»   » ವಿದೇಶದಲ್ಲಿ 'ಘಮ ಘಮ' ಅಂತಿದೆ ಜಗ್ಗೇಶ್ 'ನೀರ್ ದೋಸೆ'

ವಿದೇಶದಲ್ಲಿ 'ಘಮ ಘಮ' ಅಂತಿದೆ ಜಗ್ಗೇಶ್ 'ನೀರ್ ದೋಸೆ'

Posted By: ಭರತ್ ಕುಮಾರ್
Subscribe to Filmibeat Kannada

ನವರಸ ನಾಯಕ ಜಗ್ಗೇಶ್ ಅಭಿನಯದ 'ನೀರ್ ದೋಸೆ' ಚಿತ್ರಕ್ಕೆ ಸ್ಯಾಂಡಲ್ ವುಡ್ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದರು. ಭಯಂಕರ ಡೈಲಾಗ್ ಗಳ ಸರಮಾಲೆಯೇ ಇದ್ದ 'ನೀರ್ ದೋಸೆ'ಗೆ ವಿಮರ್ಶಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇನ್ನು ಸಾಲು ಸಾಲು ಬಂದ್ ಗಳ ಮಧ್ಯೆ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆ ಬಿಸ್ ನೆಸ್ ಮಾಡಿದ ಈ ಚಿತ್ರ, ಹಾಕಿದ ಬಂಡವಾಳಕ್ಕಿಂತ ಹೆಚ್ಚು ಲಾಭ ಮಾಡಿತ್ತು.

ಇದು ಸ್ವದೇಶಿ ನೆಲದಲ್ಲಿ 'ನೀರ್ ದೋಸೆ' ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ. ಈಗ ಈ 'ನೀರ್ ದೋಸೆ' ವಿದೇಶಿ ನೆಲಕ್ಕೆ ಕಾಲಿಟ್ಟಿದ್ದು, ಅಲ್ಲಿಯೂ ಘಮ ಘಮ ಅಂತಿದೆ. ಹೌದು, ಯುಎಸ್ಎ ಹಾಗೂ ಕೆನೆಡಾ ದೇಶಗಳಲ್ಲಿ 'ನೀರ್ ದೋಸೆ' ಸಿನಿಮಾ ಬಿಡುಗಡೆಯಾಗಿದ್ದು, ಅಲ್ಲಿನ ಪ್ರೇಕ್ಷಕರು ಚಿತ್ರವನ್ನ ನೋಡಿ ಎಂಜಾಯ್ ಮಾಡ್ತಿದ್ದಾರೆ.[ಬಾಡೂಟದ ಜೊತೆ 'ನೀರ್ ದೋಸೆ' ಸವಿದಂತೆ ಇದೇ ಜಗ್ಗೇಶ.!]


'ಸಿದ್ಲಿಂಗು' ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ನಿರ್ದೇಶನ ಮಾಡಿದ್ದ 'ನೀರ್ ದೋಸೆ' ಚಿತ್ರದಲ್ಲಿ ಜಗ್ಗೇಶ್, ಹರಿಪ್ರಿಯಾ, ದತ್ತಣ್ಣ ಹಾಗೂ ಸುಮನ್ ರಂಗನಾಥ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಹಾಗಾದ್ರೆ, ವಿದೇಶದಲ್ಲಿ 'ನೀರ್ ದೋಸೆ' ಸಿನಿಮಾ ಎಲ್ಲೆಲ್ಲಿ ಪ್ರದರ್ಶನವಾಗ್ತಿದೆ ಅಂತ ನೋಡೋಣ ಬನ್ನಿ....


ವಿದೇಶದಲ್ಲಿ 'ನೀರ್ ದೋಸೆ' ರಿಲೀಸ್

ಸೆಪ್ಟೆಂಬರ್ 2 ರಂದು ಕರ್ನಾಟಕ ರಾಜ್ಯಾದ್ಯಂತ ಬಿಡುಗಡೆಯಾಗಿದ್ದ 'ನೀರ್ ದೋಸೆ' ಸಿನಿಮಾ, ಈಗ ವಿದೇಶದಲ್ಲಿ ರಿಲೀಸ್ ಆಗಿದೆ. ರಾಜ್ಯದಲ್ಲಿ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಈ ಚಿತ್ರವನ್ನ ಈಗ ಹೊರ ದೇಶದಲ್ಲಿರುವ ಪ್ರೇಕ್ಷಕರು ಕೂಡ ನೋಡುವ ಅವಕಾಶ ಸಿಕ್ಕಿದೆ.['ನೀರ್ ದೋಸೆ' ಸವಿಯಲು ಗರ್ಲ್ ಫ್ರೆಂಡ್ ಜೊತೆ ಹೋದ್ರೆ 'ಗುಮ್ಮೋದು' ಖಚಿತ!]


'ಯುಎಸ್ಎ'ನಲ್ಲಿ 'ನೀರ್ ದೋಸೆ'

ಅಟ್ಲಾಂಟಾ ಸೇರಿದಂತೆ ಯುಎಸ್ಎ ದೇಶದಾದ್ಯಂತ 'ನೀರ್ ದೋಸೆ' ಸಿನಿಮಾ ಅಕ್ಟೋಬರ್ 14 ರಂದು ಬಿಡುಗಡೆಯಾಗಿದ್ದು, ಸುಮಾರು 29ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಚಿತ್ರ ಪ್ರದರ್ಶನವಾಗುತ್ತಿದೆ.


'ಕೆನಡಾ'ದಲ್ಲೂ ಜಗ್ಗೇಶ್ ಸಿನಿಮಾ

ಯುಎಸ್ಎನಲ್ಲಿ ಮಾತ್ರವಲ್ಲ ಕೆನಡಾದಲ್ಲೂ ಜಗ್ಗೇಶ್ ಅವರ ಚಿತ್ರ ತೆರೆಕಂಡಿದೆ.


'ಕಸ್ತೂರಿ ಮಿಡಿಯಾ' ವಿತರಣೆ

'ನೀರ್ ದೋಸೆ' ಚಿತ್ರವನ್ನ ಯುಎಸ್ಎ ಹಾಗೂ ಕೆನಡಾ ದೇಶಗಳಲ್ಲಿ 'ಕಸ್ತೂರಿ ಮಿಡಿಯಾ' ಸಂಸ್ಥೆ ಬಿಡುಗಡೆ ಮಾಡಿದೆ.


ವಾರಾಂತ್ಯದಲ್ಲಿ 'ನೀರ್ ದೋಸೆ' ರುಚಿ

ಅಕ್ಟೋಬರ್ 14, ಅಕ್ಟೋಬರ್ 15, ಹಾಗೂ ಅಕ್ಟೋಬರ್ 16 ರಂದು 'ನೀರ್ ದೋಸೆ' ಪ್ರದರ್ಶನವಾಗಲಿದ್ದು, ಈ ವಾರಾಂತ್ಯದಲ್ಲಿ ಯುಎಸ್ಎ ಕನ್ನಡ ಚಿತ್ರಪ್ರೇಮಿಗಳು 'ನೀರ್ ದೋಸೆ'ಯನ್ನ ಸವಿಯಬಹುದು.


English summary
Kannada Movie 'Neer Dose' Screening USA and Canada From october 14th. The Movie Starrer Jaggesh, Haripriya, Suman Ranganath, Dattanna, And Directed By 'Sidlingu' Fame Director Vijaya Prasad. So Don't Miss This Blockbuster Comedy Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada