»   » 'ನನ್ನ ನಿನ್ನ ಪ್ರೇಮಕಥೆ'ಗೆ ಪ್ರೇಮ ಪತ್ರ ಬರೆಯಿರಿ ಲಕ್ಷ ಬಹುಮಾನ ಗೆಲ್ಲಿ

'ನನ್ನ ನಿನ್ನ ಪ್ರೇಮಕಥೆ'ಗೆ ಪ್ರೇಮ ಪತ್ರ ಬರೆಯಿರಿ ಲಕ್ಷ ಬಹುಮಾನ ಗೆಲ್ಲಿ

Posted By:
Subscribe to Filmibeat Kannada

ಎ.ಬಿ ಸಿನಿಮಾ ಕ್ರಿಯೇಷನ್ಸ್ ಲಾಂಚನದಡಿಯಲ್ಲಿ ಮೂಡಿಬರುತ್ತಿರುವ, ನಿರ್ಮಾಪಕ ಆನಂದಣ್ಣ ಸಿ.ನ್ಯಾಮಗೌಡ ನಿರ್ಮಾಣ ಮಾಡುತ್ತಿರುವ ಚೊಚ್ಚಲ ಸಿನಿಮಾ 'ನನ್ನ ನಿನ್ನ ಪ್ರೇಮಕಥೆ' ಚಿತ್ರ ಯಾವುದೇ ಸದ್ದು-ಗದ್ದಲವಿಲ್ಲದೆ ಚಿತ್ರೀಕರಣ ಸಂಪೂರ್ಣಗೊಳಿಸಿದೆ.

ಸುಮಾರು 3 ವರ್ಷಗಳ ಬಳಿಕ ಮತ್ತೆ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಆಗಮಿಸಿರುವ ನಟಿ ನಿಧಿ ಸುಬ್ಬಯ್ಯ ಅವರು ಇದೀಗ 'ನನ್ನ ನಿನ್ನ ಪ್ರೇಮಕಥೆ' ಚಿತ್ರದಲ್ಲಿ ನಟ ವಿಜಯ ರಾಘವೇಂದ್ರ ಅವರ ಜೊತೆ ಮಿಂಚುತ್ತಿದ್ದಾರೆ.[ಹೀರೋ ಆಯ್ತು ಇದೀಗ ವಿಲನ್ ಆಗ್ತಾರಂತೆ ವಿಜಯ ರಾಘವೇಂದ್ರ]

Kannada Movie 'Nanna Ninna Prema Kathe' shooting completed

ನಿರ್ದೇಶಕ ಶಿವು ಜಮಖಂಡಿ ಅವರು ನಿರ್ದೇಶನ ಮಾಡಿರುವ 'ನನ್ನ ನಿನ್ನ ಪ್ರೇಮಕಥೆ' ಚಿತ್ರವು ಒಂದು ವಿಶಿಷ್ಟ ಕಾರ್ಯವನ್ನು ಹಮ್ಮಿಕೊಂಡಿದೆ. ಅದೇನಪ್ಪಾ ಅಂದ್ರೆ ಚಿತ್ರದ ನಿರ್ಮಾಪಕರು ಪ್ರೇಕ್ಷಕರಿಗೆ ಎರಡು ಸ್ಪರ್ಧೆಗಳಲ್ಲಿ ಭಾಗವಹಿಸಿಲು ಆಹ್ವಾನ ನೀಡಿದ್ದಾರೆ.

ಹೌದು ಮೊದಲನೆಯದಾಗಿ ಅತ್ಯುತ್ತಮ ಪ್ರೇಮ ಕಥೆ ಬರೆದವರಿಗೆ ನಗದು ಬಹುಮಾನ ರೂಪಾಯಿ 25 ಸಾವಿರ. ಹಾಗೂ 'ನನ್ನ ನಿನ್ನ ಪ್ರೇಮಕಥೆ' ಚಿತ್ರದ ಸಾಹಿತ್ಯಕ್ಕೆ ಅವರದೇ ಶೈಲಿಯಲ್ಲಿ ಸಂಗೀತ ಸಂಯೋಜಿಸಿ ಗೆದ್ದವರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನವನ್ನು ಹುಬ್ಬಳ್ಳಿಯಲ್ಲಿ ಮೇ 21 ರಂದು ನಡೆಯುವ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ನೀಡಲಾಗುವುದು.

Kannada Movie 'Nanna Ninna Prema Kathe' shooting completed

ಹೆಚ್ಚಿನ ಮಾಹಿತಿಗಾಗಿ ಎ.ಬಿ ಕ್ರಿಯೇಷನ್ಸ್, ನಂ.919, ಎ.ಎನ್.ಕೆ. ಎನ್ ಕ್ಲೇವ್, ಭಾರತ್ ಪೆಟ್ರೋಲ್ ಬಂಕ್ ಹತ್ತಿರ, ಪಾಪರೆಡ್ಡಿಪಾಳ್ಯ, 5ನೇ ಅಡ್ಡರಸ್ತೆ, ನಾಗರಭಾವಿ 2ನೇ ಹಂತ, ಬೆಂಗಳೂರು-560072 ಅಥವಾ competition@nnpkcinema.com ಇಲ್ಲಿ ಸಂಪರ್ಕಿಸಬಹುದು.

ಚಿತ್ರದಲ್ಲಿ ನಟ ವಿಜಯ ರಾಘವೇಂದ್ರ, ನಟಿ ನಿಧಿ ಸುಬ್ಬಯ್ಯ ಸೇರಿದಂತೆ ಸುಧಾ ಬೆಳವಾಡಿ, ಚಿಕ್ಕಣ್ಣ, ರಚನಾ, ಗುರುರಾಜ್ ಹೊಸಕೋಟೆ, ಸಂಗೀತ ಮುಂತಾದವರಿದ್ದರೆ, ನಟ ತಿಲಕ್ ಶೇಖರ್ ಅವರು ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರೆ.

English summary
Kannada Movie 'Nanna Ninna Prema Kathe' shooting completed. Kannada Actor Vijay Raghavendra, Kannada Actress Nidhi Subbaiah in the lead role. The movie is directed by Shivu Jamkhandi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada