»   » 'ಬಾಹುಬಲಿ' ಚಿತ್ರಕ್ಕೆ ಸವಾಲ್ ಹಾಕಿದ ಕನ್ನಡದ 'ನಾಗರಹಾವು'.!

'ಬಾಹುಬಲಿ' ಚಿತ್ರಕ್ಕೆ ಸವಾಲ್ ಹಾಕಿದ ಕನ್ನಡದ 'ನಾಗರಹಾವು'.!

Posted By:
Subscribe to Filmibeat Kannada

ಇಡೀ ಭಾರತೀಯ ಚಿತ್ರರಂಗದಲ್ಲಿ ಕಳೆದ ವರ್ಷ ಹೊಸ ಸಂಚಲನ ಹುಟ್ಟುಹಾಕಿದ ಸಿನಿಮಾ ತೆಲುಗಿನ 'ಬಾಹುಬಲಿ'. ತಾಂತ್ರಿಕತೆಯಲ್ಲಿ 'ಬಾಹುಬಲಿ' ನಂಬರ್ ಒನ್ ಅಂತ ಕೊಂಡಾಡಿದವರು ಭಾರತದಾದ್ಯಂತ ಬೇಕಾದಷ್ಟು ಮಂದಿ.

ಅದಕ್ಕೆ ತಕ್ಕ ಹಾಗೆ, ಎಸ್.ಎಸ್.ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪುರಸ್ಕಾರ ಸಿಕ್ತು. ಪ್ರತಿಷ್ಟಿತ ಸ್ವರ್ಣ ಕಮಲ ಪ್ರಶಸ್ತಿ ಮುಡಿಗೇರಿಸಿಕೊಳ್ತು. ಈಗ 'ಬಾಹುಬಲಿ' ಬಗ್ಗೆ ನಾವು ಇಷ್ಟೆಲ್ಲಾ ಹೇಳಲು ಕಾರಣ ನಮ್ಮ ಕನ್ನಡದ 'ನಾಗರಹಾವು' ಸಿನಿಮಾ. [ಬಾಹುಬಲಿ ವಿಮರ್ಶೆ : ಓಕೆ, ಆದರೆ ಅಂಥ ನಿರೀಕ್ಷೆ ಬೇಡ]


'ಬಾಹುಬಲಿ' ಚಿತ್ರಕ್ಕೆ ಸೆಡ್ಡು ಹೊಡೆಯುವ ರೀತಿಯಲ್ಲಿ ನಮ್ಮ ಕನ್ನಡ ಚಿತ್ರ 'ನಾಗರಹಾವು' ತಯಾರಾಗಿದೆ. 'ಬಾಹುಬಲಿ' ಚಿತ್ರಕ್ಕಿಂತ 'ನಾಗರಹಾವು' ಗ್ರೇಟ್ ಎನ್ನುವ ಮಟ್ಟಕ್ಕೆ ಸಿದ್ಧವಾಗಿದೆ. ಹೆಚ್ಚಿನ ಮಾಹಿತಿಗಾಗಿ, ಕೆಳಗಿರುವ ಫೋಟೋ ಸ್ಲೈಡ್ಸ್ ಕ್ಲಿಕ್ಕಿಸಿ...


'ಬಾಹುಬಲಿ' ಚಿತ್ರದಲ್ಲಿ ಏನಿದೆ.?

ತಾಂತ್ರಿಕತೆಯಲ್ಲಿ ಅದ್ಭುತವಾಗಿರುವ 'ಬಾಹುಬಲಿ' ಹೇಳಿ ಕೇಳಿ ಐತಿಹಾಸಿಕ ಹಿನ್ನಲೆ ಇರುವ ಸಿನಿಮಾ. ಹೀಗಾಗಿ, ಚಿತ್ರದಲ್ಲಿ ಜಲಪಾತ, ಮಾಹಿಶ್ಮತಿ ಸಾಮ್ರಾಜ್ಯ, ಅರಮನೆ ಹಾಗೂ ಯುದ್ಧ ಸನ್ನಿವೇಶಗಳಿಗೆ ಗ್ರಾಫಿಕ್ಸ್ ಬಳಕೆ ಮಾಡಲಾಗಿದೆ.


ಹಾಲಿವುಡ್ ನಲ್ಲಿ ನೋಡಿರೋದೇ.!

'ಬಾಹುಬಲಿ' ಚಿತ್ರದ ಕೆಲ ಸನ್ನಿವೇಶಗಳು ಹಾಲಿವುಡ್ ಚಿತ್ರಗಳನ್ನ ನೆನಪು ಮಾಡುವುದು ಸಹಜ.


'ಬಾಹುಬಲಿ'ಗಿಂತ 'ನಾಗರಹಾವು' ಗ್ರೇಟ್.! ಯಾಕೆ.?

'ಬಾಹುಬಲಿ' ಚಿತ್ರದಂತೆ 'ನಾಗರಹಾವು' ಚಿತ್ರದಲ್ಲಿ ಅರಮನೆ, ಜಲಪಾತ, ಯುದ್ಧ ಸನ್ನಿವೇಶಗಳ ಬದಲು ಪ್ರೇಕ್ಷಕರ ನಿರೀಕ್ಷೆಗೂ ಮೀರಿದ ಗ್ರಾಫಿಕ್ಸ್ ಇದ್ಯಂತೆ. ಅಂದ್ಹಾಗೆ, 'ನಾಗರಹಾವು' ಫ್ಯಾಂಟಸಿ ಥ್ರಿಲ್ಲರ್ ಸಿನಿಮಾ ಅನ್ನೋದು ನೆನಪಿರಲಿ. [ವಿಷ್ಣುದಾದಾ 201ನೇ ಚಿತ್ರದಲ್ಲಿ 120 ಅಡಿ ನಾಗಿಣಿಯಾದ ರಮ್ಯಾ]


ದೊಡ್ಡ ಅಚ್ಚರಿ, ಡಾ.ವಿಷ್ಣುವರ್ಧನ್.!

ಎಲ್ಲಕ್ಕಿಂತ ಹೆಚ್ಚಾಗಿ, 'ನಾಗರಹಾವು' ಚಿತ್ರದಲ್ಲಿ ಡಾ.ವಿಷ್ಣುವರ್ಧನ್ ರವರನ್ನ ಮರುಸೃಷ್ಟಿಸಲಾಗಿದೆ. 'ಬಾಹುಬಲಿ' ಚಿತ್ರದಲ್ಲಿ ಅಷ್ಟೇ ಯಾಕೆ, ಇಡೀ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಜೀವಂತ ಇಲ್ಲದ ನಟನಿಗೆ ತೆರೆಮೇಲೆ ಮರುಜನ್ಮ ನೀಡಿರುವ ಪ್ರಯತ್ನ ಇದುವರೆಗೂ ಆಗಿಲ್ಲ. ಆ ಮಟ್ಟಕ್ಕೆ 'ನಾಗರಹಾವು' ಚಿತ್ರ ಗ್ರೇಟ್.!


ಕ್ಲೈಮ್ಯಾಕ್ಸ್ ನಲ್ಲಿ ಡಾ.ವಿಷ್ಣುವರ್ಧನ್ ರವರದ್ದೇ ಅಬ್ಬರ

'ನಾಗರಹಾವು' ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಡಾ.ವಿಷ್ಣುವರ್ಧನ್ 10 ನಿಮಿಷಗಳ ಕಾಲ ತೆರೆಮೇಲೆ ಅಬ್ಬರಿಸಲಿದ್ದಾರೆ. 140 ಅಡಿ ಉದ್ದದ 'ನಾಗರಹಾವು' ರೂಪದಲ್ಲಿ ಡಾ.ವಿಷ್ಣುವರ್ಧನ್ ಮಿಂಚಲಿದ್ದಾರೆ. ಇಡೀ ವಿಶ್ವದಲ್ಲಿ ಇದು ಮೊಟ್ಟಮೊದಲ ಪ್ರಯತ್ನ.


ಕೋಟಿ-ಕೋಟಿ ಸುರಿಯಲಾಗಿದೆ.!

ಡಾ.ವಿಷ್ಣುವರ್ಧನ್ ರವರನ್ನ ತೆರೆಮೇಲೆ ಮರುಸೃಷ್ಟಿಸಲು ಸುಮಾರು 25 ಕೋಟಿ ಖರ್ಚು ಮಾಡಲಾಗಿದೆ. ['ನಾಗರಹಾವು' ಚಿತ್ರದ ಪ್ರಚಾರಕ್ಕೆ ಇಷ್ಟೊಂದು ಹಣವೇ.?!]


'ಬಾಹುಬಲಿ' ಚಿತ್ರದಲ್ಲಿ ಹೀಗೆ ಇಲ್ಲ.!

'ಬಾಹುಬಲಿ' ಸಿನಿಮಾದಲ್ಲಿ ಐತಿಹಾಸಿಕ ಕಥೆ ಇದೆ. ಎಲ್ಲಾ ಪಾತ್ರಗಳಿಗೆ ಜೀವಂತ ನಟರೇ ಜೀವ ತುಂಬಿದ್ದಾರೆ. ಆಗಲೇ ಹೇಳಿದಂತೆ, ಕೇವಲ ಅರಮನೆ, ಜಲಪಾತ ಸೇರಿದಂತೆ ಕಣ್ಣು ಕೋರೈಸುವ ಸುಂದರ ತಾಣಗಳನ್ನ ಹಾಗೂ ಯುದ್ಧ ಸನ್ನಿವೇಶಗಳಿಗೆ ಮಾತ್ರ ಗ್ರಾಫಿಕ್ಸ್ ಬಳಕೆ ಮಾಡಲಾಗಿದೆ. ಹೀಗಾಗಿ, 'ನಾಗರಹಾವು' ಸಿನಿಮಾ 'ಬಾಹುಬಲಿ'ಗಿಂತ ಒಂದು ಕೈ ಮೇಲು ಎನ್ನಬಹುದು.


ರಾಜಮೌಳಿ ಕೈಯಲ್ಲಿ ಆಗದ್ದನ್ನ ಕೋಡಿ ರಾಮಕೃಷ್ಣ ಮಾಡಿದ್ದಾರೆ.!

ಕಣ್ಮರೆಯಾಗಿರುವ ನಟರನ್ನ ಎಸ್.ಎಸ್.ರಾಜಮೌಳಿ ತೆರೆಮೇಲೆ ತಂದಿಲ್ಲ. ಆದ್ರೆ, ಆ ಕೆಲಸವನ್ನು ನಿರ್ದೇಶಕ ಕೋಡಿ ರಾಮಕೃಷ್ಣ ಮಾಡಿದ್ದಾರೆ.


ಮಕುಟ ವಿ.ಎಫ್.ಎಕ್ಸ್ ಗೆ ಧನ್ಯವಾದ.!

'ಬಾಹುಬಲಿ' ಚಿತ್ರದಲ್ಲಿ ಗ್ರಾಫಿಕ್ಸ್ ಕೈಚಳಕ ತೋರಿದ ಮಕುಟ ವಿ.ಎಫ್.ಎಕ್ಸ್ ಸಂಸ್ಥೆ 'ನಾಗರಹಾವು' ಚಿತ್ರಕ್ಕೂ ಸತತ ಎರಡು ವರ್ಷಗಳಿಂದ ಕಷ್ಟ ಪಟ್ಟಿದೆ. ಹೀಗಾಗಿ, 'ನಾಗರಹಾವು' ಚಿತ್ರದ ಬಗ್ಗೆ ಹೆಚ್ಚು ನಿರೀಕ್ಷಿಸಬಹುದು. [ಬುಸುಗುಡುವ 'ನಾಗರಹಾವು' ಟೀಸರ್ ಸೂಪರ್ರೋ ಸೂಪರ್.!]


ಟೀಸರ್ ಮಿಸ್ ಮಾಡಿಲ್ಲ ಅಲ್ವಾ.?

ಮೊನ್ನೆಯಷ್ಟೇ ಬಿಡುಗಡೆ ಆದ 'ನಾಗರಹಾವು' ಚಿತ್ರದ ಟೀಸರ್ ನೀವು ಇನ್ನೂ ನೋಡಿಲ್ಲ ಅಂದ್ರೆ, ಲಿಂಕ್ ಇಲ್ಲಿದೆ ಕ್ಲಿಕ್ ಮಾಡಿ


English summary
For the First time in India, Late Legendary Actor Dr.Vishuvardhan's CGI version is created in Kannada Movie 'Nagarahavu'. For this reason, the movie producer feels 'Nagarahavu' is greater than 'Baahubali'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada