For Quick Alerts
  ALLOW NOTIFICATIONS  
  For Daily Alerts

  'ನಾಗರಹಾವು' ಚಿತ್ರದ ಬಿಡುಗಡೆ ದಿನಾಂಕ ಯಾವಾಗ.?

  By Harshitha
  |

  ಡಾ.ವಿಷ್ಣುವರ್ಧನ್ ನಮ್ಮೊಂದಿಗೆ ಇಲ್ಲದಿದ್ದರೂ, ಗ್ರಾಫಿಕ್ಸ್ ತಂತ್ರಜ್ಞಾನದ ಮುಖಾಂತರ ಅವರನ್ನ ತೆರೆಮೇಲೆ ಜೀವಂತವಾಗಿ ತಂದಿರುವ 'ನಾಗರಹಾವು' ಚಿತ್ರದ ಬಗ್ಗೆ ಎಲ್ಲರಿಗೂ ಸಹಜವಾಗಿ ಕುತೂಹಲ ಇದ್ದೇ ಇದೆ.

  ರಮ್ಯಾ, ದಿಗಂತ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ನಾಗರಹಾವು' ಚಿತ್ರದಲ್ಲಿ ಡಾ.ವಿಷ್ಣುವರ್ಧನ್ 'ನಾಗರಹಾವು' ಪಾತ್ರದಲ್ಲಿ ಮಿಂಚಲಿದ್ದಾರೆ. ಐದು ವರ್ಷಗಳಿಂದ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಇರುವ ಈ ಸಿನಿಮಾ ಬಿಡುಗಡೆ ಯಾವಾಗ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. [ಡಾ.ವಿಷ್ಣುವರ್ಧನ್ ಹೆಸರಿಗೆ ಅಕ್ಷರಶಃ ಶೋಭೆ ತರುವ ಕೆಲಸ ಇದು.!]

  ಡಾ.ವಿಷ್ಣುವರ್ಧನ್ ರವರ ಹುಟ್ಟುಹಬ್ಬ, ಅಂದ್ರೆ ಸೆಪ್ಟೆಂಬರ್ 18 ರ ಹಿಂದು-ಮುಂದು 'ನಾಗರಹಾವು' ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕ ಸಾಜಿದ್ ಖುರೇಶಿ ನಿರ್ಧರಿಸಿದ್ದಾರೆ. [ಬುಸುಗುಡುವ 'ನಾಗರಹಾವು' ಟೀಸರ್ ಸೂಪರ್ರೋ ಸೂಪರ್.!]

  ಹಾಗ್ನೋಡಿದ್ರೆ, 'ನಾಗರಹಾವು' ಚಿತ್ರದ ಗ್ರಾಫಿಕ್ಸ್ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಸೆಪ್ಟೆಂಬರ್ ಮೊದಲ ವಾರದ ಒಳಗೆ ವಿ.ಎಫ್.ಎಕ್ಸ್ ಕೆಲಸ ಸಂಪೂರ್ಣವಾಗಲಿದ್ದು, ಅದರ ಬೆನ್ನಲ್ಲೇ ಸೆನ್ಸಾರ್ ಆದರೆ, ಸೆಪ್ಟೆಂಬರ್ 18 ಆಸುಪಾಸಿನಲ್ಲಿ 'ನಾಗರಹಾವು' ಬಿಡುಗಡೆ ಆಗುವುದು ಪಕ್ಕಾ ಎನ್ನುತ್ತಾರೆ ಸಾಜಿದ್ ಖುರೇಶಿ.

  ಎಲ್ಲವೂ ಪ್ಲಾನ್ ಪ್ರಕಾರ ನಡೆದಿದ್ದೇ ಆದರೆ, ವಿಷ್ಣು ರವರ ಜನ್ಮದಿನೋತ್ಸವದಂದೇ ಅವರ ಅಭಿಮಾನಿಗಳಿಗೆ ಡಬಲ್ ಧಮಾಕಾ.!

  English summary
  Producer Sajid Qureshi have plans to release Kannada Movie 'Nagarahavu' on Dr.Vishnuvardhan's Birthday (September 18th) this year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X