»   » 'ನಮಸ್ತೇ ಮೇಡಂ' ಸಖತ್ ಹಾಟ್, ಸೂಪರ್ ಕಾಮಿಡಿ

'ನಮಸ್ತೇ ಮೇಡಂ' ಸಖತ್ ಹಾಟ್, ಸೂಪರ್ ಕಾಮಿಡಿ

By: ಜೀವನರಸಿಕ
Subscribe to Filmibeat Kannada

ರೀಮೇಕ್ ಸಿನಿಮಾ ಒಂದನ್ನ ಅದು ಹಿಟ್ಟಾದ ಮುಂದಿನ ವರ್ಷ ಅಥವಾ ಎರಡು ವರ್ಷಗಳೊಳಗೆ ಮತ್ತೊಂದು ಭಾಷೆಗೆ ರೀಮೇಕ್ ಮಾಡೋದು ಸಹಜ. ಆದರೆ ಒಂದು ವರ್ಷ ತೆರೆಗೆ ಬಂದು ಹತ್ತು ವರ್ಷದ ನಂತರ ರೀಮೇಕಾಗುತ್ತೆ ಅಂದ್ರೆ ಆ ಚಿತ್ರದ ಶಕ್ತಿ ಅಂತಾದ್ದು.

ಹೌದು ಕನ್ನಡದಲ್ಲಿ ರಿಲೀಸ್ ಗೆ ರೆಡಿಯಾಗಿರೋ (ಅಕ್ಟೋಬರ್ 24) 'ನಮಸ್ತೇ ಮೇಡಂ' ಚಿತ್ರ ತೆಲುಗಿನ 'ಮಿಸ್ಸಮ್ಮ' ಚಿತ್ರದ ರೀಮೇಕ್. 2003ರಲ್ಲಿ ಬಂದಿದ್ದ ತೆಲುಗಿನ 'ಮಿಸ್ಸಮ್ಮ' ರೋಮ್ಯಾಂಟಿಕ್ ಫ್ಯಾಮಿಲಿ ಕಾಮಿಡಿಯಾಗಿ ಕಿಕ್ ಕೊಟ್ಟ ಚಿತ್ರ.

ತೆಲುಗಿನಷ್ಟು ಹಾಟ್ ಹಾಟ್ ಚಿತ್ರವನ್ನ ಕನ್ನಡದ ಫ್ಯಾಮಿಲಿ ಪ್ರೇಕ್ಷಕರಿಗೆ ತಲುಪಿಸೋಕೆ ಕನ್ನಡ ಚಿತ್ರರಂಗ ಹತ್ತು ವರ್ಷ ತೆಗೆದುಕೊಂಡಿದೆ. ಯಾಕಂದ್ರೆ ಕನ್ನಡದ ಫ್ಯಾಮಿಲಿ ಪ್ರೇಕ್ಷಕ ಗ್ಲಾಮರನ್ನ ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲಾರ. ಈ ಗ್ಲಾಮರ್ ಧಮಾಕಾ ಸದ್ಯದಲ್ಲೇ ತೆರೆಗೆ ಬರುತ್ತೆ. ನಮಸ್ತೇ ಮೇಡಂ ಚಿತ್ರದ ರೋಮಾಂಚಕ ಸ್ಟಿಲ್ಸ್ ನೋಡ್ತಾ ಚಿತ್ರದ ವಿಶೇಷತೆಗಳನ್ನ ಸವಿಯೋಣ ಬನ್ನಿ.

ರಾಗಿಣಿ ಹಾಟ್ ಹಾಟ್ ಗ್ಲಾಮರ್

ಗ್ಲಾಮರ್ ಡಾಲ್ ರಾಗಿಣಿ ಸಖತ್ ಹಾಟ್ ಹಾಟ್ ಬ್ಯೂಟಿಯಾಗಿ ಮಿಂಚಿದ್ದಾರೆ. ನಮಸ್ತೇ ಮೇಡಂ ಪ್ರತಿ ಸೀನ್ ನಲ್ಲೂ ಗ್ಲಾಮರ್ ಹಬ್ಬ ಪಕ್ಕಾ.

ನಿಖಿಷಾ ಪಟೇಲ್ ಮಾದಕತೆ ಬೋನಸ್

ರಾಗಿಣಿ ಹಾಟ್ ಹಾಟ್ ಝಲಕ್ ಮಸ್ತ್ ಮಜಾ ಕೊಟ್ರೆ ರಾಗಿಣಿಗೆ ಸ್ಪರ್ಧಿಯಾಗಿ ಮಾದಕತೆಯಲ್ಲಿ ಮೋಡಿ ಮಾಡೋದು ನಿಖಿಷಾ ಪಟೇಲ್.

ಕಿಟ್ಟಿ ಪರದಾಡೋ ಪಾತ್ರ ಕಾಮಿಡಿ ಕಿಕ್

ಕಿಟ್ಟಿ ಮೊದಲ ಬಾರಿಗೆ ಪರದಾಡೋ ಪಾಪಿ ಗಂಡನ ಪಾತ್ರ ಮಾಡಿದ್ದಾರೆ. ಫ್ಯಾಮಿಲಿ ಪ್ರೇಕ್ಷಕರಿಗಂತೂ ಚಿತ್ರ ತಮ್ಮ ಲೈಫನ್ನು ನೆನಪಿಸೋದು ಗ್ಯಾರಂಟಿ.

ರಾಗಿಣಿ ಸಖತ್ ಸ್ಟೆಪ್ಸ್

ರಾಗಿಣಿ ಸಿಂಗಲ್ ಡಾನ್ಸ್ ಪಡ್ಡೆಗಳ ಕಣ್ಣಲ್ಲಿ ಮಿಂಚು ಮೂಡಿಸ್ತಿದೆ. ರಸಿಕ ಚಿತ್ರಪ್ರೇಮಿಗಳ ಎದೆಬಡಿತ ಹೆಚ್ಚಿಸಿರೋ ರಾಗಿಣಿ ನಿಖಿಷಾರನ್ನ ನೋಡೋಕೇ ಚಿತ್ರರಸಿಕರು ಬರೋದ್ರಲ್ಲಿ ಅನುಮಾನವಿಲ್ಲ.

ಕನ್ನಡ ಪ್ರೇಕ್ಷಕರಿಗೆ ಓವರ್ ಹಾಟಾ?

ಕನ್ನಡದ ಫ್ಯಾಮಿಲಿ ಚಿತ್ರಪ್ರೇಮಿಗಳು ಓವರ್ ಎಕ್ಸ್ ಪೋಸ್ ಚಿತ್ರಗಳನ್ನ ಅಷ್ಟಾಗಿ ಇಷ್ಟಪಡಲ್ಲ. ಇದು ಚಿತ್ರತಂಡಕ್ಕಿರೋ ಒಂದು ಸಣ್ಣ ಭಯ ಅನ್ನಿಸುತ್ತೆ.

ಪಡ್ಡೆಗಳು ಎದೆಪರಚಿಕೊಳ್ಳೋ ಚಿತ್ರ

ಫ್ಯಾಮಿಲಿ ಪ್ರೇಕ್ಷಕರಿಗೆ ಇಷ್ಟವಾಗುತ್ತೋ ಬಿಡುತ್ತೋ. ಆದ್ರೆ ಬಿ, ಸಿ ಸೆಂಟರ್ಗಳಲ್ಲಿ ಗಾಂಧಿ ಕ್ಲಾಸ್ ಪ್ರೇಕ್ಷಕರಿಗೆ ಚಿತ್ರ ಹುಚ್ಚೆಬ್ಬಿಸೋದು ಕನ್ಫರ್ಮ್.

English summary
Actress Ragini Dwivedi and Diamond Star Srinagara Kitty lead Kannada movie 'Namaste Madam' highlights. It is a remake of the Telugu hit Misamma. In the film, Ragini plays Kitty's boss who 'mentally' tortures him to get him to marry her. Kitty, though, is already married. Nikesha Patel plays his wife.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada