»   » 'ಡಬ್ ಸ್ಮಾಶ್' ಮಾಡಿ RX 100 ಬೈಕ್ ಬಹುಮಾನವಾಗಿ ಗೆಲ್ಲಿ

'ಡಬ್ ಸ್ಮಾಶ್' ಮಾಡಿ RX 100 ಬೈಕ್ ಬಹುಮಾನವಾಗಿ ಗೆಲ್ಲಿ

Posted By:
Subscribe to Filmibeat Kannada

'ಬಾಕ್ಸರ್' ಚಿತ್ರದ ನಂತರ ನಿರ್ದೇಶಕ ಪ್ರೀತಂ ಗುಬ್ಬಿ ಅವರು 'ನಾನು ಮತ್ತು ವರಲಕ್ಷ್ಮಿ' ಎಂಬ ಚಿತ್ರದ ಸಾರಥ್ಯ ವಹಿಸಿಕೊಂಡಿರೋದು ಎಲ್ಲರಿಗೂ ತಿಳಿದಿರೋ ವಿಚಾರ. ನವ ನಟ ಪೃಥ್ವಿ ಮತ್ತು ಮಲಯಾಳಂ ಬೆಡಗಿ ಮಾಳವಿಕಾ ಮೋಹನನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ನಾನು ಮತ್ತು ವರಲಕ್ಷ್ಮಿ' ತೆರೆಗೆ ಬರಲು ಸಜ್ಜಾಗಿ ನಿಂತಿದೆ.

ಅಂದಹಾಗೆ ಚಿತ್ರವನ್ನು ತೆರೆಗೆ ತರಲು ತಯಾರಿ ನಡೆಸಿರುವ ಚಿತ್ರತಂಡ, ಇದೀಗ ಅಭಿಮಾನಿಗಳಿಗೆ ಒಂದೊಳ್ಳೆ ಗಿಫ್ಟ್ ನೀಡಲು ನಿರ್ಧರಿಸಿದೆ. ಈಗಾಗ್ಲೆ ಎಲ್ಲರಿಗೂ ಗೊತ್ತಿರುವಂತೆ 'ನಾನು ಮತ್ತು ವರಲಕ್ಷ್ಮಿ' ಬೈಕ್ ರೇಸಿಂಗ್ ಕಥೆಯಾಧರಿತ ಸಿನಿಮಾ.[ಭಗ್ನಪ್ರೇಮಿಗೆ ಯೋಗರಾಜ್ ಭಟ್ರ ತರ್ಲೆ, ಯಾಕಿಂಗೆ ಬ್ರೋ.?]

ಮೊಟ್ಟ ಮೊದಲ ಬಾರಿಗೆ ಬೈಕ್ ರೇಸ್ ಗೆ ಸಂಬಂಧಪಟ್ಟ ಸಿನಿಮಾ ಕನ್ನಡದಲ್ಲಿ ತಯಾರಾಗುತ್ತಿದೆ ಅನ್ನೋದು ಇನ್ನೊಂದು ವಿಶೇಷ. ಇನ್ನು ಈ ಸಿನಿಮಾ ಬಿಡುಗಡೆ ಆಗೋ ಮುನ್ನವೇ ಒಂದು ಸ್ಟೈಲಿಷ್ ಮತ್ತು ಸ್ಪೆಷಲ್ ಬೈಕ್ ಗೆಲ್ಲುವ ಬಂಪರ್ ಆಫರ್ ಅನ್ನು, ಅಭಿಮಾನಿಗಳಿಗೆ ಚಿತ್ರತಂಡ ನೀಡುತ್ತಿದೆ. ಮುಂದೆ ಓದಿ...

'ಡಬ್ ಸ್ಮಾಶ್' ಮಾಡಿ ಬೈಕ್ ಗೆಲ್ಲಿ

'ನಾನು ಮತ್ತು ವರಲಕ್ಷ್ಮಿ' ಚಿತ್ರದಲ್ಲಿ ನಟ ಪ್ರಕಾಶ್ ರೈ ಅವರು ಬಳಸಿರುವ 'RX 100' ಬೈಕ್ ನ್ನು ಗೆಲ್ಲುವ ಸುವರ್ಣಾವಕಾಶ ನಿಮಗೆ ಒದಗಿ ಬರಲಿದೆ. ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ, ವಿ.ಹರಿಕೃಷ್ಣ ಅವರು ಹಾಡಿರುವ 'ಎಸ್ ಬ್ರೋ' ಎಂಬ ಹಾಡನ್ನು ಡಬ್ ಸ್ಮಾಶ್ ಮಾಡಿ 9901707818 ಫೋನ್ ನಂ.ಗೆ ಕಳುಹಿಸಿಕೊಡಬೇಕು.['ನಾನು ಮತ್ತು ವರಲಕ್ಷ್ಮಿ'ಯ ಹಾಡುಗಳನ್ನು ಆಲಿಸಲು ಸಜ್ಜಾಗಿ]

ಸಾಧು ಮಹಾರಾಜ್ ರಿಂದ ವಿಜೇತರ ಆಯ್ಕೆ

ವಿಜೇತರನ್ನು ಕಾಮಿಡಿ ನಟ ಕಮ್ ಸಂಗೀತ ನಿರ್ದೇಶಕ ಸಾಧು ಕೋಕಿಲಾ ಅವರು ಆಯ್ಕೆ ಮಾಡಲಿದ್ದು, ವಿಜೇತರಾದವರಿಗೆ ಚಿತ್ರದ ಫಸ್ಟ್ ಡೇ ಫಸ್ಟ್ ಶೋ ದಿನ, ನಿರ್ದೇಶಕರು ಮತ್ತು ತಂಡದವರು ಸ್ಪೆಷಲ್ ಬೈಕ್ ವಿತರಣೆ ಮಾಡಲಿದ್ದಾರೆ.['ನಾನು ಮತ್ತು ವರಲಕ್ಷ್ಮಿ' ಚಿತ್ರದ ಟ್ರೈಲರ್ ನೋಡಿದ್ರಾ?]

ವಿಭಿನ್ನ ಪ್ರೊಮೋಷನ್

ಇದು 'ನಾನು ಮತ್ತು ವರಲಕ್ಷ್ಮಿ' ಚಿತ್ರದ ವಿಭಿನ್ನ ಪ್ರಚಾರರ್ಥ ಕಾರ್ಯಕ್ರಮವಾಗಿದ್ದು, ಈ ಮೊದಲು 'ರನ್ ಆಂಟನಿ', 'ನಾಗರಹಾವು' ಮತ್ತು 'ನಟರಾಜ ಸರ್ವಿಸ್' ಚಿತ್ರಗಳು ತಮ್ಮದೇ ಆದ ವಿಭಿನ್ನ ರೀತಿಯಲ್ಲಿ ಸಿನಿಮಾಗಳನ್ನು ಪ್ರೊಮೋಟ್ ಮಾಡಿದ್ದಾರೆ. ಚಿತ್ರದಲ್ಲಿ ನಟ ಪ್ರಕಾಶ್ ರಾಜ್ ಅವರು ಬೈಕ್ ರೇಸರ್ ಕೋಚ್ ಆಗಿ ಕಾಣಿಸಿಕೊಂಡಿದ್ದಾರೆ.

ಸ್ಪೆಷಲ್ ಬೈಕ್ ಗೆಲ್ಲುವ ಅವಕಾಶ

ಅದೇನೇ ಇರಲಿ ನಿಮ್ಮ ಡಬ್ ಸ್ಮಾಶ್ ಚಿತ್ರತಂಡಕ್ಕೆ ಮೆಚ್ಚುಗೆಯಾದರೆ, ನಿಮಗೆ ಸ್ಪೆಷಲ್ ಬೈಕ್ ಗೆಲ್ಲುವ ಅವಕಾಶ ದೊರಕುತ್ತದೆ. ಆದ್ದರಿಂದ ಆಸಕ್ತರು-ಡಬ್ ಸ್ಮಾಶ್ ಪ್ರಿಯರು ತಪ್ಪದೇ ಈ ಅವಕಾಶವನ್ನು ಬಳಸಿಕೊಳ್ಳಿ, ಬೈಕ್ ಗೆಲ್ಲಿ.

English summary
The team of has decided to gift a Yamaha RX 100 bike as a part of the promotional activities of the film. The team has organised a dub smash contest for the viewers and the lucky winners of the contest will be awarded the bike. Those who are interested can send the dub smash song of 'Yes Bro' to whats app number 9901707818. Kannada Actor Prithvi, Actress Malvika Mohanan in the lead role. The movie is directed by Preetham Gubbi.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada