For Quick Alerts
  ALLOW NOTIFICATIONS  
  For Daily Alerts

  ಇಂದು 'ನಾಗರಹಾವು' ಟೀಸರ್ ರಿಲೀಸ್ ವಿಶೇಷ ಏನು?

  By Suneetha
  |

  ಡಾ.ವಿಷ್ಣುವರ್ಧನ್, ನಟಿ ರಮ್ಯಾ ಮತ್ತು ದೂದ್ ಪೇಡಾ ದಿಗಂತ್ ಅವರು ಒಂದಾಗಿ ಕಾಣಿಸಿಕೊಳ್ಳುತ್ತಿರುವ 'ನಾಗರಹಾವು' ಸಿನಿಮಾ ಇಡೀ ಗಾಂಧಿನಗರದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ.

  ಅಂದಹಾಗೆ ತೆಲುಗು ಚಿತ್ರ 'ಅರುಂಧತಿ' ಖ್ಯಾತಿಯ ನಿರ್ದೇಶಕ ಕೋಡಿ ರಾಮಕೃಷ್ಣ ಅವರು ನಿರ್ದೇಶನ ಮಾಡಿರುವ 'ನಾಗರಹಾವು' ಚಿತ್ರದ ಟೀಸರ್ ಇಂದು (ಮೇ 30) ಬಿಡುಗಡೆಗೊಳ್ಳಲಿದ್ದು, ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ 'ಭೂಮಿಕ' ಚಿತ್ರಮಂದಿರದಲ್ಲಿ ಟೀಸರ್ ಬಿಡುಗಡೆ ಕಾರ್ಯಕ್ರಮ ಜರುಗಲಿದೆ.[ಅಭಿಮಾನಿಗಳಿಗೆ ಅಚ್ಚರಿ: 'ನಾಗರಹಾವಿನ' ಹೆಡೆ ಮುಂದೆ ನಟಿ ರಮ್ಯಾ.!]

  ಸದ್ಯಕ್ಕೆ 'ಭೂಮಿಕಾ' ಚಿತ್ರಮಂದಿರದಲ್ಲಿ 'ಲೂಸಿಯಾ' ಚಿತ್ರದ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಅವರ 'ಯು-ಟರ್ನ್' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಪವನ್ ಕುಮಾರ್ ಅವರ ಅನುಮತಿ ಪಡೆದಿರುವ 'ನಾಗರಹಾವು' ಚಿತ್ರತಂಡ ಇಂದು (ಮೇ 30) ರಾತ್ರಿ 7.30ಕ್ಕೆ ಟೀಸರ್ ಬಿಡುಗಡೆ ಮಾಡಲಿದ್ದಾರೆ.

  ಸಂಜೆ 7.30ರ 'ಯು-ಟರ್ನ್' ಚಿತ್ರ ಪ್ರದರ್ಶನವನ್ನು ರದ್ದುಗೊಳಿಸಿ ಆ ಸಮಯದಲ್ಲಿ ಡಾ.ವಿಷ್ಣುದಾದಾ ಅವರ 201ನೇ ಸಿನಿಮಾ 'ನಾಗರಹಾವು' ಚಿತ್ರದ ಟೀಸರ್ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ.[ವಿಷ್ಣುದಾದಾ 201ನೇ ಚಿತ್ರದಲ್ಲಿ 120 ಅಡಿ ನಾಗಿಣಿಯಾದ ರಮ್ಯಾ]

  ಇನ್ನು ಇಷ್ಟರವರೆಗೆ ಕನ್ನಡ ಚಿತ್ರರಂಗದಲ್ಲಿ ಯಾರೂ ಮಾಡದಂತೆ ವಿಶೇಷವಾಗಿ 'ನಾಹರಹಾವು' ಚಿತ್ರದ ಟೀಸರ್ ಬಿಡುಗಡೆ ಮಾಡುತ್ತಿರುವ ಚಿತ್ರತಂಡದವರು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಕಾರ್ಯಕ್ರಮಗಳ ಲಿಸ್ಟ್ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

  ಬೆಳಗ್ಗೆಯಿಂದಲೇ ಕಾರ್ಯಕ್ರಮ ಶುರು

  ಬೆಳಗ್ಗೆಯಿಂದಲೇ ಕಾರ್ಯಕ್ರಮ ಶುರು

  ಮೇ 30, ಸೋಮವಾರದಂದು ಬೆಳಗ್ಗೆ 11 ಘಂಟೆಯಿಂದ ಕಾರ್ಯಕ್ರಮಗಳು ಶುರುವಾಗಲಿದ್ದು, ಬೆಳಗ್ಗೆ 11 ಘಂಟೆಗೆ ಭೂಮಿಕಾ ಚಿತ್ರಮಂದಿರದ ಎದುರು ಇರುವ 50 ಫೀಟ್ ಎತ್ತರ ಇರುವ ವಿಷ್ಣುವರ್ಧನ್ ಅವರ ಬೃಹತ್ ಕಟೌಟ್ ಗೆ ಹಾಲಿನ ಅಭಿಷೇಕ ಜರುಗಲಿದೆ. (ಚಿತ್ರಕೃಪೆ:ಫೇಸ್ ಬುಕ್)[ವಿಷ್ಣುರ 'ನಾಗರಹಾವು' ಬಗ್ಗೆ ಯಶ್ ಆಡಿದ ಚಿನ್ನದ ಮಾತುಗಳು]

  ಬೃಹತ್ ಮೆರವಣಿಗೆ

  ಬೃಹತ್ ಮೆರವಣಿಗೆ

  ಸಂಜೆ 4 ಘಂಟೆಗೆ ಬೆಂಗಳೂರಿನ ಆನಂದ್ ರಾವ್ ವೃತ್ತದಿಂದ ಭೂಮಿಕಾ ಚಿತ್ರಮಂದಿರದವರೆಗೆ ಅಭಿಮಾನಿಗಳ ಬೃಹತ್ ಮೆರವಣಿಗೆ ನಡೆಯಲಿದೆ. ಮೆರವಣಿಗೆಯ ಸಂದರ್ಭದಲ್ಲಿ ಬೆಳ್ಳಿ ರಥದಲ್ಲಿ ವಿಷ್ಣು ಅವರ ಬೃಹತ್ ಬ್ಯಾನರ್ ಹೊತ್ತು ಮೆರವಣಿಗೆ ಸಾಗಲಿದೆ. ಜೊತೆಗೆ ಈ ಬೃಹತ್ ಮೆರವಣಿಗೆಯಲ್ಲಿ ವಿಷ್ಣು ಅವರ ಬ್ಯಾನರ್ ಹೊತ್ತ ಸುಮಾರು 200 ಆಟೋ ರಿಕ್ಷಾಗಳು ಪಾಲ್ಗೊಳ್ಳಲಿವೆ.

  ಪಟಾಕಿ ಸಂಭ್ರಮ

  ಪಟಾಕಿ ಸಂಭ್ರಮ

  ಸಂಜೆ 6.30 ರಿಂದ 7.30ರ ವರೆಗೆ ಭೂಮಿಕಾ ಚಿತ್ರಮಂದಿರದ ಎದುರು ವಿಷ್ಣು ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಹಬ್ಬದ ವಾತಾವರಣ ಸೃಷ್ಟಿ ಮಾಡಲಿದ್ದಾರೆ.

  7.30ಕ್ಕೆ ಟೀಸರ್ ಲೋಕಾರ್ಪಣೆ

  7.30ಕ್ಕೆ ಟೀಸರ್ ಲೋಕಾರ್ಪಣೆ

  ಸಂಜೆ 7.30ಕ್ಕೆ ಬಹುನಿರೀಕ್ಷಿತ 'ನಾಗರಹಾವು' ಚಿತ್ರದ ಟೀಸರ್ ಗಣ್ಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ರಾತ್ರಿ 8.30ಕ್ಕೆ ಸಿಹಿ ತಿಂಡಿ ಹಂಚುವಿಕೆ ಕಾರ್ಯಕ್ರಮ ಜರುಗಲಿದೆ.

  ಗಣ್ಯರ ದಂಡೇ ಇರುತ್ತದೆ

  ಗಣ್ಯರ ದಂಡೇ ಇರುತ್ತದೆ

  ಈ ವಿಶೇಷ ಕಾರ್ಯಕ್ರಮದಲ್ಲಿ ವಿಷ್ಣುವರ್ಧನ್ ಅವರ ಇಡೀ ಕುಟುಂಬ ವರ್ಗದವರು ಭಾಗವಹಿಸಲಿದ್ದು, ನಟಿ ರಮ್ಯಾ ಅವರು ಕೂಡ ಭಾಗವಹಿಸಲಿದ್ದಾರೆ. ವಿಶೇಷವಾಗಿ ವಿಷ್ಣು ಅವರ ಎಲ್ಲಾ ಅಭಿಮಾನಿಗಳು ಹಾಗೂ ಸಾರ್ವಜನಿಕರು ಕೂಡ ಈ ಸಂಭ್ರಮದ ಸಮಾರಂಭದಲ್ಲಿ ಭಾಗವಹಿಸಲು ಅವಕಾಶ ಇದೆ.

  ಲೈವ್ ಆಗಿ ನೋಡಿ

  ಲೈವ್ ಆಗಿ ನೋಡಿ

  ಅತ್ಯಂತ ಅದ್ದೂರಿಯಾಗಿ ನೆರವೇರಲಿರುವ ಈ ಕಾರ್ಯಕ್ರಮವನ್ನು ನೀವು ಕೂತಲ್ಲಿಯೇ ಲೈವ್ ಆಗಿ ನೋಡುವ ಅವಕಾಶ ಇದ್ದು, ಲೈವ್ ಶೋ ನೋಡಲು ಈ ಟ್ಯೂಬ್ ಲಿಂಕ್ ಕ್ಲಿಕ್ ಮಾಡಿ...

  English summary
  Kannada Actress Ramya, Kannada Actor Diganth, Actor Dr Vishnuvardhan starrer Kannada movie 'Nagarahavu' teaser launch Today (May 30) at Bhumika theater KG road Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X