»   » ಬಿಸಿಬಿಸಿ 'ನೀರ್ ದೋಸೆ'ಯ ಆಡಿಯೋ ರಿಲೀಸ್ ಗೆ ಕೌಂಟ್ ಡೌನ್ ಶುರು

ಬಿಸಿಬಿಸಿ 'ನೀರ್ ದೋಸೆ'ಯ ಆಡಿಯೋ ರಿಲೀಸ್ ಗೆ ಕೌಂಟ್ ಡೌನ್ ಶುರು

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಬೇಡ ಎಂದು ಬಿಟ್ಟು ಎದ್ದೋಗಿದ್ದ 'ನೀರ್ ದೋಸೆ' ಯನ್ನು ತದನಂತರ ಹುಯ್ಯಲು ಜನ ಸಿಗದೆ ಅರ್ಧಕ್ಕೆ ಬಾಕಿಯಾಗಿತ್ತು. ಈ ನಡುವೆ ಭರ್ತಿ ಒಂದೂವರೆ ವರ್ಷ ತಲೆ ಮೇಲೆ ಕೈ ಹೊತ್ತು ಕುಳಿತಿದ್ದ ನಿರ್ದೇಶಕ ವಿಜಯ್ ಪ್ರಸಾದ್ ಅವರು ಕೊನೆಗೂ ಹರಿಪ್ರಿಯ ಅವರನ್ನು ಕರೆತಂದು ದೋಸೆ ಹುಯ್ಯಿಸಿದರು.

ಇದೀಗ ಅಂತಿಮವಾಗಿ ಎಲ್ಲವೂ ಮುಗಿಯುತ್ತಾ ಬಂದಿದ್ದು, ನಿರ್ದೇಶಕ ವಿಜಯ್ ಅವರ ಕನಸಿನ 'ನೀರ್ ದೋಸೆ'ಯನ್ನು ಪ್ರೇಕ್ಷಕರಿಗೆ ಬಡಿಸಲು ದಿನ-ಮುಹೂರ್ತ-ಘಳಿಗೆ ನೋಡುತ್ತಿದ್ದಾರೆ.[ಚಿತ್ರಗಳು : 'ನೀರ್ ದೋಸೆ' ಚಿತ್ರದಲ್ಲಿ ಹರಿಪ್ರಿಯಾ ಹಸಿ ಬಿಸಿ]


ಲೂಸ್ ಮಾದ ಯೋಗೇಶ್ ಅವರನ್ನು ಹಾಕಿಕೊಂಡು 'ಸಿದ್ಲಿಂಗು' ಸಿನಿಮಾ ಮಾಡಿದ ನಂತರ, ನವರಸ ನಾಯಕ ಜಗ್ಗೇಶ್, ಹಿರಿಯ ನಟ ದತ್ತಣ್ಣ, ನಟಿ ಹರಿಪ್ರಿಯ ಮತ್ತು ಸುಮನಾ ರಂಗನಾಥ್ ಅವರನ್ನು ಕಟ್ಟಿಕೊಂಡ ವಿಜಯ್ ಪ್ರಸಾದ್ ಅವರು 'ನೀರ್ ದೋಸೆ' ಎಂಬ ವಿಶೇಷ ಸಿನಿಮಾ ಮಾಡಿದ್ದಾರೆ.


ಅಂದಹಾಗೆ ಕೊನೆಗೂ ಸಿನಿಮಾದ ಕೆಲಸಗಳು ಪೂರ್ತಿಯಾಗಿದ್ದು, ನಾಳೆ (ಜುಲೈ 28) 'ನೀರ್ ದೋಸೆ' ಚಿತ್ರದ ಬಿಸಿ ಬಿಸಿಯಾಗಿರೋ ಆಡಿಯೋ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿತ್ರದ ಹಾಡುಗಳಿಗೆ ಅನೂಪ್ ಸಿಳೀನ್ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಮುಂದೆ ಓದಿ..


'ಸಿದ್ಲಿಂಗು' ಹಾಡು ಸೂಪರ್ ಹಿಟ್

ಈ ಮುಂಚೆ 'ಸಿದ್ಲಿಂಗು' ಚಿತ್ರಕ್ಕೂ ಸಂಗೀತ ನಿರ್ದೇಶಕ ಅನೂಪ್ ಸಿಳೀನ್ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದರು. 'ಸಿದ್ಲಿಂಗು' ಚಿತ್ರದ 'ಎಲ್ಲೆಲ್ಲೋ ಓಡುವ ಮನಸೇ' ಹಾಗೂ 'ರಂಗು ರಂಗು ಸಿದ್ಲಿಂಗು' ಹಾಡುಗಳು ಸೂಪರ್ ಹಿಟ್ ಆಗಿದ್ದವು. ಇದೀಗ 'ನೀರ್ ದೋಸೆ'ಯಲ್ಲಿ ಯಾವ ರೀತಿ ಸಂಗೀತದ ಆಲಾಪನೆಗಳು ಇರುತ್ತವೆ ಅನ್ನೋದು ನಾಳೆ ಗೊತ್ತಾಗಲಿದೆ.[ಜಗ್ಗೇಶ್ ರ 'ನೀರ್ ದೋಸೆ'ಯ ಸಖತ್ 'ಸ್ಯಾಂಪಲ್' ಡೈಲಾಗ್ ಸೂಪರ್]


ಸಖತ್ ಡೈಲಾಗ್

'ಸಿದ್ಲಿಂಗು' ಚಿತ್ರದಲ್ಲಿದ್ದಂತೆ 'ನೀರ್ ದೋಸೆ' ಚಿತ್ರದಲ್ಲೂ ಸಖತ್ ಡಬಲ್ ಮೀನಿಂಗ್ ಡೈಲಾಗ್ ಗಳು ಇರುತ್ತವೆ ಅನ್ನೋದನ್ನ ನಾವು ಈಗಾಗಲೇ ನಿಮಗೆ ತಿಳಿಸಿದ್ದೇವೆ. ಅದರಂತೆ ಅಭಿಮಾನಿಗಳು ಕೂಡ ಈ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದು, ಚಿತ್ರದ ಬಿಡುಗಡೆಗೆ ಕಾತರದಿಂದ ಕಾದಿದ್ದಾರೆ.[ಜಗ್ಗೇಶ್ ರ 'ನೀರ್ ದೋಸೆ' ಪಿಕ್ಚರ್ನ್ಯಾಗ ಡೈಲಾಗ್ ಹೆಂಗೆಲ್ಲಾ ಐತಿ ಗೊತ್ತೇನ್ರೀ?]


ಭಾವನೆಗಳನ್ನು ಬೆಸೆಯುವ 'ನೀರ್ ದೋಸೆ'

'ನೀರ್ ದೋಸೆ' ಚಿತ್ರ ಖಂಡಿತವಾಗ್ಲೂ ಪ್ರೇಕ್ಷಕರ ಭಾವನೆಗಳನ್ನು ಬೆಸೆಯುವ ಚಿತ್ರವಾಗಲಿದೆ ಅನ್ನೋದು ನವರಸ ನಾಯಕ ಜಗ್ಗೇಶ್ ಅಭಿಪ್ರಾಯ.[ಅರೆರೆ.! ಜಗ್ಗೇಶ್ ಮತ್ತೆ ಮದುವೆ ಆದ್ರಾ ಏನ್ ಕತೆ]


ಮ್ಯೂಸಿಕ್ ನಲ್ಲೂ ಮಸ್ತಿ

ಚಿತ್ರದ ಹಾಡುಗಳನ್ನು ಕಂಪೋಸ್ ಮಾಡುವ ಸಮಯದಲ್ಲೂ ಸಂಗೀತ ನಿರ್ದೇಶಕ ಅನೂಪ್ ಸಿಳೀನ್ ಮತ್ತು ನಿರ್ದೇಶಕ ವಿಜಯ್ ಪ್ರಸಾದ್ ಅವರ ಎಷ್ಟು ಮೋಜು ಮಸ್ತಿ ಮಾಡುತ್ತಿದ್ದರು ಎಂಬುದಕ್ಕೆ ಈ ಚಿತ್ರ ಸಾಕ್ಷಿ.


ಮೊಪೆಡ್ ಗೂ ಪ್ರಮುಖ ಪಾತ್ರ

ಈ ಮೊಪೆಡ್ ಇಡೀ 'ನೀರ್ ದೋಸೆ' ಚಿತ್ರದಲ್ಲಿ ಬಹು ಮುಖ್ಯವಾದ ಪಾತ್ರ ವಹಿಸುತ್ತಿದೆ.


ದಿಟ್ಟ ನಿರ್ಧಾರ ತೆಗೆದುಕೊಂಡ ಹರಿಪ್ರಿಯ

ಸದಾ ಗರತಿ ಗಂಗಮ್ಮನಂತೆ ಕಾಣಿಸಿಕೊಳ್ಳುತ್ತಿದ್ದ ನಟಿ ಹರಿಪ್ರಿಯಾ ಅವರು ಈ ಚಿತ್ರದಲ್ಲಿ ಹಸಿ-ಬಿಸಿಯಾಗಿ ಕುಮುದಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಇದೇ ಮೊದಲ ಬಾರಿಗೆ ಸಖತ್ತಾಗಿ ಬೆಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಒಟ್ನಲ್ಲಿ ಹರಿಪ್ರಿಯ ಅವರ ದಿಟ್ಟ ನಿರ್ಧಾರಕ್ಕೆ ಅಭಿಮಾನಿಗಳು ಓಕೆ ಎಂದಿದ್ದಾರೆ.[ಸಿಗರೇಟ್ ಸೇದಿ ಆರೋಗ್ಯ ಕೆಡಿಸಿಕೊಂಡ 'ನೀರ್ ದೋಸೆ' ಬೆಡಗಿ]


English summary
Kannada movie 'Neer Dose' shooting completed. And Audio releasing on July 28th. Kannada Actor Jaggesh, Actreess Haripriya, Actress Suman Ranganath in the lead role. The movie is directed by 'Sidlingu' fame Vijaya Prasad.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada