»   » ಸ್ಟಾರ್ ಗಳಾಗಿದ್ದರೂ ಗಾಡಿ ಬಿಟ್ಟು ಕಾಲ್ನಡಿಗೆಯಲ್ಲಿ ಸಾಗಿದ 'ಆ' ಘಟನೆಗಳಿವು.!

ಸ್ಟಾರ್ ಗಳಾಗಿದ್ದರೂ ಗಾಡಿ ಬಿಟ್ಟು ಕಾಲ್ನಡಿಗೆಯಲ್ಲಿ ಸಾಗಿದ 'ಆ' ಘಟನೆಗಳಿವು.!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ಒಂದು ತೆರೆಗೆ ಬರಲು ತಯಾರಾಗಿದೆ ಅಂದ್ರೆ, ಇಡೀ ಚಿತ್ರತಂಡ ಸೇರಿ ವಿಭಿನ್ನವಾಗಿ ಪ್ರೊಮೋಷನ್ ಮಾಡಲು ಶುರು ಮಾಡುತ್ತಾರೆ.

ಕಳೆದ ತಿಂಗಳು ತೆರೆಕಂಡ ವಿನಯ್ ರಾಜ್ ಕುಮಾರ್ ಅವರ 'ರನ್ ಆಂಟನಿ' ಚಿತ್ರಕ್ಕೆ '#ಐ ರನ್ ಅವೇ ಫ್ರಮಂ' ಎನ್ನುವ ಕಾನ್ಸೆಪ್ಟ್ ಇಟ್ಟುಕೊಂಡು ಚಿತ್ರತಂಡದವರು ಹಲವು ಸ್ಟಾರ್ ಗಳ ಮೂಲಕ ಭರ್ಜರಿ ಪ್ರೊಮೋಷನ್ ಮಾಡಿಸಿದರು.


ಜೊತೆಗೆ 'ನಾಗರಹಾವು' ಚಿತ್ರತಂಡದವರು ಡಾ.ವಿಷ್ಣು ಅವರ ಬೃಹತ್ 3D ಸ್ಟಾಂಡ್ ಪೋಸ್ಟರ್ ಬಳಿ ಸೆಲ್ಫಿ ಕ್ಲಿಕ್ಕಿಸುವಿಕೆ ಎಂಬ ವಿನೂತನ ಪ್ರಯೋಗ ಮಾಡಿ ಪ್ರೊಮೋಷನ್ ಮಾಡಿದರು.[ಜಗ್ಗೇಶ್, ಕಿಚ್ಚ, ಶಿವಣ್ಣಗೆ ಯಾರನ್ನ ಕಂಡ್ರೆ 'ಆಗಲ್ಲಾಂತ' ನಿಮಗ್ಗೊತ್ತಾ?]


ಇದೀಗ ವಿಭಿನ್ನ ಪ್ರೊಮೋಷನ್ ಗಳ ಸಾಲಿಗೆ ಹೊಸ ಸೇರ್ಪಡೆ ಪವನ್ ಒಡೆಯರ್ ನಿರ್ದೇಶನದ 'ನಟರಾಜ ಸರ್ವಿಸ್'. ಕಾಮಿಡಿ ಕಿಂಗ್ ಶರಣ್ ಮತ್ತು ನಟಿ ಮಯೂರಿ ಕಾಣಿಸಿಕೊಂಡಿರುವ 'ನಟರಾಜ ಸರ್ವಿಸ್' ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರತಂಡ ವಿಭಿನ್ನವಾಗಿ ಪ್ರೊಮೋಷನ್ ಮಾಡುತ್ತಿದೆ.


ಈಗಿನ ಜಮಾನದಲ್ಲಿ ಸಿನಿಮಾ ಪ್ರಚಾರಕ್ಕೆ ಸಾಮಾಜಿಕ ಜಾಲತಾಣಗಳೇ ಬಹು ಮುಖ್ಯವಾದ ಸಾಧನ. ಅದರಂತೆ 'ನಟರಾಜ ಸರ್ವಿಸ್' ಕೂಡ ಫೇಸ್ ಬುಕ್, ಟ್ವಿಟ್ಟರ್ ಮೊರೆ ಹೋಗಿದೆ.[ವಿಷ್ಣುದಾದಾ' ಜೊತೆ 'ಜಗ್ಗುದಾದಾ', ಗಣಿ, ಪ್ರೇಮ್ ಸೂಪರ್ ಸೆಲ್ಫಿ.!]


ಅಂದಹಾಗೆ ಜೀವನದಲ್ಲಿ ಒಂದಲ್ಲಾ ಒಂದು ಕಾರಣಕ್ಕೆ ಎಲ್ಲರೂ ನಟರಾಜ ಸರ್ವಿಸ್ (ಕಾಲ್ನಡಿಗೆಯಲ್ಲಿ ಸಾಗೋದು) ಮಾಡೇ ಇರುತ್ತಾರೆ. ಅದರಂತೆ ಕನ್ನಡ ಚಿತ್ರರಂಗದ ಸ್ಟಾರ್ ನಟರು ಯಾವಾಗ?, ಯಾವ ಸಂದರ್ಭದಲ್ಲಿ 'ನಟರಾಜ ಸರ್ವಿಸ್' ಮಾಡಿದ್ದಾರೆ ಅನ್ನೋದನ್ನ ಫೇಸ್ ಬುಕ್ಕ್ ನಲ್ಲಿ ಹೇಳಿಕೊಂಡಿದ್ದಾರೆ.


ಇದೀಗ ಸದ್ಯಕ್ಕೆ ನಟ ಪುನೀತ್ ರಾಜ್ ಕುಮಾರ್, ಅಕುಲ್ ಬಾಲಾಜಿ ಮತ್ತು ನಿರ್ದೇಶಕ ಪವನ್ ಒಡೆಯರ್, ರವಿಶಂಕರ್ ಅವರು ತಮ್ಮ 'ನಟರಾಜ ಸರ್ವಿಸ್' ಘಟನೆ ಬಗ್ಗೆ ಮಾತನಾಡಿದ್ದಾರೆ. ನೋಡಲು ಸ್ಲೈಡ್ಸ್ ಕ್ಲಿಕ್ ಮಾಡಿ....


ಪವನ್ ಒಡೆಯರ್

ನಿರ್ದೇಶಕ ಪವನ್ ಒಡೆಯರ್ ಅವರಿಗೆ 'ಗೋವಿಂದಾಯ ನಮಃ' ಸಿನಿಮಾ ಮಾಡುವ ಸಂದರ್ಭದಲ್ಲಿ ಚಿತ್ರಕ್ಕೆ ನಿರ್ಮಾಪಕರನ್ನು ಹುಡುಕುವಾಗ 'ನಟರಾಜ ಸರ್ವಿಸ್' (ಕಾಲ್ನಡಿಗೆಯಲ್ಲಿ) ಮಾಡಿದ್ದಾರಂತೆ.


ದುಡ್ಡಿಲ್ಲದೆ ಕಾಲ್ನಡಿಗೆಯಲ್ಲಿ ಸಾಗಿದ ಪವನ್

"ನನಗೆ ನಿರ್ಮಾಪಕ ಪ್ರಸಾದ್ ಅವರ ಪರಿಚಯವಾಗಿ, ಅವರನ್ನು ಭೇಟಿ ಮಾಡಲು ಓಡಾಡುತ್ತಿದ್ದೆ. ಕುಣಿಗಲ್ ನಿಂದ ಬೆಂಗಳೂರಿಗೆ ಬರುತ್ತಿದ್ದ ಸಂದರ್ಭದಲ್ಲಿ, ನಿರ್ಮಾಪಕರು ನನ್ನನ್ನು ಮೆಜೆಸ್ಟಿಕ್ ನಲ್ಲಿ ಭೇಟಿ ಮಾಡಲು ತಿಳಿಸಿದ್ದರು. ನಾನು ಭೇಟಿ ಮುಗಿಸಿ ವಾಪಸ್ ಹಿಂದಿರುಗಲು ನಿಶ್ಚಯ ಮಾಡಿದ್ದರಿಂದ, ಉಳಿದಿದ್ದ ದುಡ್ಡನ್ನೆಲ್ಲಾ ಊಟಕ್ಕೆ ವ್ಯಯಿಸಿದೆ. ಆದರೆ ನಿರ್ಮಾಪಕರು ಮತ್ತಿಕೆರೆಗೆ ಬರಲು ಹೇಳಿದರು. ಆದ್ದರಿಂದ ಅಲ್ಲಿಯವರೆಗೆ ನಡೆದೇ ಹೋಗಬೇಕಾಗಿ ಬಂತು" ಎಂದು ಕಾಲ್ನಡಿಗೆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.


ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

"ಹಾಯ್ ನಮಸ್ಕಾರ..ಜೀವನದಲ್ಲಿ ನಮ್ಮ ಹತ್ರ ಕಾರು, ಮೋಟಾರ್ ಬೈಕ್ ಎಲ್ಲಾ ತರದ ಸರ್ವಿಸ್ ಇದೆ. ಬಟ್ ಆದ್ರೂ ಒಂದಲ್ಲಾ ಒಂದಿನಾ 'ನಟರಾಜ ಸರ್ವಿಸ್' ಅನ್ನೋದು ಬಂದೇ ಬರುತ್ತೆ ನಮ್ಮ ಜೀವನದಲ್ಲಿ. ಅದು ನನಗೂ ಒಂದು ಬಾರಿ ಬಂದಿದೆ. ಇದರ ಬಗ್ಗೆ ಹೇಳಬೇಕು ಅಂದ್ರೆ, ಬೆಂಗಳೂರು ಏನಕ್ಕೆ ಫೇಮಸ್, ಒಳ್ಳೆ ಊಟ, ಒಳ್ಳೆ ವಾತಾವರಣ, ಒಳ್ಳೆ ದೃಶ್ಯಗಳು. ಅದರ ಜೊತೆ ಸಿಕ್ಕಾಪಟ್ಟೆ ಟ್ರಾಫಿಕ್".-ಪುನೀತ್


ಟ್ರಾಫಿಕ್ ನಲ್ಲಿ ಸಿಲುಕಿದ ಅಪ್ಪು

"ಸೋ ಒಂದು ಬಾರಿ ನನಗೆ ಯಾವುದೋ ರೋಡ್ ನಲ್ಲಿ ಬರಬೇಕಾದ್ರೆ, ಎಷ್ಟು ಕೆಟ್ಟ ಟ್ರಾಫಿಕ್ ನಲ್ಲಿ ಸಿಕ್ಕಿ ಹಾಕಿಕೊಂಡೆ ಅಂದ್ರೆ, ಆ ಕಡೆ, ಈ ಕಡೆ ಎಲ್ಲೂ ಮೂವ್ ಮಾಡೋಕೆ ಆಗಿಲ್ಲ. ಆವಾಗ ನಾನು ಮಾಡಿದ ಮೊದಲ ಕೆಲಸ ಏನಪ್ಪಾ ಅಂದ್ರೆ, ನನ್ನ ಡ್ರೈವರ್ ಕೈ ಹಿಡಿದು, ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಪ್ಪ, ನೀನು ಮೆತ್ತಗೆ ಟ್ರಾಫಿಕ್ ಕ್ಲೀಯರ್ ಆದ ಮೇಲೆ ಕಾರು ಮನೆಗೆ ತಗೊಂಡು ಬಾ ಅಂತ್ಹೇಳಿ, ಕಾಲಿಗೆ ಶೂ ಹಾಕ್ಕೊಂಡು, ಸುಮಾರು 6 ಕಿ.ಮೀ ಅಲ್ಲಿಂದ-ಇಲ್ಲಿಗೆ ನಡ್ಕೊಂಡು 'ನಟರಾಜ ಸರ್ವಿಸ್' ಮಾಡಿದ್ದೀನಿ. ಇದು ನನ್ನ 'ನಟರಾಜ ಸರ್ವಿಸ್' ಅನುಭವ. ಎಂದು ಪುನೀತ್ ಅವರು ತಮ್ಮ ಅನುಭವವನ್ನು ರಸವತ್ತಾಗಿ ಬಣ್ಣಿಸಿದ್ದಾರೆ.


ನಟ ಕಮ್ ನಿರೂಪಕ ಅಕುಲ್ ಬಾಲಾಜಿ

'ಹಾಯ್ ಹಲೋ ನಮಸ್ಕಾರ ವೀಕ್ಷಕರೆ, 'ನಟರಾಜ ಸರ್ವಿಸ್' ಅಂದಾಗ ನನಗೆ ನೆನಪಾಗೋದು, ನಾನು ಇಂಡಸ್ಟ್ರಿಗೆ ಹೆಜ್ಜೆ ಇಡಬೇಕು ಅನ್ಕೊಂಡಿದ್ದಾಗ, ಆ ಒದ್ದಾಟ ಒಂಥರಾ ಸೈಕಲ್ ಹೊಡಿಯೋ ಟೈಮ್. ಸೋ ನಾವು ನಡ್ಕೊಂಡು ಹೋಗೋವಂತಹ ಪರಿಸ್ಥಿತಿ ಬಂದಾಗ ನಾವು ನಟರಾಜ ಸರ್ವಿಸ್ ಅಂತೀವಿ". ಅಕುಲ್ ಬಾಲಾಜಿ.


ಸಾಕಷ್ಟು ಬಾರಿ 'ನಟರಾಜ ಸರ್ವಿಸ್'

"ನನ್ನ ಲೈಫಲ್ಲಿ 'ನಟರಾಜ ಸರ್ವಿಸ್' ಸಾಕಷ್ಟು ಬಾರಿ ಆಗಿದೆ. ಅದರಲ್ಲೂ ಒಂದು ವಿಶೇಷವಾದ ಘಟನೆಯನ್ನು ನಾನು ಹೇಳಲೇಬೇಕು. ನಾನು ಮಲ್ಟಿಮೀಡಿಯಾ ಮಾಡುವ ಸಂದರ್ಭದಲ್ಲಿ, ಮಲ್ಲೇಶ್ವರಂ 18 ಕ್ರಾಸ್ ನ ಇನ್ಸಿಟಿಟ್ಯೂಟ್ ನಿಂದ, 75 ಪೈಸೆ ಖರ್ಚು ಮಾಡಿದ್ರೆ, ಮಹಾಲಕ್ಷ್ಮಿ ಲೇಔಟ್ ಗೆ ಹೋಗ್ತೀವಿ. ಆದ್ರೆ ಆ ಸಂದರ್ಭದಲ್ಲಿ ನಾನು ನನ್ನ ಕಾಲನ್ನು ಬಳಸ್ತಾ ಇದ್ದೆ. ಯಾವಾಗಲೂ ನಡ್ಕೊಂಡು ಹೋಗ್ತಾ ಇದ್ದೆ. ಹೌದು ನಾವು ಯಾವಾಗಲೂ ನಟರಾಜ ಸರ್ವಿಸ್ ಗೆ ಕಾಯಲೇಬೇಕು. ಒಂದಲ್ಲಾ ಒಂದಿನಾ, ಟ್ರಾಫಿಕ್ ಇದ್ದಾಗ 'ನಟರಾಜ ಸರ್ವಿಸ್' ವರ್ಕ್ ಆಗುತ್ತೆ, ಆರೋಗ್ಯಕ್ಕೂ 'ನಟರಾಜ ಸರ್ವಿಸ್' ವರ್ಕ್ ಆಗುತ್ತೆ. ಸೋ ಇದು ನನ್ನ 'ನಟರಾಜ ಸರ್ವಿಸ್'. -ಅಕುಲ್ ಬಾಲಾಜಿ.


ನಟ ರವಿಶಂಕರ್

'ಪ್ರತಿಯೊಬ್ಬರ ಲೈಫಲ್ಲೂ 'ನಟರಾಜ ಸರ್ವಿಸ್' ಅನ್ನೋದು ಬಂದೇ ಬರುತ್ತೆ, ನಂ.1 ಶ್ರೀಮಂತ ಮನುಷ್ಯನೇ ಆಗಿರಲಿ, ಅವರಿಗೂ ಒಂದು ದಿನ 'ನಟರಾಜ ಸರ್ವಿಸ್' ಆಗಿರುತ್ತೆ. ಹಾಗೆ ನನ್ನ ಜೀವನದಲ್ಲೂ ಒಂದು ಘಟನೆ ನಡೆದಿತ್ತು, ನಾನು ನನ್ನ ಭಾವ ಇಬ್ಬರು, ನಮ್ಮ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗಿದ್ವಿ. ಆವಾಗಿನ ಕಾಲದಲ್ಲಿ ಬಸ್ ಟಿಕೆಟ್ ಎಲ್ಲಾ ಸೇರಿಸಿ ಒಬ್ಬರಿಗೆ 30 ರೂಪಾಯಿ ಇದ್ರೆ ಸಾಕು. ಎಲ್ಲಾ ಒಟ್ಟು ಸೇರಿ ನೂರು ರೂಪಾಯಿ ಇತ್ತು. ನಮ್ಮ ತಾಯಿ ನನಗೆ ಅಂತ 30 ರೂಪಾಯಿ ಕೊಟ್ಟಿದ್ರು, ಅದು ನನ್ನ ಕಿಸೆಯಲ್ಲಿ ಇತ್ತು'.-ರವಿಶಂಕರ್


ಇಬ್ಬರೂ ಗುಟ್ಟು ಬಿಟ್ಟುಕೊಟ್ಟಿಲ್ಲ

'ಅವರಿಗೂ ಅವರ ತಾಯಿ ಕೊಟ್ಟಿರುತ್ತಾರೆ, ಅವರ ಕಿಸೆಯಲ್ಲೂ ಇತ್ತು. ಇನ್ನು ನಮಗಿಬ್ಬರಿಗೆ ಗೊತ್ತಿದ್ದ 100 ರೂಪಾಯಿ ಖರ್ಚಾಗಿ ಹೋಯ್ತು. ಆವಾಗ ನಾವಿನ್ನು ಕೆಳಗಡೆ ಇದ್ವಿ, ತಿರುಪತಿ ಬೆಟ್ಟ ಹತ್ತಿರ್ಲಿಲ್ಲ. ಮೇಲೆ ಹೋಗ್ಬೇಕು ಅಂದ್ರೆ 3 ಕಿ.ಮೀ ನಡ್ಕೊಂಡು ಹೋಗಬೇಕು, ನಮ್ಮಿಬ್ಬರ ಕಿಸೆಯಲ್ಲಿ ಹೆಚ್ಚಿಗೆ ಹಣ ಇದೆ ಅಂತ ನಾವಿಬ್ಬರೂ ಹೇಳ್ತಾ ಇಲ್ಲ. ಇಬ್ಬರು ನಡ್ಕೊಂಡು ಹೋದ್ವಿ. ಆದರೆ ಕೊನೆಗೆ ಆಗಲಿಲ್ಲ, ಮತ್ತೆ ನಾನೇ ಹೇಳಿದೆ ನನ್ನ ಹತ್ತಿರ 30 ರೂಪಾಯಿ ಇದೆ ಅಂತ. ಆಮೇಲೆ ಅವರ ಹತ್ರಾನೂ 50 ರೂಪಾಯಿ ಇತ್ತು. ನಂತರ ಇಬ್ಬರೂ ಊಟ ಮಾಡಿ ಮೇಲೆ ದರ್ಶನ ಮಾಡಿ ಬಂದ್ವಿ. ಇದು ನನಗೆ ಮರೆಯಲಾಗದ ನಟರಾಜ ಸರ್ವಿಸ್'. -ರವಿಶಂಕರ್


ನೀವೂ ಮಾಡಬಹುದು

ಬರೀ ಸ್ಟಾರ್ ಗಳು ಮಾತ್ರವಲ್ಲದೇ, ನೀವು ಕೂಡ ಕಾಲ್ನಡಿಗೆಯಲ್ಲಿ ಸಾಗಿದ ಘಟನೆ ಎಂದಾದರೂ ನಡೆದಿದ್ದರೆ, ಅದನ್ನು ವಿಡಿಯೋ ಮಾಡಿ 'ನಟರಾಜ ಸರ್ವಿಸ್' ಫೇಸ್ ಬುಕ್ ಪೇಜ್ ಅಥವಾ ನಿರ್ದೇಶಕ ಪವನ್ ಒಡೆಯರ್ ಅವರ ಫೇಸ್ ಬುಕ್ ಪೇಜ್ ಗೆ ಅಪ್ ಲೋಡ್ ಮಾಡಬಹುದು.


ವಿಡಿಯೋ ನೋಡಿ

ಈ ಎಲ್ಲಾ ಸ್ಟಾರ್ ಗಳು ತಮ್ಮ-ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು, ಅದನ್ನು ಅವರ ಬಾಯಲ್ಲೇ ಕೇಳಲು ಪವನ್ ಒಡೆಯರ್ ಅವರ ಫೇಸ್ ಬುಕ್ ಪೇಜ್ ಗೆ ಒಂದ್ಸಾರಿ ಭೇಟಿ ಕೊಡಿ. ಫೇಸ್ ಬುಕ್ ಪೇಜ್ ಗೆ ಈ ಲಿಂಕ್ ಕ್ಲಿಕ್ಕಿಸಿ...


English summary
The makers of Kannada Movie 'Nataraja Service' have come up with a unique way of promoting their movie. Director Pawan Wadeyar says that every celebrity would've fallen back on Nataraja Service (a colloquial term for walking in Kannada) atleast once in their life.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada