನ್ನು ಯಾವ ರೀತಿ ಸ್ವೀಕರಿಸುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.[ಬಣ್ಣ ಹಚ್ಚಿದ ಜಿ.ಕೆ.ವೆಂಕಟೇಶ್ ಮೊಮ್ಮಗ ಪೃಥ್ವಿ]

English summary
Director Preetham Gubbi's 'Naanu Matthu Varalakshmi' audio will be released on July 24, through D Beats. V Harikrishna has composed the music for this movie, which is touted to be India's first motocross movie. Kannada Actor Prithvi, Actress Malavika Mohanan in the lead role.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada