»   » 'ನಾಗರಹಾವು' ರಿಲೀಸ್: ಅಭಿಮಾನಿಗಳಿಂದ ಭರ್ಜರಿ ಸ್ವಾಗತ

'ನಾಗರಹಾವು' ರಿಲೀಸ್: ಅಭಿಮಾನಿಗಳಿಂದ ಭರ್ಜರಿ ಸ್ವಾಗತ

Posted By: ಭರತ್ ಕುಮಾರ್
Subscribe to Filmibeat Kannada

ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಹಾಗೂ ರಮ್ಯಾ ಅಭಿನಯದ 'ನಾಗರಹಾವು' ಚಿತ್ರ ಇಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಂಡಿದೆ. ಕನ್ನಡ, ತೆಲುಗು, ತಮಿಳು ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಸುಮಾರು 1100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನಾಗರಹಾವು ತೆರೆಕಂಡಿದೆ.

ಇಂದು ಮುಂಜಾನೆಯಿಂದಲೆ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲೂ ಮೊದಲ ಶೋ ಆರಂಭವಾಗಿದ್ದು, ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಕೆ.ಜಿ ರಸ್ತೆಯಲ್ಲಿರುವ ಪ್ರಮುಖ ಚಿತ್ರಮಂದಿರ ಭೂಮಿಕಾ ಸೇರಿದಂತೆ ಎಲ್ಲಾ ಕಡೆ ಬೆಳಗ್ಗೆ 6 ಹಾಗೂ 7 ಗಂಟೆಯಿಂದ ನಾಗರಹಾವು ದರ್ಶನವಾಗಿದೆ.[ಅಬ್ಬಬ್ಬಾ.. 'ನಾಗರಹಾವು' ಟಿಕೆಟ್ ಗಾಗಿ ರಶ್ಯೋ ರಶ್ಯು!]


ಇಂದು ಸಿನಿಮಾ ಬಿಡುಗಡೆ ಹಿನ್ನಲೆ ಚಿತ್ರಮಂದಿರಗಳು ವಿಷ್ಣುದಾದಾ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಟೌಟ್ ಗಳಿಂದ ಶೃಂಗಾರಗೊಂಡಿದೆ. ಹಾಗಾದ್ರೆ, ಬನ್ನಿ ನಾಗರಹಾವು ಚಿತ್ರದ ಒಪನಿಂಗ್ ಶೋ ಹೇಗಿತ್ತು ಅಂತಾ ನೋಡೋಣ.


ನಾಗರಹಾವುಗೆ ಭರ್ಜರಿ ಒಪನಿಂಗ್

ಮೆಜೆಸ್ಟಿಕ್ ನ ಭೂಮಿಕಾ ಚಿತ್ರಮಂದಿರದಲ್ಲಿ ಬೆಳಗ್ಗೆ 7 ಗಂಟೆಗೆ ಮೊದಲ ಶೋ ಆರಂಭವಾಗಿದ್ದು, ಹೌಸ್ ಪುಲ್ ಪ್ರದರ್ಶನ ಕಾಣ್ತಿದೆ. ತೆರೆಮೇಲೆ ವಿಷ್ಣುವರ್ಧನ್ ಅವರನ್ನ ನೋಡಲು ವಿಷ್ಣು ಅಭಿಮಾನಿಗಳು ಜಾತ್ರೆಯಂತೆ ನೆರೆದಿದ್ದಾರೆ.


ವಿಷ್ಣುದಾದಾ ಕಟೌಟ್ ಆಕರ್ಷಣೆ

ಭೂಮಿಕಾ ಚಿತ್ರಮಂದಿರದ ಎದುರು ಡಾ.ವಿಷ್ಣುವರ್ಧನ್ ಅವರ ದೊಡ್ಡ ಕಟೌಟ್ ನಿಲ್ಲಿಸಲಾಗಿದೆ. ಸಿನಿಮಾ ನೋಡಲು ಹೋದ ಪ್ರೇಕ್ಷಕರಿಗೆ ಆ ಕಟೌಟ್ ಪ್ರಮುಖ ಆಕರ್ಷಣೆಯಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಟೌಟ್ ಗೆ ಹೂವಿನ ಹಾರಗಳನ್ನ ಹಾಕಲಾಗಿದೆ. ಸಾಹಸ ಸಿಂಹ ಅಭಿನಯದ 'ಖೈದಿ' ಚಿತ್ರದ ನಂತರ ನಾಗರಹಾವು ಚಿತ್ರಕ್ಕೆ ಈ ಮಟ್ಟದ ಹಾರ ಹಾಕಿರುವುದು ಎನ್ನಲಾಗುತ್ತಿದೆ


ದಾದಾಗೆ ಚಾಲೆಂಜಿಂಗ್ ಸ್ಟಾರ್ ಸಾಥ್

ವಿಷ್ಣುವರ್ಧನ್ ಅವರ ಪಕ್ಕದಲ್ಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಟೌಟ್ ಕೂಡ ನಿಲ್ಲಿಸಲಾಗಿದೆ. ನಾಗರಹಾವು ಚಿತ್ರದ ಸ್ಪೆಷಲ್ ಸಾಂಗ್ ಗೆ ದರ್ಶನ ಹೆಜ್ಜೆ ಹಾಕಿದ್ದು, ದಾಸನ ಅಭಿಮಾನಿಗಳು ಕೂಡ ನಾಗರಹಾವು ಸಿನಿಮಾ ನೋಡುವುದಕ್ಕೆ ಮುಗಿಬಿದ್ದಿದ್ದಾರೆ.


ಮೊದಲ ವಾರದ ಟಿಕೆಟ್ ಸೋಲ್ಡ್ ಔಟ್

ನಾಗರಹಾವು ಚಿತ್ರದ ವಿಶೇಷವಾಗಿ ಭೂಮಿಕಾ ಚಿತ್ರದಲ್ಲಿ ದಿನಕ್ಕೆ 5 ಶೋಗಳು ಪ್ರದರ್ಶನವಾಗುತ್ತಿದೆ. ಕಳೆದ ಒಂದು ವಾರದಿಂದ ಟಿಕೆಟ್ ವಿತರಿಸಿದ್ದು, ಈಗಾಗಲೆ ಮೊದಲ ವಾರದ ಟಿಕೆಟ್ ಸೋಲ್ಡ್ ಔಟ್ ಆಗಿದೆ.


ಲಕ್ಷ್ಮಿ ಚಿತ್ರಮಂದಿರದಲ್ಲಿ ನಾಗರಹಾವು

ಕೇವಲ ಭೂಮಿಕಾ ಚಿತ್ರಮಂದಿರದ ಬಳಿ ಮಾತ್ರವಲ್ಲ ನಾಗರಹಾವು ಚಿತ್ರ ಬಿಡುಗಡೆಯಾಗಿರುವ ಎಲ್ಲಾ ಚಿತ್ರಮಂದಿರಗಳಲ್ಲು ಇವತ್ತು ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ತಾವರೆಕೆರೆಯ ಲಕ್ಷ್ಮಿ ಚಿತ್ರಮಂದಿರದಲ್ಲಿ ಬೆಳಗ್ಗೆ 6 ಗಂಟೆಗೆ ಚಿತ್ರದ ಮೊದಲ ಪ್ರದರ್ಶನ ಆರಂಭವಾಗಿದೆ.


'ಅನುಪಮಾ' ಥಿಯೇಟರ್ ನಲ್ಲಿ ನಾಗರಹಾವು

ಬೆಂಗಳೂರಿನ ಅನುಪಮಾ ಚಿತ್ರಮಂದಿರದಲ್ಲೂ ನಾಗರಹಾವು ಚಿತ್ರಕ್ಕೆ ಭರ್ಜರಿ ಒಪನಿಂಗ್ ಸಿಕ್ಕಿದೆ. ಬೆಳಗ್ಗೆ 7 ಗಂಟೆಗೆ ಪ್ರದರ್ಶನ ಶುರುವಾಗಿದ್ದು, ವಿಷ್ಣು ಅಭಿಮಾನಿಗಳು ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ.


ಮಂಡ್ಯದಲ್ಲೂ ನಾಗರಹಾವು ಹಬ್ಬ

ಮಂಡ್ಯದಲ್ಲಿ 10.30ಕ್ಕೆ ನಾಗರಹಾವು ಚಿತ್ರದ ಮೊದಲ ಶೋ ಆರಂಭವಾಗುವುರಿಂದ ಅಭಿಮಾನಿಗಳು ಕಾಯುತ್ತಿದ್ದಾರೆ. ಚಿತ್ರಮಂದಿರದ ಸುತ್ತಾಮುತ್ತಾ ವಿಷ್ಣುವರ್ಧನ್ ಹಾಗೂ ದರ್ಶನ್ ಅವರ ಕಟೌಟ್ ಗಳು ಆವೃತವಾಗಿದ್ದು, ಅಲ್ಲಿಯೂ ನಾಗರಹಾವು ಸಂಭ್ರಮ ಜೋರಾಗಿದೆ.


ಶುಭ ಹಾರೈಸಿದ ದರ್ಶನ್

ನಾಗರಹಾವು ಬಿಡುಗಡೆ ಹಿನ್ನಲೆ ಚಾಲೆಂಜಿಂಗ್ ಸ್ಟಾರ್ ಚಿತ್ರತಂಡಕ್ಕೆ ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ. 'ವಿಷ್ಣು ಸರ್ ಅವರ ನಾಗರಹಾವು ಚಿತ್ರಕ್ಕೆ ಒಳ್ಳೆಯದಾಗಲಿ. ನಿರ್ಮಾಪಕರ ಪ್ರಮಾಣಿಕತೆಗೆ ಧನ್ಯವಾದಗಳು. ವಿಷ್ಣು ಸರ್ ಅವರನ್ನ ಮತ್ತೆ ಪರೆದೆ ಮೇಲೆ ನೋಡುವುದಕ್ಕೆ ನಾನು ಕುತೂಹಲದಿಂದ ಕಾಯುತ್ತಿದ್ದೆನೆ.'-ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.


ಕಿಚ್ಚನ 'ಆಲ್ ದಿ ಬೆಸ್ಟ್'

ನಾಗರಹಾವು ಚಿತ್ರತಂಡಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಟ್ವೀಟ್ ಮೂಲಕ ವಿಶ್ ಮಾಡಿದ್ದಾರೆ.' ನಾಗರಹಾವು ತಂಡಕ್ಕೆ ಒಳ್ಳೆಯದಾಗಲಿ. ವಿಷ್ಣುವರ್ಧನ್ ಸರ್ ಅವರನ್ನ ಮತ್ತೆ ಬೆಳ್ಳಿಪರದೆಯಲ್ಲಿ ನೋಡುವುದು ಅವರ ಅಭಿಮಾನಿಗಳಿಗೆ ಹಬ್ಬವಾಗಲಿದೆ.' ಎಂದು ಕಿಚ್ಚ ಸುದೀಪ್ ಶುಭ ಹಾರೈಸಿದ್ದಾರೆ.


English summary
Kannada movie 'Nagarahavu' has hit the screens today (october 14). kiccha sudeep and challenging star darshan wish to nagarahavu film. Kannada Actress Ramya, Dr Vishnuvardhan and Actor Diganth in the lead role. The movie is directed by Kodi Ramakrishna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada